
ಪ್ರತಿಯೊಬ್ಬರು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಿ
ಧರಮುರುಡಿ ಹಿರೇಮಠದ ಷ ಬ್ರ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 22 – ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಬದುಕು ಸೂತ್ರವಿಲ್ಲದ ಗಾಳಿಪಟದಂತೆ ದಿಕ್ಕುತೋಚದಂತೆ ದುಸ್ತರ ವಾಗುತ್ತದೆ ಎಂದು ಯಲಬುರ್ಗಾ ಧರಮುರುಡಿ ಹಿರೇಮಠದ ಶ್ರೀ ಷ. ಬ್ರ. ಬಸವಲಿಂಗೇಶ್ವರ ಶಿವಾಚಾರ್ಯರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ವೀರಭದ್ರೇಶ್ವರ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಷ್ಟಗಳು ಬಂದರೆ ಹೆದರಬೇಡಿ ಅವುಗಳನ್ನು ಎದುರಿಸುವ ಶಕ್ತಿ ನಿಮಗೆ ಬರುತ್ತದೆ .
ಯಾವದಕ್ಕೂ ಧ್ರತಿಗೆಡದೆ ಬಾಳಲ್ಲಿ ಏನೇ ಬರಲಿ ಅದನನ್ನು ಸ್ವೀಕರಿಸುವ ಮೂಲಕ ಬದುಕನ್ನು ಮುನ್ನೇಡೆಸಿಕೊಂಡು ಹೋದರೆ ಅದೆ ಬಂಗಾರದ ಬದುಕು ಆಗಬಲ್ಲದು ಎಂದರಲ್ಲದೇ ಕರಮುಡಿ ಗ್ರಾಮದಲ್ಲಿ ಆಗಾಗ್ಗೆ ಹಲವಾರು ಜಾಗ್ರತಿ ಕಾರ್ಯಕ್ರಮಗಳು ಜರುಗತ್ತಲೇ ಇರುತ್ತವೆ ಅವುಗಳನ್ನು ಸದುಪಯೋಗಪಡಿಸಿಕೊಂಡು ಒಳ್ಳೆ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರುˌವೀರುಪಾಕ್ಷಪ್ಪ ಉಳ್ಳಾಗಡ್ದಿ ˌ ಗಂಗಪ್ಪ ಹವಳಿ ಅವರು ಮಾತನಾಡಿ ನಮ್ಮಲ್ಲಿ ಯಾವುದೇ ಕಾರ್ಯಕ್ರಮಗಳು ಜರುಗಿದರು ಯಶಸ್ಸು ಖಂಡಿತ ಇರುತ್ತದೆ ಅದಕ್ಕೆ ಸಮಸ್ತ ಗ್ರಾಮಸ್ತರು ಕೊಡುವ ಸಹಕಾರ ಅಪಾರವಾಗಿದೆ ಎಂದರು.
ಗಜಗಿನಹಾಳದ ವೀರೇಶ ಶಾಸ್ತ್ರಿಗಳು ವೀರಭದ್ರೇಶ್ವರ ಮಹಿಮೆಯನ್ನು ಮನಮುಟ್ಟವಂತೆ ತಿಳಿಸಿದರು. ಯರಗೇರಾದ ಚಂದಾಲಿಂಗಯ್ಯ ಹಿರೇಮಠ ˌ ವೀರಭದ್ರಯ್ಯ ಕೆಂಬಾವಿಮಠ ರವರ ಸುಶ್ರಾವ್ಯ ಸಂಗೀತವು ಮುದು ನೀಡಿತು.
ಶಕುಂತಲಾದೇವಿ ಮಾಲಿಪಾಟೀಲ ˌ ಶರಣಗೌಡ ಪೋ.ಪಾಟೀಲ ˌ ಚನ್ನಬಸಪ್ಪ ಗೊಂಗಡಶೆಟ್ಟಿ ! ಬಸವರಾಜ ಬಲಕುಂದಿ ˌ ಉಮೇಶ ಕುಕನೂರ ˌ ಮರ್ಧಾನಸಾಬ ಮುಲ್ಲಾ ˌ ವೀರಣ್ಣ ಪಟ್ಟೇದ ˌ ಕಳಕಪ್ಪ ಬೆಟಗೇರಿ ಮತ್ತು ಇತರರು ಉಪಸ್ಥಿತರಿದ್ದರು. ದಾಸೋಹ ಸೇವೆ ನಿರ್ವಹಿಸಿದ ಬಟಗೇರಿ ಒಣಿಯ ಹಿರಿಯರನ್ನು ಸನ್ಮಾನಿಸಲಾಯಿತು.