01d0f5a0-2ba7-4da2-9d46-061b1f1c5f21

203 ಕೆ.ಜಿ.ಶ್ರೀಗಂಧ, 2 ವಾಹನ ಸೇರಿ ಒಟ್ಟು 37,45,000 ಲಕ್ಷ ಮಾಲು ವಶಕ್ಕೆ 

ಶ್ರೀ ಗಂಧ ಕದ್ದ ನಾಲ್ವರು ಕಳ್ಳರ ಬಂಧನ : ಎಸ್ಪಿ ಶ್ರೀಹರಿಬಾಬು

ಕರುನಾಡ ಬೆಳಗು ಸುದ್ದಿ

ಹೊಸಪೇಟೆ (ವಿಜಯನಗರ )ಮಾ.26 – ಪಟ್ಟಣ ಠಾಣೆಯ ಸರಹದ್ದಿನ ಸಂಡೂರು ರಸ್ತೆಯಲ್ಲಿರುವ ಎಚ್.ಎಲ್.ಸಿ.ಕಾಲುವೆ ದಂಡೆಯ ಮುಖಾಂತರ ಸಿರಸಿನಕಲ್ಲು ಮಾರ್ಗವಾಗಿ ದಿನಾಂಕ ಮಾ.22 ರಂದು ಬಳ್ಳಾರಿ ರಸ್ತೆಯ ಕಡೆಗೆ ಅನಧಿಕೃತವಾಗಿ ಬಹು ಮೊತ್ತದ ಅರಣ್ಯ ಉತ್ಪಾದಿತ ಶ್ರೀಗಂಧ ಮರದ ತುಂಡುಗಳನ್ನು ಒಂದು ಕಾರು ಮತ್ತು ಒಂದು ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಖಚಿತ ಮಾಹಿತಿ ಬಂದ‌ ಮೇರೆಗೆ ಪಟ್ಟಣ ಠಾಣೆಯ ಪಿಐ ಲಖನ್ ಆರ್.ಮಸಗುಪ್ಪಿ ಹಾಗು ಸಿಬ್ಬಂದಿಗಳು ದಾಳಿ ನಡೆಸಿ, ಒಂದು ಟಾಟಾ ಪಿಕಪ್ ವಾಹನ ಮತ್ತು ಟೊಯೋಟಾ ಇಟಿಯೋಸ್ ಕಾರನ್ಬು ತಡೆಯುತ್ತಿದ್ದಂತೆ ಎರಡು ವಾಹನಗಳ ಚಾಲಕರು ಪರಾರಿಯಾಗಿದ್ದಾರೆ.

ವಾಹನಗಳನ್ನು ಚೆಕ್ ಮಾಡಿದಾಗ ಒಟ್ಟು 11 ಪ್ಲಾಸ್ಟಿಕ್ ಚೀಲಗಳಲ್ಲಿ 203 ಕೆ.ಜಿ.ತೂಕದ ಸುಮಾರು ರೂ.30,45,000/ ಲಕ್ಷ ಬೆಲೆ ಬಾಳುವ ಶ್ರೀಗಂಧದ ಮರದ ತುಂಡುಗಳು ಹಾಗು 7 ಲಕ್ಷದ 2 ವಾಹನಗಳು ಸೇರಿ ಒಟ್ಟು 37,45,000/ ಲಕ್ಷ ರೂ. ಬೆಲೆ ಬಾಳುವ ಮಾಲನ್ನು ಜಪ್ತಿ ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್.ತಿಳಿಸಿದರು.ಇಲ್ಲಿನ ಪಟ್ಟಣ ಠಾಣೆಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.
ಪರಾರಿಯಾಗಿದ್ದ ಆರೋಪಿತರ ಪತ್ತೆಗಾಗಿ ನಾವು ವಿಶೇಷ ತಂಡವನ್ನು ರಚನೆ ಮಾಡಿದ್ದೆವು. ಎಎಸ್ಪಿ ಸಲೀಂ ಪಾಷಾ,ಡಿವೈಎಸ್ಪಿ ಶರಣಬಸವೇಶ್ವರ, ಇವರ ಮಾರ್ಗದರ್ಶನದಲ್ಲಿ ಪಟ್ಟಣ ಠಾಣೆಯ ಪಿಐ ಲಖನ್ ಆರ್.ಮಸಗುಪ್ಪಿ ನೇತೃತ್ವದ ತಂಡದವರು ಕಾರ್ಯಚರಣೆ ನಡೆಸಿ , ಮಾ.24 ರಂದು ನಾಲ್ಕು ಜನ ಆರೋಪಿತರನ್ನು ಪತ್ತೆ ಮಾಡಿದ್ದಾರೆ. ಆರೋಪಿತರಾದ 1) ಎಲ್.ಗಂಗಾನಾಯ್ಕ್ ತಂದೆ ಬಾಬುನಾಯ್ಕ್, 41 ವರ್ಷ, 2) ಮಹಾಂತೇಶ ತಂದೆ ನಾಗರಾಜಗೌಡ, 24 ವರ್ಷ, 3) ಎಚ್.ಚೆನ್ನಪ್ಪ ತಂದೆ ಬಾಬು, 49 ವರ್ಷ, 4) ಎಚ್.ರಾಮಣ್ಣ ತಂದೆ ಮುತ್ತಪ್ಪ, 61 ವರ್ಷ ಎಂದು ಗುರುತಿಸಲಾಗಿದ್ದು, ಸದ್ರಿಯರನ್ನು ವಶಕ್ಕೆ ಪಡೆದು, ಮುಂದಿನ ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಈ ಪ್ರಕರಣದಲ್ಲಿ ಇನ್ನೂ ಪ್ರಮುಖ ಅಂತರರಾಜ್ಯ ಆರೋಪಿತರನ್ನು ಪತ್ತೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಚರಣೆಯಲ್ಲಿ ಎಎಸ್ಪಿ ಸಲೀ ಪಾಷಾ, ಡಿವೈಎಸ್ಪಿ ಶರಣಬಸವೇಶ್ವರ ಅವರ ಮಾರ್ಗದರ್ಶನದಲ್ಲಿ ಪಟ್ಟಣ ಠಾಣೆಯ ಪಿಐ ಲಖನ್ ಆರ್.ಮಸಗುಪ್ಪಿ ಅವರ ನೇತೃತ್ವದ ತಂಡದಲ್ಲಿ ಪಿಎಸ್ಐ ಅಶೋಕ ಬೇವೂರು, ಶರಣಪ್ಪ ಕಟ್ಟಿಮನಿ, ಎಎಸ್ಐ ಕೆ.ಮಲ್ಲೇಶಪ್ಪ, ಸಿಬ್ದಿಗಳಾದ ಶ್ರೀರಾಮರೆಡ್ಡಿ, ಪ್ರಕಾಶ್ ಕಳಕರೆಡ್ಡಿ, ಬಿ.ರಾಘವೇಂದ್ರ, ಲಿಂಗರಾಜ, ನಾಗರಾಜ, ಪರಶುನಾಯ್ಕ್, ಜೆ.ಕೊಟ್ರೇಶ, ಗೋವರ್ಧನ, ಜೆ.ಪಕ್ಕೀರಪ್ಪ, ದೇವೇಂದ್ರ, ಮಲಕಾಜಪ್ಪ, ಕುಮಾರನಾಯ್ಜ್, ಮಹೇಶ ಜೋಳದ ಇವರ ಕಾರ್ಯವನ್ನು ಎಸ್ಪಿ ಶ್ರೀಹರಿಬಾಬು ಬಿ.ಎಲ್.ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!