26gvt4

ಪ್ರತಿಮನೆಗೆ ಅಯೋಧ್ಯೆಯ

ಶ್ರೀರಾಮನ ಅಕ್ಷತೆ

ಕರುನಾಡ ಬೆಳಗು ಸುದ್ದಿ
ಗಂಗಾವತಿ,೨೬-ಪ್ರತಿ ಮನೆಗೆ ಅಯೋಧ್ಯಾಯಿಂದ ತರಿಸಿದ ಶ್ರೀರಾಮನ ಅಕ್ಷತೆ ಹಾಗು ಶ್ರೀರಾಮನ ಭಾವಚಿತ್ರ ತಲುಪಿಸಲಾಗುವುದು ಎಂದು ವಿಶ್ವಹಿಂದು ಪರಿಷತ ಜಿಲ್ಲಾ ಕಾರ್ಯದರ್ಶಿ ವಿನಯ ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಜನೆವರಿ ೨೨ ಅಯೋಧ್ಯೆಯಲ್ಲಿ ಶ್ರಿರಾಮ ಮಂದಿರ ಉದ್ಘಾಟನೆಗೆ ಜಿಲ್ಲೆಯಿಂದ ಹೆಬ್ಬಾಳದ ನಾಗಭೂಷಣ ಶಿವಾಚಾರ್ಯರನ್ನು ಆಹ್ವಾನಿಸಲಾಗಿದೆ.
ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ನೇರ ಪ್ರಸಾರದ ವ್ಯವಸ್ಥೆಯನ್ನು ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಗಂಗಾವತಿ ನಗರದಲ್ಲಿ ಮಾಡಲಿದ್ದಾರೆ.
ಫೆ.೧೯ ಕ್ಕೆ ಉತ್ತರ ಕರ್ನಾಟಕದಿಂದ ೧೫೦೦ ಜನರಿಗೆ ದರುಶನಕ್ಕೆ ಅವಕಾಶ ನೀಡಿದ್ದಾರೆ.ಜ,೨೨ರಂದು ಪ್ರತಿ ದೇಗುಲಗಳಲ್ಲಿ ಶ್ರೀರಾಮನ ಜಪ, ಭಜನೆ ಹಾಗು ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಬಜರಂಗದಳ ಕೊಪ್ಪಳ ಜಿಲ್ಲಾ ಸಂಯೋಜಕ ಕೆ.ಎಂ. ದೊಡ್ಡಬಸಯ್ಯ ಮಾತನಾಡಿ ಅಂಜನಾದ್ರಿಯಲ್ಲಿ ಜರುಗಿದ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೇಯನ್ನು ಏರ್ಪಡಿಸಿತ್ತು.ಜಿಲ್ಲಾಧಿಕಾರಿಗಳು, ತಾಲೂಕು ಆಡಳಿತಕ್ಕೆ ಸಂಘ ಪರಿವಾರದ ವತಿಯಿಂದ ಧನ್ಯತೆಯನ್ನು ತಿಳಿಸುತ್ತವೆ.
ಮುಂದಿನ ವರ್ಷ ಹನುಮಮಾಲಾ ವಿರ್ಸಜನೆ ದಿನವೇ ಗಂಗಾವತಿ ನಗರದ ರಾಜ್ಯದ ಮಾಲಾಧಾರಿಗಳನ್ನು ಆಹ್ವಾನಿಸಿ ಬೃಹತ್ ಸಭೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಭಜರಂಗದಳ ಗಂಗಾವತಿ ತಾಲೂಕು ಸಂಯೋಜಕ ರಾಮಾಂಜನೇಯ್ಯ ಉಪಸ್ಥೀತರಿದ್ದರು.

Leave a Reply

Your email address will not be published. Required fields are marked *

error: Content is protected !!