
ಸಮಾಜಘಾತಕರಿಗೆ ಕಠಿಣ ಶಿಕ್ಷೆಯಾಗಲಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ ,೦೬- ಮಂಡ್ಯ, ಮೈಸೂರ್ ಮತ್ತು ಬೆಂಗಳೂರು ಭಾಗದಲ್ಲಿ ಸ್ತ್ರೀ ಬ್ರೂಣ ಹತ್ಯದಂತಹ, ಸಮಾಜಘಾತಕ ಘಟನೆಯಲ್ಲಿ ಭಾಗಿಯಾದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೆ ಈ ಜಾಲವನ್ನು ಭೇದಿಸಿ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಲು ಸಾಂಸ್ಕೃತಿಕ ಸಂಘಟನೆಯ ( ಎಐಎಂಎಸ್ ಎಸ್ ) ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷರಾದ ಈಶ್ವರಿಯವರು ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಸಮಾಜದಲ್ಲಿ ಮೌಢ್ಯತೆ ನೆಲೆಸಿದೆ ಎಂಬುದಕ್ಕೆ ಈ ಘಟನೆ ಎಂದರು. ಪ್ರಧಾನವಾಗಿ ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ 900 ಹೆಣ್ಣು ಬ್ರೂಣ ಹತ್ಯೆ ಮಾಡಿರುವಂತಹ ಸಮಾಜಘಾತಕ ಘಟನೆ ಈ ಘಟನೆಯ ಹಿಂದೆ ದೊಡ್ಡ ಜಾಲ ವಿರುವ ಶಂಕೆ ಇದೆ.
ಈ ಘಟನೆಗೆ ಸಂಬಂಧಿಸಿದಂತೆ ವೈದ್ಯರು ಸೇರಿದಂತೆ ಹತ್ತು ಜನ ಆರೋಪಿಗಳನ್ನು ಈಗಾಗಲೇ ಬಂದಿಸಲಾಗಿದೆ. ಇಬ್ಬರೂ ಆರೋಗ್ಯ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ, ಈ ಘಟನೆಯ ಕುರಿತು ತನಿಖೆ ನಡೆಸಲು ಸರ್ಕಾರವು ಸಿಐಡಿ ಗೆ ವಹಿಸಿದೆ. ಆದಷ್ಟು ತ್ವರಿತವಾಗಿ ತನಿಖೆ ನಡೆದು ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ವಿದ್ಯಾವತಿ, ವಿಜಯಲಕ್ಷ್ಮಿ ಗಿರಿಜಾ ಅಭಿಲಾಷ ಸೌಮ್ಯ ಗಳ ಜೊತೆಗೆ ಹಲವಾರು ಮಂದಿ ಉಪಸ್ಥಿತರಿದ್ದರು.