೭

ಪ್ರತಿಯೊಬ್ಬ ವಿಕಲಚೇತನರು ಯುಡಿಐಡಿ ಕಾರ್ಡ ಪಡೆದುಕೊಳ್ಳಿ

                            ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ನಿಡುಗುಂದಿ 

ಕರುನಾಡ ಬೆಳಗು ಸುದ್ದಿ
ಯಲಬುರ್ಗಾ , 8-  ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಡಿಎನ್ಎ ಬೆಂಗಳೂರು .ಪ್ರಗತಿ ಚಾರಿಟಬಲ್ ಟ್ರಸ್ಟ್ .ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಹಾಗೂ ಶ್ರೀ ವೀರಭದ್ರೇಶ್ವರ ವಿಕಲಚೇತನರ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಯಲಬುರ್ಗಾ ಇವರುಗಳ ಸಂಯುಕ್ತಆಶ್ರಯದಲ್ಲಿ ವಿಕಲಚೇತನರ ಒಂದು ದಿನದ ಯುಡಿಐಡಿ ಕಾರ್ಡ್ ಕುರಿತು ತರಬೇತಿ ಹಮ್ಮಿಕೊಳ್ಳಲಾಯಿತು .

ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ನಿಡಗುಂದಿ ಮಾತನಾಡಿ ತಾಲೂಕಿನಲ್ಲಿರುವ ಪ್ರತಿಯೊಬ್ಬ ವಿಕಲಚೇತನರು ಸರ್ಕಾರದ ಯೋಜನೆಗಳಿಗೆ ಯುಡಿಐಡಿ ಕಾರ್ಡ ಮುಖ್ಯವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ವಿಕಲಚೇತನರು ಯುಡಿಐ ಕಾರ್ಡ್ ಅನ್ನು ಪಡೆದುಕೊಳ್ಳಿ ಹಾಗೂ ಸರ್ಕಾರದ ಹಲವಾರು ಯೋಜನೆಗಳನ್ನು ಪ್ರತಿಯೊಬ್ಬ ವಿಕಲಚೇತನರು ಪಡೆದುಕೊಳ್ಳಲು ಮುಂದಾಗಬೇಕು ಮತ್ತು ಟ್ರಸ್ಟ್ ಗಳು ಮತ್ತು ಸಂಸ್ಥೆಗಳು ತುಂಬಾ ಒಳ್ಳೆಯ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಪ್ರಕಾಶ ಎಚ್ ಮುಖ್ಯ ವೈದ್ಯಾಧಿಕಾರಿ. ಡಾ.ಕೃಷ್ಣ ಹೊಟ್ಟಿ, ಸಹಾಯಕ ಆಡಳಿತಾಧಿಕಾರಿ ಚಂದ್ರಶೇಖರ .ಪ್ರಗತಿ ಚಾರಿಟಬಲ್ ಟ್ರಷ್ಟ, ಕಾರ್ಯಕ್ರಮದ ನಿರ್ದೇಶಕ ವಿರುಪಾಕ್ಷಿ ಹದ್ಲಿ ತಳಕಲ್. ನೌಕರ ಸಂಘದ ಅಧ್ಯಕ್ಷ.ವೈಜಿ ಪಾಟೀಲ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರ ತಾಲೂಕು ಎಂ ಆರ್ ಡಬ್ಲ್ಯೂ. ಬಸನಗೌಡ ಬನಪ್ಪಗೌಡ್ರ, ಶ್ರೀ ವೀರಭದ್ರೇಶ್ವರ ಸಂಸ್ಥೆಯ ಅಧ್ಯಕ್ಷ ಈರಣ್ಣ ಕರೆಕುರಿ ರಾಜ್ಯಾಧ್ಯಕ್ಷ ಆರ್ಪಿಡಿ ಟಾಸ್ಕ ಪೋರ್ಸ ರಾಜ್ಯಾದ್ಯಕ್ಷ ಮಂಜುನಾಥ ಹೊಸ್ಕೇರಾ ಮಂಜುಳಾ .ಸಂತೋಷಜಿ ವೀರಭದ್ರಪ್ಪ ನಿಡಗುಂದಿ ಹಾಗೂ ನೂರಾರು ವಿಕಲಚೇತನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು

Leave a Reply

Your email address will not be published. Required fields are marked *

error: Content is protected !!