
ಪ್ರತಿ ವಾರದ ಎರಡು ದಿನ ಮಂಗಳವಾರ ಹಾಗೂ ಬುಧವಾರ ಕುಕುನೂರು ಕೋರ್ಟಿನಲ್ಲಿ ತೀರ್ಪು
ಕರುನಾಡ ಬೆಳಗು ಸುದ್ದಿ
ಕುಕನೂರು: ಕುಕನೂರು ಪಟ್ಟಣದಲ್ಲಿ ನೂತನವಾಗಿ ನವಂಬರ್ 4ರಂದು ಹೈ ಕೋರ್ಟ್ ಮುಖ್ಯ ನ್ಯಾಯಾಧೀಶರಿಂದ ಉದ್ಘಾಟನೆಯಾಗಿದ್ದು ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ಕುಕನೂರು ತಾಲೂಕು ಹಾಗೂ ವ್ಯಾಪ್ತಿಯ ಹಳ್ಳಿಗಳ ಸಿವಿಲ್ ಪ್ರಕರಣಗಳು ಇಲ್ಲೇ ನಡೆಯುತ್ತವೆ ಎಂದು ಯಲಬುರ್ಗಾ ತಾಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಬೇಲೇರಿ ಹೇಳಿದರು.
ಕುಕನೂರು ಪಟ್ಟಣದ ನೂತನ ಕೋರ್ಟಿನ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ಪ್ರಕರಣಗಳು ಹಾಗೂ ಸಿವಿಲ್ ಪ್ರಕರಣಗಳಿಗೆ ಕುಕನೂರಿನ ಸಂಚಾರಿ ಕೋರ್ಟಿನಲ್ಲಿ ಕೇಸು ನಡೆಯುತ್ತವೆ ಅದರಿಂದ ಆಯಾ ವಕೀಲರಿಗೆ ಸಂಬಂಧಿಸಿದ ಕಕ್ಷಿದಾರರಿಗೆ ಮಾಹಿತಿ ನೀಡುತ್ತಾರೆ ಈ ತಾಲೂಕಿನ ಎಲ್ಲಾ ಕಕ್ಷಿದಾರರು ಈ ಕೋರ್ಟಿಗೆ ಬರಬೇಕು, ಸಿವಿಲಿನ 5 ಲಕ್ಷದ ವ್ಯಾಲ್ಯೂಯೇಷನ್ ಪ್ರಕರಣಗಳಿಗೆ ಮಾತ್ರ ಇಲ್ಲಿ ಅವಕಾಶವಿದ್ದು. ಇದಕ್ಕಿಂತ ಹೆಚ್ಚಿನ ವ್ಯಾಲ್ಯೂಯೇಷನ್ ಪ್ರಕರಣಗಳು ಸೀನಿಯರ್ ಕೋರ್ಟ್ ಯಲಬುರ್ಗಾ ಕೋರ್ಟಿನಲ್ಲೇ ನಡೆಯುತ್ತವೆ ಎಂದು ಮಾಹಿತಿ ನೀಡಿದರು. ತಾಲೂಕಿಗೆ ಶಾಶ್ವತ ಕೋರ್ಟ್ ಕಟ್ಟಡದ ನಿರ್ಮಾಣಕ್ಕೆ ಬೇಡಿಕೆ ಇದ್ದು ನಮಗೆ 10 ಎಕರೆ ಭೂಮಿಯ ಅವಶ್ಯಕತೆ ಇದೆ ಎಂದರು. ನೂತನವಾಗಿ ಆರಂಭವಾಗಿರುವ ಕಟ್ಟಡಕ್ಕೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ ಇದರ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತಂದಿದ್ದೇವೆ ಆದಷ್ಟು ಬೇಗ ಎಲ್ಲಾ ಸೌಕರ್ಯಗಳು ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಚ್ ಎಚ್ ಹಿರೇಮನಿ, ಕಾರ್ಯದರ್ಶಿ ಈರಣ್ಣ ಕೋಳೂರು, ಸಹಕಾರ್ದರ್ಶಿ ಎ ಎನ್ ಪಾಟೀಲ್, ಖಜಾಂಚಿ ಕೆ ಆರ್ ಬೆಟಿಗೇರಿ, ಗ್ರಂಥಪಾಲಕ ಎಸ್ ಎಸ್ ಶಾಕೋಟಿ, ಹಾಗೂ ಕುಕನೂರು ಸಮಿತಿಯ ರಮೇಶ್ ಗಜಕೋಶ್, ಅಡವಪ್ಪ ಬೋರಣ್ಣವರ್,ಎಸ್ ಜಿ ಅಂಗಡಿ,ವಿನಾಯಕ ಬಳಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು..