
ಪ್ರಾದೇಶಿಕ ಮಟ್ಟದ ರೆಡ್ ರಿಬ್ಬನ್ ಕ್ವಿಜ್ ನಲ್ಲಿ
ಬೇವೂರು ಶಾಲೆಯ ಕು.ಸಂಗಮೇಶ್ವರಿ & ಕು ಪ್ರಿಯಾಂಕಾ ನಾಲ್ಕನೇ ಸ್ಥಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೧- ಮುಂಬೈನಲ್ಲಿ ನಡೆದ ಪ್ರಾದೇಶಿಕ ಮಟ್ಟದ ಹೆಚ್.ಐ./ಏಡ್ಸ್ ಕುರಿತು ನಡೆದ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯದ ಪರವಾಗಿ ಸ್ಪರ್ಧೆಸಿದ್ದ ಕೊಪ್ಪಳ ಜಿಲ್ಲೆಯ ಮೋರಾರ್ಜಿ ವಸತಿ ಶಾಲೆ BC-378 ಬೇವೂರುನ ವಿದ್ಯಾರ್ಥಿನಿಯರಾದ ಕು. ಸಂಗಮೇಶ್ವರಿ & ಕು.ಪ್ರಿಯಾಂಕಾ ರವರು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ನಾಲ್ಕನೇ ಸ್ಥಾನ ಪಡೆದ ಸದರಿ ವಿದ್ಯಾರ್ಥಿನಿಯರಿಗೆ 10,000 ನಗದು, ಟ್ರೋಫಿ & ಪ್ರಮಾಣ ಪತ್ರ ನೀಡಿ ಗೌರವಿಸಲಾಗಿದೆ.ವಿಜೇತ ವಿದ್ಯಾರ್ಥಿನಿಯರಿಗೆ ಎನ್.ಎಮ್. ಯೋಜನಾ ನಿರ್ದೇಶಕರು ಕೆಸಾಪ್ಸ್ ನಾಗರಾಜ.ಜಿಲ್ಲಾಧಿಕಾರಿ ನಲಿನ್ ಅತುಲ್ , ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರಾಹುಲ್ ರತ್ನಂ ಪಾಂಡೆಯ, ಜೆ.ಡಿ. & ಕೆಸಾಪ್ಸ್ ನೋಡಲ್ ಅಧಿಕಾರಿ ಡಾ ಸಂಜಯ್ ಪಾಟೀಲ್ , ಡಿ.ಎಚ್.ಓ. ಡಾ ಲಿಂಗರಾಜು ಟಿ., ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ ಶಶಿಧರ ಎ, ಗೊವಿಂದರಾಜು ಜೆ.ಡಿ. ಐ.ಇ.ಸಿ. ನಂಜೇಗೌಡ ಎ.ಡಿ. ಯುವಜನ ಸಬಲಿಕರಣ ಅಭಿನಂದಿಸಿರುತ್ತಾರೆ.
ಪ್ರಾಚಾರ್ಯರಾದ ಶ್ರೀಮತಿ ನಾಗಲಕ್ಷ್ಮಿ ಮಿಸ್ಕಿನ್, ವಸತಿ ನಿಲಯ ಪಾಲಕರಾದ ಮಂಜುನಾಥ, ಪ್ರವೀಣ, ಜಿಲ್ಲಾ ಮೇಲ್ವಿಚಾರಕ ಮಾಲತೇಶ ಸಜ್ಜನರ ಆಪ್ತಸಮಾಲೋಚಕ ಅಮರೇಶ ಅಂಗಡಿ & ಪಲ್ಲವಿ ದೇಸಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.