
ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯ : ಡಾ.ಬಸವರಾಜ ಕ್ಯಾವಟರ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 18- ಪರಿಸರ ಸ್ವಚ್ಛವಾಗಿರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಸಾರ್ವಜನಿಕರು ಹಾಕಿದ ಬ್ಲಾಸ್ಟಿಕ್ ಬಾಟಲಿ ಸೇರಿ ಕಸವನ್ನು ಗುರುವಾರ ಬೆಳಗ್ಗೆ ಸ್ವಚ್ಛಗೊಳಿಸಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2014 ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಸ್ವಚ್ಛತಾ ಮಿಷನ್ ಆರಂಭಿಸಿದರು. ಸ್ವಚ್ಛತೆ ಬಗ್ಗೆ ಜನರಿಗೆ ಮನವರಿಕೆ ಮಾಡುವ ಮೂಲಕ ಸ್ವಚ್ಛ ಭಾರತ ನಿರ್ಮಾಣ ಮಾಡುತ್ತಿದ್ದಾರೆ. ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು. ಆದ್ದರಿಂದ ಮನೆ ಸೇರಿ ಸುತ್ತಲಿನ ಪರಿಸರದಲ್ಲಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.
ಬಹಿರ್ದೆಸೆ ಮುಕ್ತ ದೇಶ ನಿರ್ಮಾಣದ ಗುರಿ ಹೊಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಮಿಷನ್ ನಡಿ ವೈಯಕ್ತಿಕ ಶೌಚಾಲಯ ಹಾಗೂ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಆದ್ದರಿಂದಲೇ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣವಾಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಯನ್ನು ತಿಳಿಸಿದರು.
ಬಿಜೆಪಿ ಮುಖಂಡರಾದ ಬಸವರಾಜ ಗೌರ, ವಕೀಲ ಪ್ರಕಾಶ್ ಪರ್ವತಗೌಡ, ಡಾ. ಕವಿ ಪಾಟೀಲ್, ಸುನೀಲ್ ಹೆಸರೂರು, ರಮೇಶ್ ಕವಲೂರು, ವಿ.ಬಿ.ಅಂಗಡಿ, ರಾಜೇಂದ್ರ ಕುಮಾರ್, ಅಂಬರೇಶ್ ಮುರಳಿ, ಅಸ್ಲಾಂಪಾಷಾ, ಮಲ್ಲಿಕಾರ್ಜುಕಟ್ಟಿ, ಸಂತೋಷ್, ಮಂಜುನಾಥ ಗುದಗಿ, ಮಾರುತಿ ನಾಯಕ್, ಸದ್ದಾಂ ಖಾಜಿ, ಮಹೆಬೂಬ್ ಕರಡಿ, ಮಂಜುನಾಥ್ ಉಲ್ಲತ್ತಿ, ಚನ್ನಬಸವ ಗಾಳಿ, ಬಿಜೆಪಿ- ಜೆಡಿಎಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.