
ಪ್ರಧಾನಿ ಮೋದಿಜಿಯವರ ಅಭಿವೃದ್ದಿ ಕಾರ್ಯಗಳೇ-ಶ್ರೀರಕ್ಷೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ,20- ಪ್ರಧಾನಮಂತ್ರಿ ನರೆಂದ್ರ ಮೋದಿಯವರು ೧೦ ವರ್ಷಗಳಲ್ಲಿ ಮಾಡಿದ ಅನೇಕ ಅಭಿವೃದ್ದಿ ಕಾರ್ಯಗಳು ಲೋಕಸಭಾ ಚುನಾವಣೆಯಲ್ಲಿ ಶ್ರೀರಕ್ಷೇಯಾಗಲಿವೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಡಾ/ಬಸವರಾಕ ಕ್ಯಾವಟರ್ ಹೇಳಿದರು.
ಅವರು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿ ಭಾರತ ಜಗತ್ತಿನಲ್ಲಯೇ ವಿಶ್ವಗುರುವಾಗುವಂತೆ ಮಾಡಿ ಅಭಿವೃದಿಯಲ್ಲಿ ನಂ೧ ಸ್ಥಾನದಲ್ಲಿ ದೇಶವನ್ನು ಮುನ್ನಡೆಸಿದ ನಮ್ಮೇಲ್ಲರ ಹೆಮ್ಮೇಯ ಪ್ರಧಾನಮಂತ್ರಿ ನರೆಂದ್ರ ಮೋದಿಯವರ ಇಡಿ ದೇಶವೆ ಕೊಂಡಾಡುತ್ತಿದೆ. ನಾನು ಬಿಜೆಪಿ ಕೊಪ್ಪಳ ಲೋಕಸಭಾ ಅಭ್ಯರ್ಥಿಯಾಗಿರುವುದು ನನ್ನ ಪೂರ್ವಜನ್ಮದ ಪುಣ್ಯವಾಗಿದೆ. ಸರ್ವರೂ ಸೇರಿ ಮೋದಿಯವರನ್ನು ಪ್ರಧಾನಿಯನ್ನಾಗಿಸಿ ವಿಶ್ವದಲ್ಲಿಯೇ ಭಾರತ ಅಗ್ರಗಣ್ಯಸ್ಥಾನದಲ್ಲಿ ಮುಂದುವರೆಯುವಂತೆ ಮಾಡೋಣ.
ಸಂಸದ ಸಂಗಣ್ಣ ಕರಡಿಯವರ ಹಾಗೂ ಜಿಲ್ಲೆಯ ಬಿಜೆಪಿ ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತನೆ ಎಂದರು.
ಮಾಜಿಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಬಿಜೆಪಿ ಹೈಕಮಾಂಡ ಡಾ/ಬಸವರಾಜ ಕ್ಯಾವಟರನ್ನು ಎಂಪಿ ಅಭ್ಯರ್ಥಿಯನ್ನಾಗಿಸಿದೆ ಎಲ್ಲರೂ ಸೇರಿ ಗೆಲ್ಲಿಸಿ ಮೋದಿಜಿಯವರನ್ನು ಪ್ರಧಾನಮಂತ್ರಿಯನ್ನಾಗಿಸೋಣ ಎಂದರು.
ಬಿಜೆಪಿ ಗ್ರಾಮೀಣ ಅಧ್ಯಕ್ಷ ಚನ್ನಪ್ಪ ಮಳಗಿ ವಕೀಲ,ಬಿಜೆಪಿ ನಗರ ಅಧ್ಯಕ್ಷ ಕಾಶಿನಾಥ ಚಿತ್ರಗಾರ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಅಪ್ಪಣ್ಣ ಪದಕಿ, ಚಂದ್ರಶೇಖರ ಕವಲೂರ, ಬಿಜೆಪಿ ಜಿಲ್ಲಾ ಮಾಜ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಘನಾಳ, ನರಸಿಂಗರಾವ ಕುಲಕರ್ಣಿ, ನಗರಸಭೆ ಮಾಜಿ ಅಧ್ಯಕ್ಷ ಹನುಮಂತಪ್ಪ ನಾಯಕ ಜೋಗದ, ಜಿಲ್ಲಾ ಎಸ್ಟಿ ಮೋರ್ಚಾದ ವಿರಭದ್ರಪ್ಪ ನಾಯಕ ವಡ್ರಟ್ಟಿ ,ಶ್ರೀನಿವಾಸ ಧೂಳ, ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.