
ಪಿ ಎಲ್ ಡಿ ಬ್ಯಾಂಕಿನ ಸಾಲಾ ಸೌಲಭ್ಯವನ್ನು, ರೈತ ಬಾಂಧವರು ಪಡೆಯಲು ಕರೆ
ಕರುನಾಡ ಬೆಳಗು ಸದ್ದಿ
ಬಳ್ಳಾರಿ,26- ಬಳ್ಳಾರಿ ನಗರದಲ್ಲಿರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ( ಪಿ ಎಲ್ ಡಿ )ಬ್ಯಾಂಕ್ ಅವರಣದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಶುಕ್ರವಾರ ಹಮ್ಮಿಕೊಂಡಿದ್ದು, ಬ್ಯಾಂಕು ಆಡಳಿತ ಮಂಡಳಿಯ ಅಧ್ಯಕ್ಷರಾದ ವಿ ದೊಡ್ಡಕೇಶವ ರೆಡ್ಡಿ ಕೊರ್ಲಗುಂದಿ ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಕೇಶವ ರೆಡ್ಡಿ ಮಾತನಾಡುತ್ತಾ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಹಲವಾರು ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಪ್ರತಿ ರೈತರು ಜೋಧನಗಳನ್ನು ಸದ್ಬಳಿಕೆ ಮಾಡಿಕೊಳ್ಳಲು ಕರೆ ನೀಡಿದರು. ನಂತರ ಅವರು ಮಾತನಾಡುತ್ತಾ ಕೃಷಿಗೆ ಸಂಬಂಧಪಟ್ಟ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಪಡೆದು ಮರುಪಾವತಿ ಮಾಡಲು ಸಾಧ್ಯವಾಗದ ಹಾರ್ದಿಕ ಸಂಕಷ್ಟ ಎದುರಿಸುತ್ತಿರುವ ರೈತರು, ದಿನಾಂಕ : 31 – 12 – 2023, ಕ್ಕೆ ಸುಸ್ತಿಯಾಗರು ಕೃಷಿ ಮತ್ತು ಕೃಷಿ ಸಂಬಂಧಿತ ಸಾಲದ ಕಂತುಗಳ ಅಸಲನ್ನು ದಿನಾಂಕ, 29.02.2024 ರವರೆಗೆ ಸಂಬಂಧ ಪಟ್ಟ ಸಹಕಾರ ಸಂಘ/ ಬ್ಯಾಂಕುಗಳಿಗೆ ಪೂರ್ತಿಯಾಗಿ ಮರುಪಾವತಿಸಿದ್ದಲ್ಲಿ ಈ ಮೊತ್ತಕ್ಕೆ ಬಾಕಿ ಇರುವ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ದಾಸರ ನಾಗೇನಹಳ್ಳಿ ಎಸ್ ಪಂಪಾಪತಿ, ಯರಗುಡಿ ಗ್ರಾಮದ ಲಕ್ಷ್ಮಿ, ಕೊರಲಗುಂದಿ ಗ್ರಾಮ ಕೋನ ಈರಪ್ಪ, ಇವರಿಗೆ ವಾಹನದ ಸಾಲ ಅನುಗುಣವಾಗಿ ಜಾನ್ ಡೀರ್ ಮತ್ತು ಮಹೇಂದ್ರ ಟ್ರ್ಯಾಕ್ಟರ್ ಗಳನ್ನು ವಿತರಿಸಲಾಯಿತು. ಬ್ಯಾಂಕಿನ ಡೈರೆಕ್ಟರ್ಗಳಾದ, ಗೋವಿಂದ ನಾಯ್ಕ, ಕೆ ಪಾಲಾಕ್ಷ ರೆಡ್ಡಿ, ವೆಂಕಟೇಶ್, ಎಂ ಕೇಸ್ ರೆಡ್ಡಿ, ಪಂಪಾಪತಿ, ಎಸ್ ಪಾಲಾಕ್ಷಪ್ಪ, ಡಿ. ಷಣ್ಮುಖಪ್ಪ, ಶ್ರೀಮತಿ ದ್ರಾಕ್ಷಾಯಿಣಿ ಎಂ ದೇವರೆಡ್ಡಿ, ಬ್ಯಾಂಕಿನ ವ್ಯವಸ್ಥಾಪಕರಾದ ದೀಪಕ್, ಜಡಪ್ಪ ಮತ್ತು ಬ್ಯಾಂಕಿನ ಸಿಬ್ಬಂದಿ ಪಾಲ್ಗೊಂಡಿದ್ದರು.