
ಪಾಲಕರು ಮಕ್ಕಳಿಗೆ ಸಂಪತ್ತು ಮಾಡುವದು ಬೇಡ ಮಕ್ಕಳನೇ ಸಂಪತ್ತುನ್ನಾಗಿ ಮಾಡಿ : ಅಭಿನವ ಗವಿ ಶ್ರೀಗಳು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 31- ಎಲ್ಲಾ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೂಡಿಸುವದರ ಜೊತೆಗೆ ನಿಮ್ಮ ಮಕ್ಕಳಿಗೆ ಸಂಪತ್ತನ್ನು ಮಾಡುವದು ಬೇಡ ಮಕ್ಕಳನೇ ಸಂಪತ್ತನಾಗಿ ಮಾಡಬೇಕು ಅವರಿಗೆ ನಡೆ ನುಡಿ ಆಚಾರ ವಿಚಾರ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಕಲಿಸವದು ಬಹಳ ಮುಖ್ಯ ನಾವು ನೀವು ಎಲ್ಲರೂ ತಂದೆ ತಾಯಿಗಳ ಪುಣ್ಯ ಫಲದಿಂದ ನಾವು ಈ ಜಗತ್ತಿಗೆ ಬಂದಿರುವದು. ಎಂದು ಅಭಿನವ ಗವಿಶಿದ್ದೇಶ್ವರ ಮಹಾಸ್ವಾಮಿಗಳು ಗವಿಮಠ ಕೊಪ್ಪಳ ಅವರು ಹೇಳಿದರು.
ತಾಲೂಕಿನ ಮುಧೋಳ ಗ್ರಾಮದ ಶ್ರೀ ತ್ರಿಲಿಂಗೇಶ್ವರ ಇಂಟರ್ನ್ಯಾಷನಲ್ ಪೂರ್ವಪ್ರಾಥಮಿಕ ಶಾಲೆಯನ್ನು ಪೂಜ್ಯ ಅಭಿನವ ಶ್ರೀ ಗವಿಶಿದ್ದೇಶ್ವರ ಮಹಾಸ್ವಾಮಿಗಳು ಗವಿಮಠ ಕೊಪ್ಪಳ ಉದ್ಘಾಟಿಸಿ ಮಾತನಾಡಿದ ಅವರು ಮುಧೋಳದಲ್ಲಿ ೫೦ ವರ್ಷಗಳ ಹಿಂದೆ ಹಿರಿಯರು ಗ್ರಾಮಸ್ಥರು ಪ್ರೌಢಶಾಲೆ ಆರಂಭಿಸಿ ಶೈಕ್ಷಣಿಕ ಕ್ರಾಂತಿಮಾಡಿದ್ದಾರೆ.ಇಂದು ಹೊಸ ಕನಸಿನೊಂದಿಗೆ ನೂತನ ಶಾಲೆ ಆರಂಭವಾಗುತ್ತಿರುವದು ಉತ್ತಮ ಬೆಳವಣಿಗೆ ಎಂದು ಆಶೀರ್ವದಿಸಿದರು.ಮಕ್ಕಳು ತಮ್ಮ ತಂದೆ ತಾಯಿಗಳಿಗೆ ವಯಸ್ಸು ಆದ ಮೇಲೆ ಅವರ ಹತ್ತಿರ ಇದು ಅವರನ್ನು ಪ್ರೀತಿಯಿಂದ ನೋಡಿಕೊಳ್ಳವ ಮನೋಭಾವನೆ ಬೆಳೆಸಿಕೊಳ್ಳಬೇಕು ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ನಡೆಯಬೇಕು. ಮನುಷ್ಯನು ಜಗತ್ತಿನಲ್ಲಿ ಬದುಕ ಬೇಕಾದರೆ ಕೌಶಲ್ಯ ಬಹಳ ಮುಖ್ಯ ದೇವರನ್ನು. ಹೆತ್ತ ತಂದೆ ತಾಯಿಗಳನ್ನು ಎಂದಿಗೂ ಮರಯಬೇಡ.ಎಂದು ಸಲಹೆ ನೀಡಿದರು.
ದಿ.ಸಂಪತ್ ಕುಮಾರ ಕೆ.ಪಲ್ಲೇದ ಇವರ ಸ್ಮರಣಾರ್ಥ ರಾಜಣ್ಣ ಪಲ್ಲೇದ ೧ ಲಕ್ಷ ರೂ ಸ್ಥಿರನಿಧಿ ಸ್ಥಾಪಿಸಿದ್ದು ಅದರ ಬಡ್ಡಿಯಿಂದ ಬರುವ ಹಣದಲ್ಲಿ ಪ್ರತಿಭಾ ೨೦೨೪ ರ SSLC ಪರೀಕ್ಷೆಯಲ್ಲಿ ಉನ್ನತ ಸ್ಥಾನಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹ ಧನ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ತ್ರಿಲಿಂಗೇಶ್ವರ ಶಾಲೆಯ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ದೇಸಾಯಿ, ಸದಸ್ಯರಾದ ವಿರನಗೌಡ ಗೌಡರ, ಈಶಪ್ಪ ಜಿವೋಜಿ, ಅಪ್ಪಣ್ಣ ಪಲ್ಲೆದ, ಈರಣ್ಣ ಕಮತರ್, ಡಾ, ಅಂದಾಮಯ್ಯ ಶಾಡ್ಲಗೇರಿ ಮಠ, ಚಂದಲಿಂಗಪ್ಪ ಎಲ್ಲಿಗಾರ್ ಕೊಪ್ಪಳ, ನಾಗಪ್ಪ ಓಲಿ, ಹೇಮರಡ್ಡಿ ರಡ್ಡೇರ, ಕಳಕಪ್ಪ ಕುರಿ, ರಾಜಣ್ಣ ಪಲ್ಲೆದ, ಶರಣಪ್ಪ ಪುರ್ತಗೇರಿ, ಯಲ್ಲಪ್ಪ ಹುನಗುಂದ, ಗುರುಲಿಂಗಪ್ಪ ದೇಸಾಯಿ ವಿಜಯಕುಮಾರ ಅಕ್ಕಿ.ಇಮಾಮಸಾಬ್ ಹಿರೇಮನಿ, ಛತ್ರಪ್ಪ ಚಲುವಾದಿ ಮತ್ತು ಗ್ರಾಮದ ಗ್ರಾಮಸ್ಥರು ವಿದ್ಯಾರ್ಥಿಗಳು ಮಹಿಳೆಯರು ಹಾಗೂ ಇತರರು ಭಾಗವಹಿಸಿದ್ದರು.
,