25gvt01

ಶಾಸಕರ ಜನಸಂಪರ್ಕ ಕಾರ್ಯಾಲಯ ಉದ್ಘಾಟನೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 26- ಬರುವ ದಿನದಲ್ಲಿ ಶಿಘ್ರದಲ್ಲಿಯೇ ವೆಂಕಟಗಿರಿ,ಗAಗಾವತಿ ನಗರದಲ್ಲಿ ಎರಡು ನೂತನ ಯಾತ್ರಿ ನಿವಾಸ ನಿರ್ಮಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.

ತಾಲೂಕಿನ ವೆಂಕಟಗಿರಿ ಗ್ರಾಮದಲ್ಲಿ ನೂತನ ಶಾಸಕರ ಜನಸಂಪರ್ಕ ಕಾರ್ಯಾಲಯದ ಉದ್ಘಾಟನೆ ನೆರವೇರಿಸಿ ಕಾರ್ಯಕರ್ತರಿಂದ ಗೌರವ ಸರ್ಮಪಣೆ ಸ್ವಿಕರಿಸಿ ಮಾತನಾಡಿ ಹಿಂದೆ ನಾನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದಾಗ ಪ್ರವಾಸೋದ್ಯಮ ಸಚಿವನಾಗಿ ಗಂಗಾವತಿ ನಗರದ ಚನ್ನಮಲ್ಲಿಕಾರ್ಜುನ(ತಾತನ) ಮಠಕ್ಕೆ ಯಾತ್ರಿ ನಿವಾಸ ನಿರ್ಮಿಸಿ ಶಾಸಕ ಪರಣ್ಣ ಮುನವಳ್ಳಿ ಶಾಸಕರಾಗಿದಾಗ ಒಟ್ಟು ಮೂರುಕಡೆ ಪ್ರಸ್ತಾವನೆ ಸಲ್ಲಿಸಿದ್ದರು.

ವೆಂಕಟಗಿರಿ ವೆಂಕಟೇಶ್ವರ ದೆವಸ್ಥಾನದಲ್ಲಿ ಯಾತ್ರಿ ನಿವಾಸ ಹಾಗೂ ಗಂಗಾವತಿ ಹಿರೆಜಂತಕಲ್ ಪ್ರಸನ್ನ ಪಂಪಾಪತಿ ದೇವಸ್ಥಾನದಲ್ಲಿ ಯಾತ್ರಿ ನಿವಾಸ ಜೂನ ೫ರನಂತರ ಶಂಕುಸ್ಥಾಪನೆ ನೇರವೆರಿಸಲಾಗುವುದು.

ಈಗಾಗಲೇ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲರೊಂದಿಗೆ ಮಾತನಾಡಿ ಮಂಜೂರಾತಿ ಪಡೆದುಕೊಳ್ಳಲಾಗಿದೆ. ಒಂದುವರ್ಷದ ಹಿಂದೆ ನಾನು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ ಹೇಳಿದಂತೆ ಮೂರು ಹೊಬಳಿ ಮಟ್ಟದಲ್ಲಿ ಶಾಸಕರ ಜನ ಸಂಪರ್ಕ ಕಾರ್ಯಾಲಯ ಮಾಡಿ ಗ್ರಾಮಿಣ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದ್ದೆ. ಇಂದು ವೆಂಕಟಗಿರಿ ಗ್ರಾಮದಲ್ಲಿ ನೂತನ ಶಾಸಕರ ಜನ ಸಂಪರ್ಕ ಕಾರ್ಯಾಲಯ ಸರ್ಮಪಿದ್ದವೆ. ಪ್ರತಿಯೋಂದು ತಿಂಗಳು ತಾಲೂಕ ಮಟ್ಟದ ಅಧಿಕಾರಿಗಳನ್ನು ಕರೆಯಿಸಿ ಸ್ಥಳದಲ್ಲಿಯೇ ಸಮಸ್ಯೆಗಳು ಇತ್ಯರ್ಥಗೋಳಿಸಲಾಗುವುದು. ಜನರು ಗಂಗಾವತಿಗ ಅಲೆಯುವುದು ಬೆಡ ಎನ್ನುವ ಉದ್ದೇಶದಿಂದ ಜನರ ಮನೆ ಬಾಗಿಲಿಗೆ ಸ್ಪಂದಿಸಲು ತಿರ್ಮಾನಿಸಿದ್ದವೆ. ಶಾಸಕರ ಜನ ಸಂಪರ್ಕ ಕಾರ್ಯಾಲಯದಲ್ಲಿ ಸಾರ್ವಜನಿಕರು ಅಹವಾಲು ಸ್ವಿಕರಿಸಲಾಗುವುದು. ಇಬ್ಬರು ಯುವಕರಿಗೆ ಹೊಬಳಿಯ ಎಲ್ಲಾ ಗ್ರಾಮಗಳಿಗೂ ಕಳುಹಿಸಿ ಸರಕಾರದ ಯೋಜನೆ, ಇನ್ನಿತರ ಸಮಸ್ಯೆಗಳ ಮನವಿ ಸ್ವಿಕರಿಸಿಕೊಂಡು ಬರುವರು. ಆನೆಗೊಂದಿ,ಇರಕಲ್ ಗಡ ಗ್ರಾಮದಲ್ಲೂ ಜನ ಸಂಪರ್ಕ ಕಾರ್ಯಾಲಯವನ್ನು ಉದ್ಘಾಟಿಸಲಾಗುವುದು. ಕೆಲಸ ಮಾಡಲು ಶಾಸಕನಾಗಿದ್ದನೆ. ಗಂಗಾವತಿ ಕ್ಷೇತ್ರದ ಸರ್ವೋತುಮುಖ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದರು.

ಮಾಜಿ ಸಂಸದ ಶಿವರಾಮಗೌಡ,ಮಾಜಿ ಶಾಸಕ ಪರಣ್ಣ ಮುನವಳ್ಳಿ
ಮಾತನಾಡಿದರು.

ಈ ಸಂದರ್ಭದಲ್ಲಿ ಕಾಡಾ ಮಾಜಿ ಅಧ್ಯಕ್ಷ ಹೆಚ್ ಗಿರೇಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಘನಾಳ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಚನಪ್ಪ ಮಳಗಿ ವಕೀಲ, ಬಿಜೆಪಿ ನಗರ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಮನೋಹರಗೌಡ ಹೇರೂರ, ಅಮರೇ ಗೌಡ, ಶ್ರೀಧರ್ ಕೆಸರಟ್ಟಿ, ಚನ್ನವೀರನ ಗೌಡ, ಯಮನೂರ್ ಚೌಡ್ಕಿ, ಚಂದ್ರು ಹಿರೂರು, ಸಂಗಮೇಶ್ ಬಾದವಾಡಗಿ, ಜಿಪಂ ಮಾಜಿ ಸದಸ್ಯರುಗಳಾದ ವಿರುಪಾಕ್ಷಗೌಡ, ಹೆಚ್.ಎಂ.ಸಿದ್ದರಾಮ ಸ್ವಾಮಿ, ಹಾಗೂ ಷಣ್ಮುಖ ಮಳಿಕೇರಿ, ಹುಸೇನ್ ಬಾಷಾ, ಮುಸ್ತಾಕ್ ಆಲಿ, ವೆಂಕಟೇಶ್ ಆನಂದ ವೀರೇಶ್ ಬಲಕುಂದಿ, ಸೈಯದ್ ಜಿಲಾನ್ ಪಾಷಾ ಖಾದ್ರಿ, ದುರ್ಗಪ್ಪ ದಳಪತಿ, ಕಾಳಿಂಗ ಹತ್ತಿಮರದ, ವಿಶ್ವನಾಥ್ ಮಾಲಿ ಪಾಟೀಲ್, ಅರ್ಜುನ್ ನಾಯಕ್, ಪಂಪಣ್ಣ ನಾಯಕ್, ಆನಂದ ಗೌಡ, ರಮೇಶ್ ಹೊಸಮಲಿ, ನಿತೀಶ್, ಆನಂದ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!