
ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ
ಪಟ್ಟಣದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 2024ರಲ್ಲಿ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬೀಳ್ಕೊಡುಗೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಶನಿವಾರ ರಂದು ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರ ಸಮನ್ವಯಾಧಿಕಾರಿ ಎಂ ಜಗದೀಶಪ್ಪ ಮಾತನಾಡಿ ಶಿಕ್ಷಣ ಇಲಾಖೆ ಬಹುದೊಡ್ಡ ಜವಾಬ್ದಾರಿ ಇಲಾಖೆಯಾಗಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕೆಲಸ ನಿಮ್ಮದಾಗಿದ್ದು ನಿಮ್ಮ ವಿದ್ಯಾರ್ಜನೆ ನೀಡಿದ ಸೇವೆಯು ನಮ್ಮಇಲಾಖೆಗೆ ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಾಗರಾಜ್ ಹಿರಾ ಮಾತನಾಡಿ ವೃತ್ತಿಗೆ ಸೇರಿದ ಮೇಲೆ ನಿವೃತ್ತಿ ಎಂಬುದು ಸಹಜ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಸರಕಾರದ ಋಣ ತೀರಿಸಿದ ಭಾಗ್ಯ ನಿಮ್ಮದಾಗಿರುತ್ತದೆ. ನಿವೃತ್ತಿಯ ನಂತರ ಬೇಸರ ಎಂಬುದು ಸಹಜ ಆದರೆ ಬೇಸರ ಮಾಡಿಕೊಳ್ಳದೆ ಪ್ರವೃತ್ತಿಗಳ ಮೈಗೂಡಿಸಿಕೊಂಡಾಗ ವಿವಿಧ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಾಗ ವಿಶ್ರಾಂತ ಜೀವನ ಸಾರ್ಥಕವಾಗುತ್ತದೆ ಮುಂದಿನ ದಿನಮಾನದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ ಭವಿಷ್ಯ ವೃದ್ಧಿಸುವ ನಿಟ್ಟಿನಲ್ಲಿ ಅವರಿಗೆ ಸಲಹೆ ನೀಡಬೇಕು ಎಂದು ಆಶಿಸಿದರು.
ದೈಹಿಕ ಶಿಕ್ಷಣಾಧಿಕಾರಿ ಸರಸ್ವತಿ ನಿವೃತ್ತ ಅಧಿಕಾರಿ ಶಿವಪುತ್ರಪ್ಪ ಒಂದಾಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದುರಿ ವಹಿಸಿ ಮಾತನಾಡಿ ನಿಮ್ಮಸರಕಾರಿ ಸೇವೆಗೆ ಮಾತ್ರ ನಿವೃತ್ತಿಯಾಗಿದೆ. ಮುಂದಿನ ವಿಶ್ರಾಂತ ಜೀವನದಲ್ಲಿ ಉತ್ತಮ ಆರೋಗ್ಯ ಪಡೆದು ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಿರಿ ಎಂದರು.
ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ನಿವೃತ್ತಿಹೊಂದಿದ 27ಜನ ಶಿಕ್ಷಕರಿಗೆ ಸಂಘದಿಂದ ಹೃತ್ಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೈದರಲಿ ಜಾಲಿಹಾಳ, ಲಕ್ಷ್ಮಣ ಪೂಜಾರ, ನಿಂಗಪ್ಪ ಕುರ್ನಾಳ, ಗುರಪ್ಪ ಕುರಿ, ಸಿದ್ರಾಮಪ್ಪ ಅಮರಾವತಿ, ಕಳಕಮಲ್ಲೆಶ ಜೋಗಿ, ಮಹೆಶ ಪಡಿ, ಅಮರೇಗೌಡ ನಾಗೂರ ಸೇರಿದಂತೆ ಸಂಘದ ಸದಸ್ಯರು ಇದ್ದರು.