a21b2d0a-0a59-4d10-babe-240b48913c93

ಕೆಆರ್‌ಪಿ ಪಕ್ಷದ ಬಳ್ಳಾರಿ ಜಿಲ್ಲಾ ಘಟಕಕ್ಕೆ

ನೂತನ ಪದಾಧಿಕಾರಿಗಳ ನೇಮಕ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,ಡಿ,೨೨ – ಮುಂದಿನ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಜಿಲ್ಲಾ ಮಟ್ಟದ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆದಿದ್ದು, ಪಕ್ಷದ ಜಿಲ್ಲಾಧ್ಯಕ್ಷ ದಮ್ಮೂರು ಶೇಖರ್ ಅವರು ಜಿಲ್ಲಾ ಶಕ್ತಿ ಘಟಕಗಳ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಬಳ್ಳಾರಿ ನಗರದಿಂದ ಬಿ.ಸುನೀಲ್ ಕುಮಾರ್ ರೆಡ್ಡಿ, ಬಳ್ಳಾರಿ ಗ್ರಾಮಾಂತರದಿಂದ ಶ್ರೀನಿವಾಸ್, ಕಂಪ್ಲಿ ಕ್ಷೇತ್ರದಿಂದ ಬಿ.ಮಲ್ಲಿಕಾರ್ಜುನ ಆಚಾರ್, ಬಳ್ಳಾರಿ ನಗರದಿಂದ ಹುಂಡೇಕರ್ ರಾಜೇಶ್, ಜಿಲ್ಲಾ ಉಪಾಧ್ಯಕ್ಷರುಗಳಾಗಿ ಸಿರುಗುಪ್ಪಾದಿಂದ ದರೂರು ಶಾಂತನಗೌಡ, ಬಳ್ಳಾರಿ ನಗರದಿಂದ ಉಮಾರಾಜ್, ಕಂಪ್ಲಿ ಕ್ಷೇತ್ರದಿಂದ ಆರ್.ಪ್ರಭು ಶೇಖರ್ ಗೌಡ ಹಾಗೂ ಕೆ.ಮಲ್ಲಯ್ಯ, ಸಂಡೂರು ಕ್ಷೇತ್ರದಿಂದ ಶ್ರೀನಿವಾಸುಲು ಪಿ.ವಿ, ಸಿರುಗುಪ್ಪದಿಂದ ಸಿದ್ದಯ್ಯ ಸ್ವಾಮಿ ಹೆಚ್.ಕೆ., ಬಳ್ಳಾರಿ ಗ್ರಾಮಾಂತರ( ಕೌಲ್ ಬಜಾರ್) ದಿಂದ ಕೌಲ್ ಬಜಾರ್ ಚಂದ್ರ ಹಾಗೂ ಜಿ.ತಿಮ್ಮಪ್ಪ, ಜಿಲ್ಲಾ ಕಾರ್ಯದರ್ಶಿಗಳಾಗಿ ಕಂಪ್ಲಿಯಿಂದ ಪಿ.ಜ್ಯೋತಿ, ಸಂಡೂರಿನಿಂದ ತಿರುಮಲ, ಸಿರುಗುಪ್ಪದಿಂದ ನಾಗಪ್ಪ, ಬಳ್ಳಾರಿ ಗ್ರಾಮಾಂತರದಿಂದ ಪಿ.ಗೋವಿಂದ ರಾಜುಲು, ಜಿಲ್ಲಾ ಖಜಾಂಚಿಯಾಗಿ ಬಳ್ಳಾರಿ ನಗರದ ಕೆ.ಸತೀಶ್, ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿಗಳಾಗಿ ಬಳ್ಳಾರಿ ನಗರದ ವೀರಶೇಖರ್ ರೆಡ್ಡಿ, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಬಳ್ಳಾರಿ ನಗರದ ನರಾಲ ರೋಶಿರೆಡ್ಡಿರವರನ್ನು ನೇಮಕ ಮಾಡಲಾಗಿದೆ.
ಕೆಆರ್‌ಪಿ ಪಕ್ಷದ ಶಕ್ತಿ ಘಟಕಗಳ ಜಿಲ್ಲಾ ಪದಾಧಿಕಾರಿಗಳನ್ನು ಸಹ ಇದೇ ಸಂದರ್ಭದಲ್ಲಿ ನೇಮಕ ಮಾಡಲಾಗಿದೆ, ಜಿಲ್ಲಾ ಮಹಿಳಾ ಶಕ್ತಿ ಘಟಕದ ಅಧ್ಯಕ್ಷರನ್ನಾಗಿ ಬಳ್ಳಾರಿ ನಗರದ ಹಂಪಿ ರಮಣ, ಜಿಲ್ಲಾ ಹಿಂದುಳಿದ ವರ್ಗಗಳ ಶಕ್ತಿ ಘಟಕದ ಅಧ್ಯಕ್ಷರನ್ನಾಗಿ ಬಳ್ಳಾರಿ ಗ್ರಾಮಾಂತರದಿಂದ ಕೊಳಗಲ್ಲು ಕೆ.ಬಿ.ಅಂಜಿನಿ, ಜಿಲ್ಲಾ ಅಲ್ಪ ಸಂಖ್ಯಾತರ ಶಕ್ತಿ ಘಟಕದ ಅಧ್ಯಕ್ಷರನ್ನಾಗಿ ಬಳ್ಳಾರಿ ನಗರದ ಶೇಕ್ ದಾದಾಪೀರ್, ಜಿಲ್ಲಾ ರೈತ ಶಕ್ತಿ ಘಟಕದ ಅಧ್ಯಕ್ಷರನ್ನಾಗಿ ಬಳ್ಳಾರಿ ಗ್ರಾಮಾಂತರದ ಪಿ.ಡಿ.ಹಳ್ಳಿಯ ಜಿ.ಶಿವಾರೆಡ್ಡಿ, ಜಿಲ್ಲಾ ಪರಿಶಿಷ್ಟ ಪಂಗಡ ಶಕ್ತಿ ಘಟಕದ ಅಧ್ಯಕ್ಷರನ್ನಾಗಿ ( ಎಸ್ಟಿ) ಬಳ್ಳಾರಿ ನಗರದ ಎನ್.ರಾಘವೇಂದ್ರ, ಜಿಲ್ಲಾ ಕಾರ್ಮಿಕ ಶಕ್ತಿ ಘಟಕದ ಅಧ್ಯಕ್ಷರನ್ನಾಗಿ ಬಳ್ಳಾರಿ ಗ್ರಾಮಾಂತರದ ಮಾರೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಶಕ್ತಿ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಳ್ಳಾರಿ ನಗರದ ಉಪ್ಪಾರ್ ಹನುಮೇಶ್, ಬಳ್ಳಾರಿ ಗ್ರಾಮಾಂತರ (ಕೌಲ್ ಬಜಾರ್) ಘಟಕದ ಅಧ್ಯಕ್ಷರನ್ನಾಗಿ ಕೌಲ್ ಬಜಾರ್‌ನ ಹೆಚ್,.ಇಕ್ಬಾಲ್, ಬಳ್ಳಾರಿ ಗ್ರಾಮಾಂತರ (ಕೌಲ್ ಬಜಾರ್) ಅಲ್ಪ ಸಮಖ್ಯಾತರ ಶಕ್ತಿ ಘಟಕದ ಅಧ್ಯಕ್ಷರನ್ನಾಗಿ ಕೌಲ್ ಬಜಾರ್‌ನ ದಾದಾಪೀರ್‌ರವರನ್ನು ನೇಮಕ ಮಾಡಿದ್ದಾರೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರು ಹಾಗೂ ಗಂಗಾವತಿ ಕ್ಷೇತ್ರದ ಶಾಸಕರಾದ ಜಿ.ಜನಾದನರೆಡ್ಡಿ, ಪಕ್ಷದ ಧುರೀಣರಾದ ಗಾಲಿ ಲಕ್ಷ್ಮಿ ಅರುಣ ಅವರ ನಿರ್ದೇಶನದಂತೆ ಈ ಎಲ್ಲ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ದಮ್ಮೂರು ಶೇಖರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!