
ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸ್ಥಳಗಳ ಪರಿಶೀಲನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 26- ಪ್ರವಾಸೋದ್ಯಮ ಅಭಿವೃದ್ಧಿಗಾಗಿ, ಕಂಪ್ಲಿ ತಾಲೂಕ ವ್ಯಾಪ್ತಿಯಲ್ಲಿ ಬರುವ ರಾಮಸಾಗರ ಹಾಗೂ ವಿವಿಧ ಭಾಗಗಳ ಸ್ಥಳಗಳ ಪರಿಶೀಲನೆ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶರಣಪ್ಪ ಸಂಕನೂರು ಅವರು ನಡೆಸಿದರು.
ಐತಿಹಾಸಿಕ ತಾಣ ಹಂಪಿಯ ರಾಮಸಾಗರ ಗ್ರಾಮಕ್ಕೆ ಹತ್ತಿರವಾಗಿದ್ದರಿಂದ ದೇಶ ವಿದೇಶಗಳಿಂದ ಬರುವ ಟೂರಿಸ್ಟ್ ಗಳ ಅನುಕೂಲಕ್ಕಾಗಿ ರೆಸ್ಟೋರೆಂಟ್ ನಿರ್ಮಿಸಲು, ತುಂಗಭದ್ರಾ ನದಿ ತಟದ ಅಶುಭಾಷಣ ಹಂಪಾವಿದ್ಯಾಪೀಠ ಗುಡದೂರು ನಂದಿ ಕಟ್ಟೆ ಕಣವಿ ಮಾರಮ್ಮ ಕಲ್ಯಾಣಿ ನೀರಿನ ಪಂಪ್ಸೆಟ್ ಹತ್ತಿರ ಸ್ಥಳಗಳ ಪರಿಸರವನ್ನು ವೀಕ್ಷಿಸಿದರು.
ಕಮಲಾಪುರದ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ,ತಾ ಪಂ. ಇವೋ ಆರ್ ಕೆ ಶ್ರೀಕುಮಾರ್, ನರೇಗಾ ಏಡಿ ಕೆಎಸ್ ಮಲ್ಲನಗೌಡ ಪಿಡಿಓ ಕೆ ಹನುಮಂತಪ್ಪ, ಗ್ರಾಪಂ ಸದಸ್ಯ ಶರಣಪ್ಪ, ಟಿ ಐ ಇ ಸಿ, ಹನುಮೇಶ ಆಗಲೂರು, ಹೊಸಳ್ಳಿ ತಾಂತ್ರಿಕ ಸಹಾಯಕ ಸಂಗಮೇಶ ಇತರರು ಇದ್ದರು.