a5db17d7-bc59-40fe-9bcb-f3a709a89376

ಪ್ರತಿಯೊಬ್ಬರು ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಜೀವನ ಸಾಧ್ಯ

 ಕೆ ವಿರುಪಾಕ್ಷಪ್ಪ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 22 – ಪ್ರತಿಯೊಬ್ಬರಿಗೂ ಸರಕಾರಿ ನೌಕರಿ ಸಿಗುವುದು ಕಷ್ಟ. ಯುವಕರು ಯುವತಿಯರು. ಸರಕಾರಿ ನೌಕರಿ ನಿರೀಕ್ಷೆ ಮಾಡದೆ ಪ್ರತಿಯೊಬ್ಬರು ಸ್ವಯಂ ಉದ್ಯೋಗ ಮಾಡುವದರ ಜೊತೆಗೆ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಅಡ್ವಾಂಟಾ ಎಂಟರ್ ಪ್ರೈಜಸ್ ಲಿಮಿಟೆಡ್ ಕಂಪನಿಯ ಅಧಿಕಾರಿ ಕೆ ವಿರುಪಾಕ್ಷಪ್ಪ ಅವರು ಹೇಳಿದರು.
ಅವರು   ಪಟ್ಟಣದ ಸಂಗಣ್ಣ ಟೆಂಗಿನಕಾಯಿ ಅವರ ಸಾಯಿ ಪ್ಯಾಲೇಸ್ ನಲ್ಲಿ ಶ್ರೀ ಗುರುಕೈಪಾ ಎಂಟರ್ ಪ್ರೈಜಸ್ ಮತ್ತು ಅಡ್ವಾಂಟಾ ಎಂಟರ್ ಪ್ರೈಜಸ್ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಹೋಲಿಗೆ ತರಬೇತಿ ಪಡದ ಯುವತಿಯರು ಯುವಕರು ಪ್ರಮಾಣ ಪತ್ರ ಉಪಕರಣ. ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .

ಗ್ರಾಮೀಣ ಭಾಗದ ಯುವಕ ಯುವತಿಯರು ಪ್ರತಿಯೊಬ್ಬರು ಸರಕಾರಿ ಉದ್ಯೋಗಕ್ಕಾಗಿ ಅಲೆದಾಡಿ ಸಮಯ ಹಾಳು ಮಾಡಿಕೊಳ್ಳದೇ ಯಾವುದೇ ಒಂದು ಒಳ್ಳೆಯ ಸ್ವಯಂ ಉದ್ಯೋಗ ಮಾಡುವುದರ ಜೊತೆಗೆ ಇತರರಿಗೆ ಮಾದರಿಯಾಗಿರಿ ಪ್ರತಿ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರು ಸ್ವಯಂ ತರಬೇತಿಗಳನ್ನು ಪಡೆದುಕೊಂಡು ಉತ್ತಮ ಜೀವನ ಸಾಗಿಸಬೇಕು ಎಲ್ಲರಿಗೂ ಸ್ವಯಂ ಉದ್ಯೋಗವು ದಾರಿ ದೀಪವಾಗಲಿದೆ ಎಂದು ಹೇಳಿದರು.
ನಂತರ ತೋಟಗಾರಿಕೆ ಇಲಾಖೆಯ ಅಧಿಕಾರಿ ನಿತೀಶಕುಮಾರ. ಮತ್ತು ಅಡ್ವಾಂಟಾ ಎಂಟರ್ ಪ್ರೈಜಸ್ ಲಿಮಿಟೆಡ್ ಕಂಪನಿಯ ಸಿ. ಎಸ್. ಆರ್. ವಿಭಾಗದ ರೇನಿತಾ ಕಾಕಸಿ ಚೈತನ್ಯಕುಮಾರ ಕಮ್ಮಿ. ಗುರು ಎಂಟರ್ ಪ್ರೈಜಸ್ ನ ವ್ಯವಸ್ಥಾಪಕ ಶೇಖರಯ್ಯ ವಿರಕ್ತಮಠ ಇವರು ಕಾರ್ಯಕ್ರಮ ಕುರಿತು ಮಾತನಾಡಿ ಸರಕಾರದಿಂದ ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಆ ಯೋಜನೆಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿ ಗ್ರಾಮೀಣದಲ್ಲಿ ಇರುವ ನಿರುದ್ಯೋಗ ಯುವಕರು ಮತ್ತು ಯುವತಿಯರು ಮಹಿಳೆಯರು ತಾವು ಸ್ವಾವಲಂಬಿ ಜೀವನ ನಡೆಸಲು ನಮ್ಮ ಸಂಸ್ಥೆಯು ಮುಂದೆ ಬಂದಿದೆ ಸ್ವಯಂ ಉದ್ಯೋಗ ಮಾಡಲು ಅವಶ್ಯಕತೆಯಿರುವ ತರಬೇತಿಯನ್ನು ನೀಡುತ್ತಿದ್ದು ನೀವು ತರಬೇತಿ ಪಡೆದುಕೊಂಡು ಉತ್ತಮ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸ್ವಯಂ ಉದ್ಯೋಗ ದಲ್ಲಿ ತರಬೇತಿ ಪಡೆದ ಯುವಕ ಯುವತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ.ಕನ್ನಡ ಹಾಡು ನ್ಯತ್ಯ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂತು   ನಂತರ ಸನ್ಮಾನ ನಡೆಯಿತು ಈ ಸಂದರ್ಭದಲ್ಲಿ ಅಡ್ವಾಂಟಾ ಎಂಟರ್ ಪ್ರೈಜಸ್ ಲಿಮಿಟೆಡ್ ಕಂಪನಿಯ ಶ್ರೀಕಾಂತ್. ತ್ರಿಪಾಠಿ. ಕಲಿಲ್.ಪ್ರಮೋದ.ಅಬ್ದುಲ್.ಎಸ್ ಗೌಡಪ್ಪ ಶರಣಬಸಯ್ಯಚರಂತಿಮಠ. ಮಂಜುಳಾ ಅಂಗಡಿ. ಕೊಟ್ರೇಶ ತಳಕಲ್ ಖಾದರಸಾಬ. ನೀಲಪ್ಪ. ಗುಡದಪ್ಪ. ಮಂಜುನಾಥ ಕಮ್ಮಾರ. ಅಶೋಕ ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!