210dd089-105a-4639-8564-a108b6e94d68

ನೈತಿಕ ಶಿಕ್ಷಣಕ್ಕೆ ಒತ್ತು ನೀಡಿ

ಹಾಲ್ವಿ ಮಹಾಂತ ಶ್ರೀ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ ೨೫- ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ ವೀರಶೈವ ವಿದ್ಯಾ ವರ್ಧಕ ಸಂಘದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಹತ್ವ ನೀಡುವ ಮೂಲಕ ಉತ್ತಮ ಸಮಾಜ ಕಟ್ಟುವ ಕೆಲಸ ನಡೆಯಬೇಕಿದೆ ಎಂದು ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಶ್ರೀಗಳು ಕರೆ ನೀಡಿದರು.

ಅವರು  ಸಿರುಗುಪ್ಪ ನಗರದ ವಿವೇಕಾನಂದ ಪಬ್ಲಿಕ್ ವಸತಿ ಶಾಲೆಯ ಬೆಳ್ಳಿ ಮಹೋತ್ಸವ ಬೆಳದಿಂಗಳ ಬೆಳಗು ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಾ ರಾಜ್ಯದಲ್ಲಿ ಶ್ರೀಗಳ ತ್ಯಾಗ ಮತ್ತು ಶ್ರಮದ ಫಲವಾಗಿ ಪ್ರಾರಂಭಗೊಂಡ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ ಬೆಳಗಾವಿಯ ಕೆ ಎಲ್ ಇ ವಿದ್ಯಾ ಸಂಸ್ಥೆ ಬಾಗಲಕೋಟೆಯ ಬಸವೇಶ್ವರ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸುವಲ್ಲಿ ಹಾನಗಲ್ಲು ಶ್ರೀಗಳು ಸಮಾಜವನ್ನು ಒಗ್ಗೂಡಿಸಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಅವರ ಶ್ರಮಕ್ಕೆ ಸರಿಯಾದ ಫಲ ದೊರೆಯಬೇಕಾದರೆ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ವೀರಶೈವ ಸಮಾಜದ ಪ್ರತಿಯೊಬ್ಬರು ಒಗ್ಗಟ್ಟಾಗಿ ಕಂಕಣ ಕಟ್ಟಿ ನಿಂತು ಸಂಸ್ಥೆಗಳನ್ನು ಬೆಳೆಸಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಅಗತ್ಯ ಶಿಕ್ಷಣ ಜೊತೆಗೆ ನೈತಿಕ ಮೌಲ್ಯಗಳನ್ನು ತುಂಬುವ ಮೂಲಕ ಶಿಕ್ಷಣ ಸಂಸ್ಥೆಗಳ ಸೇವೆಯನ್ನು ಸಾರ್ಥಕ ಗೊಳಿಸಬೇಕಿದೆ ಎಂದರು.

ಒಳ ಬಳ್ಳಾರಿ ಚನ್ನಬಸವೇಶ್ವರ ಶಿವಯೋಗಿಗಳ ಶ್ರೀಮಠದ ನೂತನ ಪೀಠಾಧ್ಯಕ್ಷ ಬಸವಲಿಂಗ ಶ್ರೀಗಳು ಮಾತನಾಡಿ ನಾಡಿನಲ್ಲಿರುವ ವೀರಶೈವ ಮಠಗಳು ಸಮಾಜವನ್ನು ಸರಿದಾರಿಯಲ್ಲಿ 100 ವರ್ಷಗಳ ದಾಟಿ ಮುನ್ನಡೆಯುತ್ತಿದೆ ಸಂತಸದ ಸಂಗತಿಯಾಗಿದೆ ಎಂದರು

ಕೊಪ್ಪಳ ಸಂಸತ್ ಕರಡಿ ಸಂಗಣ್ಣ ಅವರು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡಿರುವ ಈ ಸಂಸ್ಥೆಯು ಒಂದನೇ ತರಗತಿಯಿಂದ ತಾಂತ್ರಿಕ ಶಿಕ್ಷಣದವರೆಗೆ ಶಿಕ್ಷಣವನ್ನು ನೀಡುತ್ತಾ ಶೈಕ್ಷಣಿಕ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ ಎಂದರು .

ವೀರಶೈವ ಸಂಘದ ಅಧ್ಯಕ್ಷ ಆರ್ ರಾಮನಗೌಡ ಅವರು ಮಾತನಾಡಿದರುಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರು ಸಂಘದ ಶತಮಾನೋತ್ಸವ ಸ್ಮರಣೆಗಾಗಿ ಸಾಂಸ್ಕೃತಿಕ ಬಯಲು ರಂಗ ಮಂಟಪಕ್ಕೆ ಅಡಿಗಲ್ಲು ಶಂಕು ಸ್ಥಾಪಿಸಿ ನೆರವೇರಿಸಿದರು.

ಆಠದ ಮೈದಾನಕ್ಕೆ ರಕ್ಷಣಾ ಗೋಡೆ ನಿರ್ಮಾಣಕ್ಕೆ ಅಲ್ಲಂ ಬಸವರಾಜ ನೀಡಿದರುಮಾಜಿ ಶಾಸಕ ಟಿ ಎಂ ಚಂದ್ರಶೇಖರಯ್ಯ ಅವರು ಪರ ವಿದ್ಯಾರ್ಥಿಗಳ ಸಾಮೂಹಿಕ ಊಟದ ವ್ಯವಸ್ಥೆಯ ಶೆಡ್ ಗೆ ಚಾಲನೆ ನೀಡಿದರು.

ಸ್ಮರಣ ಸಂಚಿಕೆಯನ್ನು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಸವನಗೌಡ ಅವರು ಬಿಡುಗಡೆಗೊಳಿಸಿದರುಸಂಘದ ಸಹ ಕಾರ್ಯದರ್ಶಿ ದರೂರು ಶಾಂತನಗೌಡ ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷರು ಮಾತನಾಡಿದರು ಮಹೇಶ್ವರ ಸ್ವಾಮಿ ಸಂಘದ ಪಿ ಯೋಗಿರಾಜ ಬಾಗೇವಾಡಿ ದಮ್ಮೂರು ಶಂಕ್ರಪ್ಪ ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ಸೇರಿದಂತೆ ಸಂಘದ ಪದಾಧಿಕಾರಿಗಳು ಶಾಲಾ ಆಡಳಿತ ಮಂಡಳಿಯ ಕಾರ್ಯಕಾರಿಣಿ ಸದಸ್ಯರು ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!