
ಬಡವರ ಭದ್ರತೆ ಕಾಂಗ್ರೆಸ್ ಪಕ್ಷ
ಪಕ್ಷ ಗೆಲ್ಲುವವರೆಗೂ ಶ್ರಮಿಸಿ
ರಾಜಶೇಖರ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ದೇಶದ ಜನತೆಗೆ ಬಿಜೆಪಿಯಿಂದ ಭಾಷಣದ ಭರವಸೆ ಮಾತ್ರಸಿಗುತ್ತದೆ , ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ ಎಂದು ರಾಜಶೇಖರ ಹಿಟ್ನಾಳ ಹೇಳಿದರು.
ಅವರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಮಾತನಾಡುತ್ತಿದ್ದರು.
ರಾಜ್ಯದ ಕಾಂಗ್ರೆಸ್ ಐದು ಗ್ಯಾರಂಟಿ ನೀಡಿ ಈಡೇರಿಸಿದೆ, ನೂರುಕೋಟಿ ಹೆಚ್ಚು ಮಹಿಳೆಯರು ಉಚಿತ ಬಸ್ ಪ್ರಯಾಣ ಮಾತನಾಡುತ್ತಿದ್ದಾರೆ , ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತನಾಡಲ್ಲಾ, ಅವರ ಆಲೋಚನೆಗಳೆ ಬೆರೆ ದರ್ಮ ಹಾಗೂ ಜಾತಿ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ ಎಂದರು.
ಈ ಭಾರಿ ಕಾಂಗ್ರೆಸ್ ಎಲ್ಲರನ್ನು ನಂಬಿದೆ ನೂರಕ್ಕೆ ನೂರು ಭರವಸೆ ಈಡೆರಿಸಿ ಚುನಾವಣೆಗೆ ತೇರಳಲಿದೆ, ಮಹಿಳೆಯರ ಹೆಚ್ಚುತಗಳು ಕಾಂಗ್ರೆಸಗೆ ಬರಲಿವೆ,ಇಂಡಿಯಾ ಮೈತ್ರೊಕೂಟ ಅಧಿಲಾರಕ್ಕೆ ಬಂದ್ರೆ ಬಡವರ ಕಲ್ಯಾಣ ವಾಗಲಿದೆ , ಕಾರ್ಯಕರ್ತರು ವಿರ್ಶಮಿಸದೆ ಕೆಲಸ ಮಾಡಿ ಗೆಲ್ಲಿಸಿ ಎಂದು ಮನವಿ ಮಾಟಿದರು.
ಶಾಸಕ ಕೆ, ರಾಘವೇಂದ್ರ ಹಿಟ್ನಾಳ ಮಾತನಾಡಿ ಗ್ಯಾರಂಟಿ ಯೋಜನೆಗಳು ನಮ್ಮ ಗೇಲುವಿಗೆ ಸಹಕಾರಿ ಯಾಗಲಿವೆ ಮುಂದಿನ ದಿನಗಳಲ್ಲಿ ಬಿಜೆಪಿ ಸುಳ್ಳು ಜನರಿಗೆ ಅರ್ಥವಾಗಲಿದೆ.
ಕೊಪ್ಪಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಮಾಡಿ, ಎಂಟು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗುವಂತಹ ಕೆಲಸ ಮಾಡುತ್ತೆವೆ.
ಪ್ರತಿಯೊಬ್ಬರೂ ಅಭ್ಯರ್ಥಿಯಾಗಿ ಕೆಲಸ ಮಾಡಿ ಗೆಲುವಿಗೆ ಶ್ರಮಿಸಿ, ಪ್ರತಿ ಗ್ರಾಮ ಹಾಗೂ ಪ್ರತಿ ಮನೆಗೆ ಪಕ್ಷದ ಸಿದಾಂತ ಮನವರಿಕೆ ಮಾಡಿ ಕೊಟ್ಟು ಗೆಲಿಸಿ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಶಾಂತಣ್ಣ ಮುದುಗಲ್, ಕೆ, ಬಸವರಾಜ ಹಿಟ್ನಾಳ, ಟಿ ಜನಾರ್ದನ, ಗೂಳಪ್ಪ ಹಲಗೇರಿ, ಅಮ್ಜದ್ ಪಟೇಲ್ , ಪ್ರಸನ್ನ ಗಡಾದ, ಯಮನಪ್ಪ ಕಬ್ಬೆರ್, ಎಂ, ಕಾಟನ್ ಪಾಷ, ಕೆ, ಎಂ ಸೈಯದ್. ಶ್ರೀಮತಿ ಜೋತಿ ಗೋಂಡಬಾಳ. ಗಾಳೇಪ್ಪ ದದೇಗಲ್ಲ್ ಇತರರು ಇದ್ದರು.