
ಬಳ್ಳಾರಿಯ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆಮತ ನೀಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 26- ಬಳ್ಳಾರಿ ಸಂಪೂರ್ಣ ಅಭಿವೃದ್ಧಿ ಆಗಬೇಕೆಂದರೆ ಅದು ಕೇವಲ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ, ಬಳ್ಳಾರಿ ಲೋಕಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಳಿಂದ ಬಿ ಶ್ರೀರಾಮುಲು ಅವರಿಗೆ ಮತ ನೀಡಿದ ಮಾತ್ರ ಸಾಧ್ಯ ಎಂದು, ಕೌಲ್ ಬಜಾರ್ ವಿಭಾಗದ ಬಿಜೆಪಿ ಮಂಡಲ ಅಧ್ಯಕ್ಷ, ವಿ ನಾ ಗರಾಜ ರೆಡ್ಡಿ ಇಂದು ಕಾಲ್ ಬಜಾರ್ ಏರಿಯಾದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಇಂದು ಮುಂಜಾನೆ ಕೌಲ್ ಬಜಾರ್ ಭಾಗದಲ್ಲಿ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಪ್ರಚಾರದ ಕರಪತ್ರಗಳನ್ನು ಮತದಾರರಿಗೆ ನೀಡಿ, ಹಿಂದಕ್ಕೆ ಶ್ರೀರಾಮುಲು ಅವರು ಅಧಿಕಾರದಲ್ಲಿದ್ದಾಗ ಕೈಗೊಂಡ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ತಿಳಿಸಿದರು.
ಅಷ್ಟೇ ಅಲ್ಲದೆ ಮೇ ತಿಂಗಳು 7 ನೇ ತಾರೀಕು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಸ್ಥಾನಕ್ಕೆ ಸ್ಪರ್ಧಿಸಿರುವ ಶ್ರೀರಾಮುಲು ಅವರಿಗೆ ಮತ ನೀಡಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ, ಕೆ ಶ್ಯಾಮ್ ಸುಂದರ್,ವೆಂಕಟೇಶ್, ಕಾರ್ಪೊರೇಟರ್ ಗೋವಿಂದರಾಜುಲು,ಜೊತೆಗೆ ಹಲವಾರು ಮಂದಿಬಿಜೆಪಿ ಕಾರ್ಯಕರ್ತರು ಈ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.