IMG-20231203-WA0030

ಪಂಚ ರಾಜ್ಯ  ಬಿಜೆಪಿ ಭಾರಿ ಜಯ ಕುಷ್ಟಗಿ ಬಿಜೆಪಿ

ಕುಷ್ಟಗಿಯಲ್ಲಿ ಕಾರ್ಯಕರ್ತರಿಂದ ಸಂಭ್ರಮ

ಕರುನಾಡ ಬೆಳಗು ಸುದ್ದಿ
ಕುಷ್ಟಗಿ.ಡಿ.03; ಪಂಚರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಡಿ.03 ರವಿವಾರ ನಡೆದ 4 ರಾಜ್ಯದ ಫಲಿತಾಂಶದಲ್ಲಿ ಮೂರು ರಾಜ್ಯದಲ್ಲಿ ಬಿಜೆಪಿ ಪಕ್ಷ ಜಯಬೇರಿ ಭಾರಿಸಿದ್ದರಿಂದ ಕುಷ್ಟಗಿ ತಾಲೂಕು ಘಟಕದ ಬಿಜೆಪಿ ಕಾರ್ಯಕರ್ತರು ಸಂಜೆ ಇಲ್ಲಿನ ಮಾರುತಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತಿಸಗಢ ರಾಜ್ಯದಲ್ಲಿ ಇತ್ತೀಚೆಗೆ ವಿಧಾನಸಭಾ ಚುನಾವಣೆಯಲ್ಲಿ ಮತದಾನ ನಡೆದಿತ್ತು, ರವಿವಾರ 4 ರಾಜ್ಯಗಳ ಫಲಿತಾಂಶ ಹೊರಬಿದ್ದುಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸಗಢ ರಾಜ್ಯಗಳಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತು ಪಕ್ಷಕ್ಕೆ ಆನೆ ಬಲ ಬಂದತ್ತಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರವಹಿಸಿಕೊಳ್ಳುವದು ಸುಲಭವಾಗಿದೆ ಎಂದು ಬಿಜೆಪಿ ಪಕ್ಷದ ಹಿರಿಯ ಮುಖಂಡ ಕೆ.ಮಹೇಶ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡ ರಾದ ಚಂದ್ರಕಾಂತ ವಡಗೇರಿ, ರಮೇಶ ಕೊಳ್ಳಿ, ಶಿವಕುಮಾರ ಗಂಧದಮಠ, ಅಶೋಕ ಬಳೂಟಗಿ, ಸೈಯದ್ ಅಮೀನುದ್ದೀನ್ ಮುಲ್ಲಾ, ಪುರಸಭೆ ಸದಸ್ಯ ಬಸವರಾಜ ಬುಡಕುಂಟಿ, ಆಲಂ ಮೋದಿ, ಶಿವನಗೌಡ ದೋಟಿಹಾಳ, ವಿಜಯ ದೇಸಾಯಿ, ಪಾಂಡುರಂಗ ಆಶ್ರೀತ್, ಜಯತೀರ್ಥ ಸವದಿ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಮಿಜೋರಾಂ ರಾಜ್ಯದ ಫಲಿತಾಂಶ ಸೋಮವಾರ ಹೊರಬೀಳಲಿದೆ.

Leave a Reply

Your email address will not be published. Required fields are marked *

error: Content is protected !!