WhatsApp Image 2024-04-25 at 5.54.02 PM

ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ 

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 25- ತಾಲೂಕಿನ ದೇವಲಾಪುರ ಕೆಂಚನಗುಡ್ಡ ಕೆ ತಾಂಡ ಹೆರಕಲ್ ನಿಟ್ಟೂರು ಹಳೆಕೋಟೆ ತೆಕ್ಕಲಕೋಟೆ ಗ್ರಾಮಗಳಲ್ಲಿ ಕೊಪ್ಪಳ ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಚಾರ ದೇಶದ ಸರ್ವಧರ್ಮೀಯರು ಎಲ್ಲಾ ಜಾತಿ ವರ್ಗದ ಜನರು ಭಾವೈಕ್ಯತೆಯಿಂದ ಬದುಕಬೇಕಾದರೆ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ರಾಜಶೇಖರ ಹಿಟ್ನಾಳ್ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಶಾಸಕ ಬಿ ಎಂ ನಾಗರಾಜ ಹೇಳಿದರು.

ಅವರು ಎಲ್ಲಾ ಗ್ರಾಮ ಪಟ್ಟಣಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ ದೇಶದಲ್ಲಿ ಶಾಂತಿ ನೆಲೆಸಲು ಸಹೋದರತೆ ಭಾವೈಕ್ಯತೆ ಸುಭದ್ರತೆ ಸಾಕ್ಷರತೆ ಆರ್ಥಿಕತೆ ಕೃಷಿ ಕಾರ್ಮಿಕತೆ ರೈತರ ಮಹಿಳೆಯರ ಬಡವರ ದೀನದಲಿತರ ನಿರ್ಗತಿಕರ ಹಿಂದುಳಿದ ಶ್ರೀಮಂತರೆನ್ನದೆ ಎಲ್ಲಾ ವರ್ಗಗಳ ಅಭ್ಯುದಯ ಸಾಮಾಜಿಕ ನ್ಯಾಯ ಶೈಕ್ಷಣಿಕ ಪ್ರಜಾಪ್ರಭುತ್ವ ಗಟ್ಟಿ ಗೊಳಿಸಬೇಕಾಗಿದೆ ಸಂವಿಧಾನದ ಆಶಯಗಳಂತೆ ಸಮಾನತೆ ದೇಶದ ಏಳಿಗೆಗೆ ಡಾ ಮಲ್ಲಿಕಾರ್ಜುನ ಖರ್ಗೆಯವರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಐ ಗೆ ಬೆಂಬಲಿಸಿ ರಾಹುಲ್ ಗಾಂಧಿಯವರ ಕೈಬಲ ಪಡಿಸಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ಕೆ ರಾಜಶೇಖರ ಹಿಟ್ನಾಳ ಅವರಿಗೆ ಮೇ 7 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅರ್ಹ ಮತದಾರರು ತಪ್ಪದೆ ಪ್ರತಿಯೊಬ್ಬರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಸದೃಢ ರಾಷ್ಟ್ರ ನಿರ್ಮಾಣಕ್ಕೆ ರಾಜಶೇಖರ ಹಿಟ್ನಾಳ ಅವರಿಗೆ ಬಹುಮತದಿಂದ ಗೆಲ್ಲಿಸಬೇಕು ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ಭರವಸೆ ಸಂಪೂರ್ಣವಾಗಿ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಗೊಳಿಸುವ ಮೂಲಕ ಜನಸಾಮಾನ್ಯರ ಬದುಕಿಗೆ ಇಡೀ ದೇಶದಲ್ಲಿ ಮಾದರಿಯಾಗಿದೆ ಇದೇ ರೀತಿಯಲ್ಲಿ ದೇಶದ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಇನ್ನು ಹೆಚ್ಚಿನ ಜನಪರ ಯೋಜನೆಗಳನ್ನು ರೈತರ ಸಾಲ ಮನ್ನಾ ಭಾರತದ ಮಹಾಲಕ್ಷ್ಮಿ ಪ್ರತಿ ವರ್ಷಕ್ಕೆ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ಮತ್ತಿತರ ಯೋಜನೆ ಜಾರಿಗೆ ತರಲಾಗುತ್ತದೆ ಇತಿಹಾಸ ದಿಂದಲೂ ಕಾಂಗ್ರೆಸ್ ಪಕ್ಷ ದೇಶದ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುತ್ತದೆ ಎಂದು ಅವರು ಮತದಾರರಲ್ಲಿ ಮತ ಯಾಚಿಸಿದರು.

ಚುನಾವಣಾ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ಜಮೀನ್ದಾರ್ ಸೈಯದ್ ಮೋಹಿದ್ದೀನ್ ಖಾದ್ರಿ ಬಿ ಎಂ ಸತೀಶ್ ಸಿರುಗುಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರ ಗೌಡ ಗೊರವರ ಶ್ರೀನಿವಾಸ್ ಸಿರುಗುಪ್ಪ ನಗರಸಭಾ ಸದಸ್ಯರಾದ ಕಾಯಿ ಪಲ್ಲೆ ಆರ್ ನಾಗರಾಜ ಬಿ ವೆಂಕಟೇಶ್ ಹೆಚ್ ಗಣೇಶ್ ಬಿ ಎಂ ಅಪ್ಪಾಜಿ ನಾಯಕ ಕೋಟಿ ರೆಡ್ಡಿ ಮಲ್ಲಿಕಾರ್ಜುನ ಬಾಲಪ್ಪ ಲಿಂಗನಗೌಡ ಮರಿರಾಜ ಗೌಡ ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮುಖಂಡರು ಕಾರ್ಯಕರ್ತರು ಹಳೆ ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮುಖಂಡರು ಕಾರ್ಯಕರ್ತರು ಕೆಂಚನ ಗುಡ್ಡ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮುಖಂಡರು ಕಾರ್ಯಕರ್ತರು ಎಲ್ಲಾ ಗ್ರಾಮಗಳ ಅಭಿಮಾನಿಗಳು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸಿ ಮತ ಯಾಚಿಸಿ ಮನೆ ಮನೆಗೆ ತೆರಳಿ ಕೈ ಗುರ್ತಿಗೆ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಮತಯಾಚನೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!