
ಪ್ರಾಣ ಬಲಿಗಾಗಿ ಕಾಯುತ್ತಿರುವ ವಿದ್ಯುತ್ ಕಂಬ : ಅಧಿಕಾರಿಗಳ ನಿರ್ಲಕ್ಷ್ಯ
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ, 29- ಹೋಬಳಿಯ ಗರಗ ಗ್ರಾಮದಲ್ಲಿ ಹೊಸಪ್ಲಾಟ್ 1ನೇ ವರ್ಡ್ ನ ರೆಡ್ಡಿ ಬುಡೆನ್ ಸಾಬ್ ಹೊಲದಲ್ಲಿ ಕಬ್ಬಿಣದ ಎಲೆಕ್ಟ್ರಿಕ್ ಕಂಬ ತುಕ್ಕು ಹಿಡಿದು ನೆಲದ ಮೇಲೆ ಲಯ ತಪ್ಪಿ ವಿದ್ಯುತ್ ಸರಬರಾಜಾಗುವ ತಂತಿಗಳ ಆಶ್ರಯದಿಂದಲೇ ನಿಂತಿದೆ ಇಲ್ಲಿನ ಸ್ಥಳೀಯರು ಮರಿಯಮ್ಮನಹಳ್ಳಿಯ ಜೆಸ್ಕಾಮ್ ಅಧಿಕಾರಿಗಳಿಗೆ ತಿಳಿಸಿದರೂ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಪ್ರಾಣ ಬಲಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೇನೋ ಎನ್ನುವ ಮಾತುಗಳು ಜನರಿಂದ ಕೇಳಿಬಂದವು.