
ಇನ್ನರ್ ವೀಲ್ ಕ್ಲಬ್ ನಿಂದ ಬಾಣಂತಿಯರಿಗೆ ಸಹಾಯ
ಅಭಿನಂದಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕರು
ಕರುನಾಡ ಬೆಲಗು ಸುದ್ದಿ
ಬಳ್ಳಾರಿ, 04- ನಗರದ ಇನ್ನರ್ ವೀಲ್ ಕ್ಲಬ್ ಅವರಿಂದ ಬಾಣಂತಿಯರ ಮಹಿಳೆಯರ ಅನುಕೂಲಕ್ಕಾಗಿ, ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ನೈಟಿಗಳನ್ನು ದೇಣಿಗೆಯಾಗಿ ನೀಡಿದರು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷ, ಎನ್ ಟಿ ಲಕ್ಷ್ಮಿ ಪ್ರಿಯ, ಮತ್ತು ಸದಸ್ಯರು ಅನಿತಾ, ವಿ. ಜೈನ್, ಇವರು ಜಿಲ್ಲಾ ಆಸ್ಪತ್ರೆಯ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಡಾ!! ಎನ್. ಬಸ ರೆಡ್ಡಿ, ಅವರನ್ನು ಭೇಟಿ ಮಾಡಿ ನೈಟಿಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ, ಅಧ್ಯಕ್ಷರು ಲಕ್ಷ್ಮಿ ಪ್ರಿಯಾ ಮಾತನಾಡುತ್ತಾ, ತಮ್ಮ ಸಂಘದ ವತಿಯಿಂದ ಬಳ್ಳಾರಿ ಸುತ್ತಮುತ್ತಲ ಹಲವಾರು ಸಾಮಾಜಿಕ ಕಾರ್ಯಕ್ರಮಗಳು ಕೈಗೊಂಡಿರುವಾಗಿ ತಿಳಿಸಿದರು.
ಪ್ರಧಾನವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಬರುವ ಮಹಿಳೆಯರ ಅನುಕೂಲಕ್ಕಾಗಿ ಈ ನೈಟುಗಳು ಎಷ್ಟು ಉಪಯೋಗಕರವಾಗಿವೆ ಎಂದು ತಿಳಿಸಿದರು. ಬಾಣಂತಿ ಮಹಿಳೆಯರು, ತಮ್ಮ ಮಗುವಿಗೆ ಎದೆಹಾಲು ಉಣಿಸಲು ಈ ನೈಟುಗಳು ಎಷ್ಟು ಅನುಕೂಲವಾಗಿವೆ ಎಂದು ತಿಳಿಸಿದರು.
ನಂತರ ಜಿಲ್ಲಾಸ್ಪತ್ರಿಯ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಡಾಕ್ಟರ್ ಬಸ ರೆಡ್ಡಿ ಮಾತನಾಡುತ್ತಾ, ಸಮಾಜ ಸೇವ ಮಾಡಬೇಕೆಂಬು ಆಸಕ್ತಿ ಇನ್ನರ್ ವೀಲ್ ಕ್ಲಬ್ ಅವರಿಗೆ ಇರುವದು ಅಭಿನಂದನೆಯ, ಇದೇ ರೀತಿಯಾಗಿ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾಜ ಸೇವಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ನಂತರ ಹೆರಿಗೆ ವಾರ್ಡಿನಲ್ಲಿರುವ ಮಹಿಳೆಯರಿಗೆ ನೈಟಿಗಳನ್ನು ಹಂಚಲಾಯಿತು.
ಕಾರ್ಯಕ್ರಮದಲ್ಲಿ, ಆಸ್ಪತ್ರೆಯ ನರ್ಸಿಂಗ್ ಸೂಪರ್ಇದೆಂಟ್, ಗ್ರೇಡ್ ಒನ್, ಜಿಕೆ ವಿಮಲಾಕ್ಷಿ, ಗ್ರೇಟು ಅಟೆಂಡರ್, ರುಚಿತಾ, ಹನುಮಂತ, ಅಟೆಂಡರ್ ರೇಣುಕಮ್ಮ ಜತೆಗೆ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.