
ಪ್ರತಿಯೊಬ್ಬ ಕರೋನಾ ಬಗ್ಗೆ ಮುಂಜಾಗ್ರತೆ ವಹಿಸಬೇಕು
ಮುಖ್ಯಾಧಿಕಾರಿ ನಾಗೇಶ್
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 30- ಪಟ್ಟಣದ ಎಲ್ಲಾ ಸಾರ್ವಜನಿಕರು ಕರೋನಾ ಬಗ್ಗೆ ಭಯ.ಆಂತಕ. ಬೇಡ ಮುಂಜಾಗ್ರತೆ ಕ್ರಮ ಮತ್ತು ಎಚ್ಚರಿಕೆ ವಹಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್ ಹೇಳಿದರು.
ಈ ಕುರಿತು ಪ್ರತಿಕಾ ಪ್ರಕಟಣೆ ನೀಡಿದ ಇತ್ತೀಚೆಗೆ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚಿಸಿದಂತೆ ನಾವು ಪಟ್ಟಣದ ಸಾರ್ವಜನಿಕ ರಲ್ಲಿ ಮನವಿ ಮಾಡಿಕೊಳ್ಳುವ ದೇನಂದರೆ.ಪ್ರತಿಯೊಬ್ಬ 60 ವರ್ಷದ ಮೇಲ್ಪಟ್ಟ ಹಿರಿಯ ನಾಗರಿಕರು ಕಡ್ಡಾಯವಾಗಿ ಮಾಸ್ಕಧರಿಸಬೇಕು ಸಧ್ಯಕ್ಕೆ ವಾತಾವರಣ. ಚಳಿ ಜಾಸ್ತಿ. ಮತ್ತು ಉಷ್ಣತೆ ಹೆಚ್ಚು ಇರುವದರಿಂದ ಮುಂಜಾಗ್ರತೆ ವಹಿಸಬೇಕು.
ಒಂದೇ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವದು ಕಡಿಮೆ ಮಾಡಬೇಕು ಮತ್ತು ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು ಕರೋನಾ ಬಗ್ಗೆ ಭಯ ಬೇಡ ಎಚ್ಚರಿಕೆ ವಹಿಸುವದರ ಜೊತೆಗೆ ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು ಕರೋನಾ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೋಳವ ಅನಿವಾರ್ಯತೆ ಇದೆ. ಯಾರಿಗಾದರು ಹೆಚ್ಚಿನ ರೀತಿಯಲ್ಲಿ ಶೀತ. ಜ್ವರ. ಕೆಮ್ಮು. ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿಬೇಕು ಎಂದು ತಿಳಿಸಿದರು