
ಪತ್ರಿಕಾ ವೃತ್ತಿ ಪವಿತ್ರವಾಗಿದೆ : ಪತ್ರಕರ್ತ ಕೆ. ನಿಂಗಜ್ಜ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 15- ಪತ್ರಿಕಾ ವೃತ್ತಿ ಪವಿತ್ರವಾಗಿದೆ ಸಮಾಜಕ್ಕಾಗಿ ನಾವು ಎಂಬ ಭಾವನೆ ಮುಖ್ಯವಾಗಿರಬೇಕು ಎಂದು ಮಾಧ್ಯಮ ಅಕಾಡೆಮಿ ಸದಸ್ಯ ಹಿರಿಯ ಪತ್ರಕರ್ತ ಕೆ. ನಿಂಗಜ್ಜ ಹೇಳಿದರು.
ನಗರದ ರೋಟರಿ ಸಂಸ್ಥೆ ಕಚೇರಿಯಲ್ಲಿ ಪತ್ರಿಕಾ ದಿನಾಚರಣೆ ಸಮಯದಲ್ಲಿ ಗೌರವ ಸರ್ಮಪಣೆ ಸ್ವಿಕರಿಸಿ ಮಾತನಾಡಿ ಪತ್ರಕರ್ತರಾದವರು ವಸ್ತುಸ್ಥಿತಿ ಅರಿತು ನಿಷ್ಟುರತೆಯಿಂದ ವರದಿ ಮಾಡಬೇಕು ಎಂದರು.
ರೋಟರಿ ಸಂಸ್ಥೆ ಯ ಅಸಿಸ್ಟೆಂಟ್ ಗವರ್ನರ್ ಮಹೇಶ ಸಾಗರ, ಅಧ್ಯಕ್ಷತೆ ವಹಿಸಿಸಿದ್ದ ಅಧ್ಯಕ್ಷ ಟಿ.ಆಂಜನೇಯ ಮಾತನಾಡಿದರು.
ಪತ್ರಿಕೆ ವರದಿಗಾರ ಚಂದ್ರಶೇಖರ್ ಮುಕ್ಕುಂದಿ, ನ್ಯೂಸ್ ಚಾನೆಲ್ ವರದಿಗಾರ ಬಿ. ದೇವರಾಜ್ ಗೌರವಿಸಲಾಯಿತು.
ರೋಟರಿ ಕಾರ್ಯದರ್ಶಿ ವಾಸು ಕೊಳಗದ ಮಾತನಾಡಿದರು.
ಮಾಜಿ ಅಧ್ಯಕ್ಷ ಸಲಾಹುದ್ದೀನ್, ಗುರುರಾಜ್,ಶ್ರೀಧರ್ ನಾಯಕ್,ಎ. ಶಿವಕುಮಾರ, ಎಚ್. ಎಮ್. ಮಂಜುನಾಥ,ಡಾ.ಎಂ ಟಿ ಮಹಾಂತೇಶ, ಡಾ.ಎಸ್ .ಬಿ.ಗೌಡರ್ ಉಪಸ್ಥಿತರಿದ್ದರು.