
ಪಿಜಿ ರೂಮ್‌ಗಾಗಿ ಹಣ ಪಡೆದು ವಂಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,12- ನಗರದ ಪಿ.ಜಿ.ಯಲ್ಲಿ ರೂಮ್ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಆನ್‌ಲೈನ್ ಮೂಲಕ ₹7,000 ವಂಚನೆ ಮಾಡಿರುವ ಘಟನೆ ಕೊಪ್ಪಳ ನಗರದಲ್ಲಿ ಜರುಗಿದೆ.
ನಗರದ ತೆಗ್ಗಿನಕೇರಿ ಓಣಿಯ ಸೈಯದ್ ನಾಸಿರುದ್ದೀನ್ ಹುಸೇನ್ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದು . ರೈತರಾಗಿರುವ ಸೈಯದ್ ರೂಮ್ ಹುಡುಕಾಟದಲ್ಲಿದ್ದರು. ಅವರ ಅಗತ್ಯತೆಯಂತೆ ರೂಮ್ ಕೊಡಿಸುವೆ ಎಂದು ನಂಬಿಸಿದ ವಂಚಿಸಿದ್ದಾನೆ.
ವಂಚಕ ಕ್ಯು.ಆರ್. ಕೋಡ್ ಕಳಿಸಿ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದು. ಈ ಕುರಿತು ನಗರಸ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ತನಿಖೆ ನಡೆದಿದೆ.