
ಜ,(03)ರಂದು ಜಿಲ್ಲೆಯಾದ್ಯಂತ ನಾಲ್ಕು
ದಾರಿಗಳಲ್ಲಿ ಲಾರಿ ಮುಷ್ಕರ:ಪೆದ್ದಣ್ಣ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ :ಜ(01) ನಗರದ ಜಿಲ್ಲಾ ಕಛೇರಿಯ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಜಿಲ್ಲಾ ಲಾರಿ ಮಾಲೀಕರ ಸಂಘದ ವತಿಯಿಂದ ಸೋಮವಾರ ಬೆಳಗ್ಗೆ ಸುದ್ದಿಗೋಷ್ಠಿ ಏರ್ಪಡಿಸಲಾಯಿತು.
ಇದೇ ವೇಳೆಯಲ್ಲಿ ಜಿಲ್ಲಾ ಲಾರಿ ಮಾಲೀಕರ ಸಂಘ ಕಾರ್ಯದರ್ಶಿ ಎಂ ಎನ್ ಬಸವರಾಜ್ ರವರು ಮಾತನಾಡಿ,ಲಾರಿ ಮಾಲೀಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ನಮ್ಮ ಸಂಘದ ಕಡೆಯಿಂದ ಜಿಲ್ಲಾಧಿಕಾರಿಗಳಿಗೆ ಆಗ ಸಂಬಂಧಪಟ್ಟ ಇಲಾಖೆಗೆ ಮನವಿ ಪತ್ರವನ್ನು ಸಲ್ಲಿಸಿದರು, ಸಹ ಯಾವುದೇ ರೀತಿಯ ಕ್ರಮ ಹಾಗೂ ಪ್ರಯೋಜನ ಆಗಿರುವುದಿಲ್ಲ.
ಆದುದರಿಂದ ಲಾರಿ ಮಾಲೀಕರಾದ ನಮಗೆ ಇನ್ಸೂರೆನ್ಸ್ ಗಳು ರೋಡ್ ಟ್ಯಾಕ್ಸಿಗಳು ಮತ್ತು ಮಾಸಿಕ ಕಂತುಗಳು ಕಟ್ಟುವುದಕ್ಕೆ ಆಗದೆ ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಲಾರಿಗಳಿಗೆ ನಿಗದಿತ ಲೋಡು ಮಾಡದೆ ಹೆಚ್ಚುವರಿ ಯಾಗಿ ಲೋಡು ತುಂಬಿ ಒಂದು ಟೆನ್ನಿಗೆ ಮೂರು ನೂರು ರೂಪಾಯಿ ಕಡಿಮೆ ಮಾಡಿದ್ದಾರೆ. ಡೀಸೆಲ್, ಟೈರುಗಳು,ಬೆಲೆಗಳು ದಿನನಿತ್ಯದ ಮೂಲಭೂತ ಸೌಲಭ್ಯಗಳು ಮಾತ್ರ ಬೆಲೆ ಗಗನಕೇರಿದೆ. ನಮಗೆ ಚಾಲಕರಿಗೆ ಮತ್ತು ಕ್ಲೀನರ್ ಗಳಿಗೆ ಸಂಬಳ ನೀಡಲು ಆಗುತ್ತಿಲ್ಲ, ಹಾಗೂ ನಮ್ಮ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡಿಸಲು, ಫೀಸ್ ಕಟ್ಟಲು ಸಹ ಬಹಳ ತೊಂದರೆಯಾಗಿದೆ ಹಾಗೂ ನಮ್ಮ ಜೀವನ ನಡೆಸಲು ತುಂಬಾ ಕಷ್ಟಕರವಾಗಿದೆ. ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಪೆದ್ದಣ್ಣ ರವರು ಮಾತನಾಡಿ, ಜಿಲ್ಲೆಯದ್ದಾಂತ ನಾಲ್ಕು ರಸ್ತೆಗಳ ಕಡೆ ಲಾರಿ ಮಾಲೀಕರು ಡ್ರೈವರ್ ಕ್ಲೀನರ್ ಎಲ್ಲಾರು ಒಗ್ಗಟ್ಟಾಗಿ ಧರಣಿ ಮಾಡುತ್ತೇವೆ. ಹಾಗೂ ಇದೇ ತಿಂಗಳ ಮೂರನೇ ತಾರೀಕು ಬುಧವಾರದಂದು ನಮ್ಮ ಬೇಡಿಕೆಗಳು ಈಡೇರಿಸುವವರೆಗೆ ಬಳ್ಳಾರಿ ವ್ಯಾಪ್ತಿಗೆ ಬರುವ ಸ್ಪಂಜಾ ಐರನ್ ಕಾರ್ಖಾನೆಗಳಲ್ಲಿ ಲೋಡುಗಳನ್ನು ಮಾಡದೆ ನಮ್ಮ ಲಾರಿಗಳನ್ನು ಕಾರ್ಖಾನೆಗಳ ಮುಂದೆಯೇ ನಿಲ್ಲಿಸಿ ಮುಷ್ಕರ ಕೈಗೊಳ್ಳುತ್ತೇವೆಂದು ತಿಳಿಸಿದರು.
ಬೇಡಿಕೆಗಳು:
01, ಓವರ್ ಲೋಡ್ ತಡೆಗಟ್ಟಬೇಕು.
02, 2024ಕ್ಕೆ ಅನುಗುಣವಾಗಿ ಲಾರಿ ಬಾಡಿಗೆಗಳನ್ನು ಹೆಚ್ಚಿಸಬೇಕು.
03, ಲಾರಿ ಆರ್ಟಿಂಕ್ ಚಾರ್ಜ್ ನೀಡಬೇಕು.
ಈ ಸಂದರ್ಭದಲ್ಲಿ ವೈಟ್ ಶ್ರೀನಿವಾಸಲು ಎಂ ವಿಶ್ವನಾಥ ಎಚ್ ನಾರಾಯಣಸ್ವಾಮಿ, ಸೋಮಶೇಖರ, ತಿಪ್ಪಯ್ಯ ಇನ್ನು ಮುಂತಾದ ಲಾರಿ ಮಾಲೀಕರು ಸದಸ್ಯರು ಉಪಸ್ಥಿತರಿದ್ದರು.