
ಬಲತ್ಕಾರಿಗಳು ಕಾಮುಕರು ಡಕಾಯತರು ಯಾಕೆ ನಿಮ್ಮ ಪಕ್ಷ ಸೇರುತ್ತಿದ್ದಾರೆ : ಪ್ರಕಾಶ್ ರೈ
ಕರುನಾಡ ಬೆಳಗು ಸುದ್ದಿ
ವಿಜಯನಗರ, 30- ನಗರದ ಗೌತಮ ಬುದ್ಧ ಫಂಕ್ಷನ್ ಹಾಲ್ ನಲ್ಲಿ ಸಂವಿಧಾನ ರಕ್ಷಣಾ ಸಮಿತಿಯಿಂದ “ಜಾಗೃತಿ ಸಮಾವೇಶ”ವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾವೇಶದಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಇದರಲ್ಲಿ ಬಹುಭಾಷನಟ ಹಾಗೂ ಖ್ಯಾತ ಚಿತ್ರನಟ ಪ್ರಕಾಶ ರಾಜ್ ಭಾಗಿಯಾಗಿ ಸಂವಿಧಾನ ರಕ್ಷಣೆ ಮಾಡುವ ಕುರಿತು ಮಾತನಾಡಿ ಬಲತ್ಕಾರಿಗಳು ಕಾಮುಕರು ಯಾಕೆ ನಿಮ್ಮ ಪಕ್ಷ ಸೇರುತ್ತಿದ್ದಾರೆ ಮಹಾ ಪ್ರಭುಗಳೇ ಎಂದು ಮೋದಿಗೆ ಪ್ರಶ್ನೆ ಮಾಡಿದರು. ಮಹಾಪ್ರಭು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದೀಯ, 2ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೇಲೆ ಆಗಿರೋದು ರಾಸಲೀಲೆ ಅಲ್ಲ ಅದು ವಿಕೃತ ಮನಸ್ಸಿನ ಕಾಮುಕ ಕಾರ್ಯ ಇದರ ಬಗ್ಗೆ ಯಾಕೆ ಮಹಾಪ್ರಭು ಮಾತನಾಡುತ್ತಿಲ್ಲ ಮತ್ತು ಒಂದು ಪ್ರತಿಭಟನೆ ನಡೆಯುತ್ತಿಲ್ಲ ಅವರೆಲ್ಲ ಹಿಂದೂ ಮಹಿಳೆಯರಲ್ವಾ.
ನಾವು ಕೇವಲ ಚಿಹ್ನೆಗಳನ್ನು ನೋಡಿ ಓಟ್ ಮಾಡ್ತಾ ಹೋದರೆ ಹೇಗೆ ರೈತರಿಗೆ ಪರಿಹಾರ ಬರಲಿಲ್ಲ, ಉದ್ಯೋಗ ಬರಲಿಲ್ಲ, ಬಡವರಿಗೆ ಗ್ಯಾರಂಟಿ ಕೊಡಕ್ಕಾಗಲ್ಲ ಅಂತಾರೆ, ಉದ್ಯಮಿಗಳಾದ ಸ್ನೇಹಿತರಿಗೆ ಮತ್ತು 3ಪರ್ಸೆಂಟ್ ಇರುವವರಿಗೆ ಲಕ್ಷ ಲಕ್ಷ ಕೋಟಿ ಕೊಡ್ತಾ ಇದೀಯಾ, ಅವರ ಸಾಲ ಮನ್ನಾ ಮಾಡ್ತಾ ಇದ್ದೀಯಾ ಅದು ಯಾವ ಕಾರಣಕ್ಕೆ.
400 ಬಾರ್ ಎಂದು ಹೇಳುತ್ತಿದ್ದೀಯಾ ಆ ನಂಬಿಕೆ ನಿನಗಿದ್ದರೆ ಮತ್ಯಾಕ ಕಳ್ಳರನ್ನು, ಧರಡೆಕೋರರನ್ನು ರೇಪಿಸ್ಟ್ಗಳನ್ನ, ಭ್ರಷ್ಟಾಚಾರಿಗಳನ್ನು, ನಿಮ್ಮ ಪಕ್ಷಕ್ಕೆ ಸೇರಿಸ್ಕೊಳ್ಳುತ್ತಿದ್ದೀಯಾ ವಾಷಿಂಗ್ ಮಷೀನ್ ಆ ನಿಮ್ಮದು. ಮೊನ್ನೆವರೆಗೂ ಅಜಿತ್ ಪಾಲ್ ಕೋಟ್ಯಾಂತರ ರೂಪಾಯಿ ಹಗರಣ ಮಾಡಿದ್ದಾನೆ ಒಳಗಾಗುತ್ತೇವೆ ಎಂದು ಹೇಳುತ್ತಿದ್ದರು ಪಕ್ಷಕ್ಕೆ ಸೇರಿದ ತಕ್ಷಣ ಎಲ್ಲ ಎಲ್ಲಾ ಕೇಸು ವಾಪಸ್ ತಗೊಂಡಿದಿರಿ. ಬ್ರಿಜ್ ಭೂಷಣ್ ಸಹ ಹಾಗೆ. ಒಂದು ರಾಜ್ಯ ಸರ್ಕಾರ ಹೆಂಗಸರಿಗೆ ಫ್ರೀ ಬಸ್ಸು ಬಿಟ್ಟರೆ ಆ ಫ್ರೀ ಬಸ್ಸಿನಿಂದ ಹಾದಿ ತಪ್ಪಿದ ಹೆಂಗಸರು ಎಂದು ಹೇಳಿದ್ರಿ . ನಿಮ್ಮ ಮನೆ ದಾರಿ ತಪ್ಪಿದ ಮನೆಎಲ್ಲಿದೆ ಹೇಳಪ್ಪ ಈಗ ಎಂದು ಅವರ ದಾಟಿಯಲ್ಲಿ ಪ್ರಶ್ನೆಗಳ ಸುರಿಮಳೆ ಗೈದರು.
ಪ್ರಧಾನಿಯನ್ನು ನಾವು ಆಯ್ಕೆ ಮಾಡುವುದಿಲ್ಲ ನಾವು ಆಯ್ಕೆ ಮಾಡಿದ ವ್ಯಕ್ತಿಗಳು ಅವರನ್ನು ಆಯ್ಕೆ ಮಾಡುತ್ತಾರೆ ಈ ಮಹಾಪ್ರಭು ನನ್ನನ್ನು ನೋಡಿ ಓಟು ಹಾಕಿ ನನ್ನನ್ನು ಪ್ರಧಾನಿಯಾಗಿ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾನೆ. ಪ್ರಜಾಪ್ರಭುತ್ವದ ಅರಿವಿಲ್ವಾ ಇವರಿಗೆ. ಅದಕ್ಕಾಗಿ ನಾವು ನಮ್ಮ ಸ್ಥಳೀಯ ವಿದ್ಯಾವಂತ ಯುವಕರನ್ನು, ಯುವತಿಯರನ್ನು, ರೈತರಿಗೆ ಸ್ಪಂದಿಸುವವರನ್ನು ಆಯ್ಕೆ ಮಾಡಿ ಬೆಳೆಸಬೇಕು.
ಪ್ರಜಾಪ್ರಭುತ್ವವನ್ನು ಉಳಿಸಬೇಕು. ಇದು ರಾಜ್ಯದ ಚುನಾವಣೆ ಅಲ್ಲ ದೇಶದ ಚುನಾವಣೆ. ಪಾರ್ಲಿಮೆಂಟಿಗೆ ಹೋಗುವವರು ನಮ್ಮ ಮಕ್ಕಳ ಭವಿಷ್ಯದ ಬಗ್ಗೆ, ಆರ್ಥಿಕ ಪರಿಸ್ಥಿತಿಯ, ರೈತರ ಬಗ್ಗೆ ಕಳಕಳ ಹೊಂದಿರುವ ಮತ್ತು ಕಾನೂನುಗಳನ್ನು ಮಾಡುವ ವ್ಯವಸ್ಥೆಗೆ ಹೋಗುವವರು ನಮ್ಮ ಪ್ರತಿನಿಧಿಗಳಾಗಿರಬೇಕು. ಕಳೆದ ಬಾರಿ 20 ಜನರನ್ನು ಕಳುಹಿಸಿದ್ದೆವು ಆದರೆ ಅವರು ಈ ಮಹಾಪ್ರಭುಗಳ ಆಸ್ಥಾನದಲ್ಲಿ ಹೊಗಳು ಭಟ್ಟ ರಾಗಿದ್ದರು. ನಾಚಿಕೆ ಮಾನ ಇಲ್ವಾ ಇವರಿಗೆ ಇಡೀ ಭಾರತದ ಇತಿಹಾಸದಲ್ಲಿ ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟಿಗೆ ಹೋಗಿದ್ದು ಇದೇ ಮೊದಲು ಇಂತಹ ಸರ್ಕಾರ ಬೇಕಾ ನಮಗೆ ಎಂದು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲಾ ಪ್ರಚಾರ ಮಾಡುತ್ತಾ ಸುಳ್ಳುಗಳನ್ನು ಹೇಳುತ್ತಾ ನಾಚಿಕೆ ಇಲ್ಲದೆ ಮತ ಕೇಳುತ್ತಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಧರ್ಮದ ಕಿಚ್ಚನ್ನು ಹಚ್ಚಿದ್ದಾರೆ ಧರ್ಮ ಜಾತಿ ಆಧಾರಗಳ ಮೇಲೆ ರಾಜಕೀಯ ಮಾಡುತ್ತಿ ದ್ದಾರೆ. ದೇಶದಲ್ಲಿ ಬದಲಾವಣೆ ತರಬೇಕಾಗಿದೆ ಹಾಗಾಗಿ ಸುಳ್ಳು ಹೇಳುವ ಮಹಾಪ್ರಭುವನ್ನು ನಂಬಬೇಡಿ ಒಳ್ಳೆ ವ್ಯಕ್ತಿಯನ್ನು ಆರಿಸಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮನವಿ ಮಾಡಿದರು.
ಸಮಾದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ರೈತ ಮುಖಂಡ ವೀರ ಸಂಗಯ್ಯ ಹಿರಿಯ ಹೋರಾಟಗಾರ ಕರಿಯಪ್ಪ ಗುಡಿಮನಿ, ಜಂಬಯ್ಯ ನಾಯಕ್, ಅಡ್ವಕೇಟ್ ಸರ್ದಾರ್ ಇತರರಿದ್ದರು.