
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಆಯ್ಕೆ ಒಂದು ಹಬ್ಬವಾಗಿದೆ : ಎಫ್.ಎಂ.ಕಳ್ಳಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,1- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಆಯ್ಕೆ ಒಂದು ಹಬ್ಬ ವಾಗಿದೆ ಮತದಾರರು ಯಾವುದೇ ರೀತಿಯ ಆಸೆ ಆಮಿಷಗಳಿಗೆ ಬಲಿಯಾಗದೇ ಉತ್ತಮವಾದ ಅಭ್ಯರ್ಥಿ ಗೆ ಮತವನ್ನು ಚಲಾಯಿಸಬೇಕು ಎಂದು ಅಕ್ಷರ ದಾಸೋಹ ಅಧಿಕಾರಿ ಎಫ್ ಎಂ ಕಳ್ಳಿ ಹೇಳಿದರು
ಭಾರತ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿ ಮತ್ತು ತಾಲೂಕು ಸ್ವೀಪ್ ಸಮಿತಿಯ ಸಹಯೋಗದಲ್ಲಿ ಕರಮುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಮುಡಿ, ಬಂಡಿಹಾಳ ಮತ್ತು ತೊಂಡಿಹಾಳ ಗ್ರಾಮಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಕರೆ ನೀಡಿದರು.
ಮತದಾನ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ದೊಡ್ಡ ಹಬ್ಬವಾಗಿದೆ. ಮತದಾರ ಯಾವುದೇ ರೀತಿಯ ಆಸೆ ಆಮಿಷಗಳಿಗೆ ಬಲಿಯಾಗದೆ ಯೋಗ್ಯ ಅಭ್ಯರ್ಥಿಗೆ ಮತವನ್ನು ಚಲಾಯಿಸಬೇಕು ಎಂದರು.
ಮಾಸ್ಟರ್ ಟ್ರೈನರ್ ಶ್ರೀ ಮಂಜುನಾಥ ಮುರಡಿ ಮತದಾನ ಪ್ರಕ್ರೀಯೆ ಮತ್ತು ಮಚದಾನದಲ್ಲಿ ಉಪಯೋಗಿಸುವ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಿಬ್ಬಂದಿ ಶೇಖಪ್ಪ ಉಪ್ಪಾರ, ಕರಮುಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಕಿಳ್ಳಿಕ್ಯಾತರ, ಗೌಡಪ್ಪ ಬಲಕುಂದಿ, ಲಕ್ಷ್ಮವ್ವ ಲಮಾಣಿ, ಮಹಾದೇವಪ್ಪ ಸುಣಗಾರ, ಮಂಜುಳಾ ರಾಟಿ, ಮಹಿಬೂಬ, ಮಂಜುನಾಥ, ಉಮೇಶ್ , ಚನ್ನಪ್ಪ, ಬಸಪ್ಪ ಮತ್ತು ಗಾಳೆಪ್ಪ ಮತ್ತು ಇತರರು ಭಾಗವಹಿಸಿದ್ದರು