WhatsApp Image 2024-05-11 at 17.24.10_515c3603

ಪುರಸ್ಕಾರಗಳು ವಿದ್ಯಾರ್ಥಿಯಲ್ಲಿ ಕಲಿಕಾ ಆಸಕ್ತಿ ಮೂಡಿಸುತ್ತವೆ
ರೇಯಾನ್ ಶಾಲೆಯ ಚೇರ್ಮನ್. ಕೆ ಎಮ್ ಅಬ್ದುಲ್ ಅಜೀಜ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 11-ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರತಿಭಾ ಪುರಸ್ಕಾರದಿಂದ ಸತ್ಕರಿಸಿದಾಗ ಅವರಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗುತ್ತದೆ, ಅವರ ಮುಂದಿನ ಭವಿಷ್ಯ ಉತ್ತಮವಾಗಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ರೇಯನ್ ಶಾಲೆಯ ಚೇರ್ಮನ್ ಕೆಎಂ ಅಬ್ದುಲ್ ಅಜಿತ್ ಅಭಿಪ್ರಾಯ ಪಟ್ಟರು.

ಅವರು ರುಪನ ಗುಡಿ ರಸ್ತೆಯ ರಯನ್ ಶಾಲೆಯಲ್ಲಿ ಸಂಸದ ನಾಶೀರ್ವಸೇನ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಎರಡನೇ ವರ್ಷದ ಪ್ರತಿಭಾ ಪುರಸ್ಕಾರ ಸ್ಕಾಲರ್ಶಿಪ್ ವಿತರಿಸಿ ಮಾತನಾಡಿದರು. ಈ ಸ್ಕಾಲರ್ಶಿಪ್ ಪಡೆಯಲು ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಸುಮಾರು 150 ಜನ ವಿದ್ಯಾರ್ಥಿಗಳ ಬುದ್ಧಿಮತ್ತೆಯ ಪರೀಕ್ಷೆಯನ್ನು ನಡೆಸಿ ಅವರಲ್ಲಿ ಮೊದಲನೇ ಪ್ರೈಸ್ಗಾಗಿ ಹತ್ತು ಜನ ಮತ್ತು 2ನೇ ಪ್ರೈಸ್ ಗಾಗಿ 10 ಜನ ಒಟ್ಟು 20 ಜನರಿಗೆ 1 ಲಕ್ಷ ರೂಪಾಯಿಗಳ ಮೊತ್ತದಲ್ಲಿ ಪ್ರೈಸ್ ನೀಡಲಾಗಿರುತ್ತದೆ.

ಈ ಮೊತ್ತವನ್ನು ರಾಜ್ಯಸಭಾ ಸದಸ್ಯರಾದ ನಾಸಿರ್ ಹುಸೇನ್ ಹೆಸರಿನಲ್ಲಿ ಶಾಲೆಯಿಂದ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಶಾಲೆಯ ವತಿಯಿಂದ ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಶಾಲೆಯ ಇದೇ ತಿಂಗಳ 24 ರಂದು ತರಗತಿಗಳು ಆರಂಭವಾಗಲಿದ್ದು ತಮ್ಮ ಮಕ್ಕಳ ಪ್ರವೇಶ ಪಡೆಯಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹು ಮಯೋನ್ ಖಾನ್, ಬಸ್ಮ ಅಧ್ಯಕ್ಷರಾದ ಮರಿಸ್ವಾಮಿ ರೆಡ್ಡಿ, ರಾಜ್ಯ ವಕ್ಕ್ ಬೋರ್ಡ್ ಮಾಜಿ ಅಧ್ಯಕ್ಷ, ಬಿ ಬಿ ದಾದಾ, ಮುಖಂಡರಾದ ಯುನೋಸ್ ಸಾಬ್, ಕಣೆಕಲ್ ಜಿಲಾನ್, ಕಣೆಕಲ್ ಅಬ್ದುಲ್, ಆದಿಲ್ ಶಾ, ಫಿರೋಜ್ ಸೇರಿದಂತೆ ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!