
ಪತ್ರಿಕಾ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 2- ಚಿಕ್ಕ ಬಳ್ಳಾರಿ ನಾಗಪ್ಪ ಅಭಿಮಾನ ಬಳಗದಿಂದ ಪತ್ರಿಕಾ ದಿನಾಚರಣೆ ಮತ್ತು ವೈದ್ಯರ ದಿನಾಚರಣೆ ಅಂಗವಾಗಿ ನಿನ್ನೆ ಪತ್ರಕರ್ತ ಮತ್ತು ವೈದ್ಯರಿಗೆ ಸಿಹಿ ಹಂಚಿ ಸನ್ಮಾನಿಸಿದರು.
ನಗರದ ಆಸ್ಪತ್ರೆಗಳಿಗೆ ತೆರಳಿ ವೈದ್ಯರಿಗೆ ಸನ್ಮಾನಿಸಿ ಮಾತನಾಡಿದ ಮುಖಂಡ ಚಿಕ್ಕ ಬಳ್ಳಾರಿ ನಾಗಪ್ಪ ವೈದ್ಯ ನಾರಾಯಣ ಹರಿಎಂಬುವಂತೆ ವೈದ್ಯರು ದೇವರ ಸಮಾನ ಎಂತಹ ತುರ್ತು ಸಂದರ್ಭಗಳಲ್ಲಿ ತಮ್ಮ ಆರೋಗ್ಯ ಮತ್ತು ತಮ್ಮ ಕುಟುಂಬಕ್ಕೂ ಸಮಯ ನೀಡದೆ ರೋಗಿಗಳ ಆರೋಗ್ಯವೆ ಮುಖ್ಯ ವೆಂದು ತಮ್ಮ ಸೇವೆಮಾಡುವುದರ ಮುಖೇನ ವೈದ್ಯರು ದೇವರಾಗಿದ್ದಾರೆ.
ದೇವರು ನಮಗೆ ಕಾಣಲ್ಲ ವೈದ್ಯರಮುಖದಲ್ಲಿ ನಾವು ದೇವರನ್ನು ಕಾಣಬೇಕು, ಪತ್ರಕರ್ತರು ಸಹ ಇವತ್ತಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳು ಅತಿಹೆಚ್ಚಾಗಿರೊದರಿಂದ ನಿಜವಾಗಲು ಪತ್ರಿಕೆ ನಡೆಸುವುದು ಸವಾಲಿನ ವಿಷಯವಾಗಿದೆ.
ಸಮಾಜದಲ್ಲಿ ಪತ್ರಕರ್ತರು ಅಷ್ಟೇ ಒತ್ತಡಗಳ ಮದ್ಯ ಸತ್ಯಾಸತ್ಯತೆ ಮಹತ್ವದ ಸುದ್ದಿ ಮಾಡುತ್ತಾ ಸಮಯವಿಲ್ಲದೆ ಸಮಾಜದಲ್ಲಿ ನಡೆಯುವ ಒರೆಕೊರೆ ತಿದ್ದು ಕೆಲಸ ಮಾಡುತ್ತಿದ್ದಾರೆ ಪತ್ರಿಕಾದಿನಾಚರಣೆ ಅಂಗವಾಗಿ ಇಂದು ಪತ್ರಕರ್ತರನ್ನ ಗೌರವಿಸಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.