
ಪ್ರಜಾಪ್ರಭುತ್ವ ಬಲಪಡಿಸಿ ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 20- ಪ್ರತಿ ಭಾರತೀಯರಿಗೆ ಸಿಕ್ಕ ಅಮೂಲ್ಯ ಮತದಾನದ ಹಕ್ಕು ಮೇ 7ರಂದು ಪ್ರತಿಯೊಬ್ಬ ಅರ್ಹ ಮತದಾರರು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪದೇ ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಪೋಸ್ಟ್ ಮಾಸ್ಟರ್ ಮಂಜುನಾಥ ಶೆಟ್ಟಿ ಅವರು ಹೇಳಿದರು.
ಸಿರುಗುಪ್ಪ ನಗರದ ಮುಖ್ಯ ಅಂಚೆ ಕಚೇರಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು.
ಸಮಾಜ ಸುಧಾರಕ ಅಬ್ದುಲ್ ನಬಿ ಅವರು ಮಾತನಾಡಿ ನಿಮ್ಮ ಮತಗಳು ಸುರಕ್ಷಿತ ಹಾಗೂ ಭದ್ರ ಪ್ರತಿ ಮತವು ದಾಖಲಾಗಿರುತ್ತದೆ ಎಲ್ಲರೂ ಬಂದು ಮತ ಚಲಾಯಿಸಿ ತಪ್ಪದೇ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ ಮತ್ತು ನೆರೆ ಹೊರೆಯವರಿಗೆ ಮತ ಚಲಾಯಿಸಲು ತಿಳಿಸಿ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಂಚೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಇದ್ದರು.