
ಪಕ್ಷ ನಿಷ್ಠ ಅಮರೇಗೌಡ ಬಯ್ಯಾಪುರಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 01- ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಜಿ ಸಚಿವ ಹಾಗೂ ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ ನೇಮಕವಾಗಿದ್ದಾರೆ.
ನೇಮಕ ಮಾಡಿ ಆದೇಶ ಹೊರಡಿಸಿರುವ ಕೆ,ಸಿ ವೇಣುಗೋಪಾಲ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾಧ್ಯಕ್ಷರಾಗನ್ನಾಗಿ ನೇಮಿಸಿದ್ದಾರೆ.
ಸಚಿವ ಶಿವರಾಜ ಎಸ್ ತಂಗಡಗಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷದ್ದರು, ಸಚಿವರಾದ ನಂತರ ಅಧ್ಯಕ್ಷರ ಅವದಿ ಮುಗಿದರು ಸಹ ಬದಲಾಗಿರಲಿಲ್ಲಾ .
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹಲವಾರು ಜಿಲ್ಲೆಯ ಅಧ್ಯಕ್ಷರನ್ನು ನೇಮಕ ಮಾಡಿರು ಪಕ್ಷ ಇವರನ್ನು ಸಹ ನೇಮಕ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಲೋಕ ಸಭಾ ಅಭ್ಯರ್ಥಿ ಆಕಾಂಕ್ಷಿ ಸಹ ಆಗಿದ್ದ ಬಯ್ಯಾಪುರ ಅವರು ಕುಷ್ಟಗಿ ಕ್ಷೇತ್ರದಿಂದ 2008 ಹಾಗೂ 2018ರಲ್ಲಿ ಶಾಸಕರಾಗಿದ್ದರು. ಹಿಂದಿನ ಚುನಾವಣೆಯಲ್ಲಿ ಸೋಲು ಕಂಡಿದ್ದರೂ ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷ ಈಗ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡಿದೆ.
15 ದಿನಗಳ ಅಂತರದಲ್ಲಿ ಕುಷ್ಟಗಿ ಕ್ಷೇತ್ರಕ್ಕೆ ಮತ್ತೊಂದು ಬಂಪರ್ ಅವಕಾಶ ಲಭಿಸಿದಂತಾಗಿದೆ. ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಹಸನಸಾಬ ದೋಟಿಹಾಳ ಅವರನ್ನು ಕಾಡಾ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಅವರ ನೇಮಕದ ಕೆಲವೇ ದಿನಗಳಲ್ಲಿ ಬಯ್ಯಾಪುರ ಅವರ ನೇಮಕದ ಆದೇಶ ಹೊರಬಿದ್ದಿದೆ.