7ef728d8-d169-4d12-acab-459c611eef63

 

            ಪಂಚಮಸಾಲಿ ಸಮಾಜ ಯತ್ನಾಳ ಜೊತೆಗಿದೆ

            ಪಂಚಮಸಾಲಿ ಸಮಾಜವನ್ನು

             ಬಿಜೆಪಿ ಹೈಕಮಾಂಡ ಎದುರು ಹಾಕಿಕೊಳ್ಳೊದಿಲ್ಲಾ

                  ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ

ಕರುನಾಡ ಬೆಳಗು ಸುದ್ದಿ
ಕೊಪ್ಪಳ , ೨೯- ಸ್ವಪಕ್ಷದವರ ವಿರುದ್ಧವೇ ಶಾಸಕ ಯತ್ನಾಳ್ ವಾಗ್ದಾಳಿ ಪ್ರಕರಣ ಪಂಚಮಸಾಲಿ ಸಮಾಜವನ್ನು ಬಿಜೆಪಿ ಹೈಕಮಾಂಡ್ ಎದುರು ಹಾಕಿಕೊಳ್ಳೊದಿಲ್ಲಾ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಅವರು ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಈಗಾಗಲೇ ಒಂದು ಸಲ ಎದುರು ಹಾಕಿಕೊಂಡು ತೊಂದರೆ ಅನುಭವಿಸಿದ್ದಾರೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಂಚಮಸಾಲಿ ಸಮಾಜದ ನಾಯಕ ಅವರ ಬೆನ್ನ ಹಿಂದೆ ಪಂಚಮಸಾಲಿ ಸಮಾಜ ಇದೆ ಎಂದರು.
ಅವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲಾ ಮಾಡಬಾರದ ಯಾವುದೇ ಕೆಲಸ ಮಾಡಿಲ್ಲಾ ಆದ್ರೆ ಅವರು ನಿಷ್ಟುರವಾಗಿ ಮಾತನಾಡುತ್ತಾರೆ , ಅವರಿಗೆ ಆಗಿರೋ ಅನ್ಯಾಯ ಮತ್ತು ನೋವಿನ ಬಗ್ಗೆ ಮಾತನಾಡಿದ್ದಾರೆ ಹೀಗಾಗಿ ಬಿಜೆಪಿ ಹೈಕಮಾಂಡ್ ಅವರನ್ನು ಕರೆದು ಮಾತನಾಡಬೇಕು ಅವರಿಗೆ ಇರೋ ನೋವನ್ನು ಕೇಳಿ,ಅದಕ್ಕೆ ಪರಿಹಾರ ನೀಡೋ ಕೆಲಸ ಮಾಡಬೇಕು .
ಕುತಂತ್ರ ಮೂಲಕ ಅವರಿಗೆ ತೊಂದರೆ ಕೊಟ್ಟರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಆಗ ಅವರ ಬೆನ್ನು ಹಿಂದೆ ನಮ್ಮ ಸಮಾಜ ಇರುತ್ತದೆ ತಪ್ಪು ಸಂದೇಶ ಹೋಗದಂತೆ ಅವರ ಹೈಕಮಾಂಡ್ ನೋಡಿಕೊಳ್ಳಬೇಕು ಅನಂತಕುಮಾರ್ ಕಾಲದಿಂದಲೂ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದರು.
ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಯಾರು ಅಂತಲೂ ನನಗೆ ಗೊತ್ತಿಲ್ಲಾ ಎಂದ ಜಯಮೃತುಂಜಯ ಸ್ವಾಮಿ.ಯಾವುದೂ ಊರಲ್ಲಿ ಕಾರ್ಯಕ್ರಮ ಆಗ್ತಾ ಇರ್ತಾವೆ ನಾವು ಹೋಗೋಕೆ ಆಗುತ್ತಾ ಎಂದು ದಾವಣಗೆರೆ ಸಮಾವೇಶವನ್ನು ಸ್ವಾಮೀಜಿ ವಿರೋಧಿಸಿದರು.
ಅಯೋಧ್ಯಾ ಶ್ರೀರಾಮ ಉದ್ಘಾಟನೆಗೆ ಆಹ್ವಾನ ಬಂದಿದೆ ನನಗೂ ಸೇರಿದಂತೆ ಬೇರೆ ಬೇರೆ ಸ್ವಾಮಿಜಿಗಳಿಗೆ ಆಹ್ವಾನ ಬಂದಿದೆ. ನಾನು ಸಹ ಉದ್ಘಾಟನೆಗೆ ತೆರಳುವೆ ಎಂದ ಜಯಮೃತ್ಯುಂಜಯ ಸ್ವಾಮಿಜಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!