
ನಗರ ಸಂಚಾರಕ್ಕೆ
ಬಸ್ಸುಗಳನ್ನು ಓಡಾಡಿಸುವಂತೆ ಅಧಿಕಾರಿಗೆ ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೬- ವಿವಿಧ ಕಾರಣಗಳಿಂದ ನಗರದಲ್ಲಿ ಸಂಚರಿಸುತ್ತಿದ್ದ ಬಸ್ಸು ಸರ್ವಿಸ್ ಗಳನ್ನು ನಿಲ್ಲಿಸಿದ್ದ, ಸಾರಿಗೆ ಅಧಿಕಾರಿಗಳು ಕೂಡಲೇ ಸಿಟಿ ಸರ್ವಿಸ್ ಬಸ್ ಗಳನ್ನು ಮತ್ತೆ ಪ್ರಾರಂಭಿಸಬೇಕೆಂದು ಸಂಬಂಧಿತ ಶಾಖಾಧಿಕಾರಿಗಳಿಗೆ ನಗರದ ಬಸವೇಶ್ವರನಗರ ನಿವಾಸಿಗಳು, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿಗಳು, ಬಿ ವಿಜಯಕುಮಾರ್ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ನಗರದ ನಾನಾ ಭಾಗದ ಬಡ ಜನರು ತಮ್ಮ ಕೆಲಸಗಳ ನಿಮಿತ್ತ ಸಿಟಿಯಲ್ಲಿ ಸಂಚರಿಸಬೇಕೆಂದರೆ ಆಟೋಗಳನ್ನು ಆಶ್ರಯಿಸುವ ಪರಿಸ್ಥಿತಿ ಉದ್ಭವವಾಗಿದೆ ಎಂದು, ಬಡ ಮಾಧ್ಯಮ ವರ್ಗ ಗಳಿಗಾಗಿ ಕೆಎಸ್ಆರ್ಟಿಸಿ ಬಸ್ಗಳನ್ನು ಮತ್ತೆ ಎಲ್ಲಾ ಭಾಗಗಳಿಗೆ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು. ಹಿಂದೆ ನಗರದ 21ನೇ ವಾರ್ಡಿನ ಬಸವೇಶ್ವರನಗರ ಸಂಗಮೇಶ್ವರ ದೇವಸ್ಥಾನದಿಂದ 19 ನೇ ವಾರ್ಡಿನ ಸತ್ಯನಾರಾಯಣ ದೇವಸ್ಥಾನದ ಮುಖಾಂತರ ಕೂಲ್ ಕಾರ್ನರ್ ಮಾರ್ಗವಾಗಿ ಇಂದಿರಾ ಆವೃತ್ತಗಳಿಗೆ ಚೆನ್ನಪ್ಪ ವೃತ್ತ ಮುಖಾಂತರ ಹೆಚ್ ಆರ್ ಗವಿಯಪ್ಪ ವೃತ್ತದ ಮೂಲಕ ಓ ಪಿಡಿಗೆ ದಿನನಿತ್ಯ ಜನಸಾಮಾನ್ಯರು ಒಡಾಡುವ ಸಲುವಾಗಿ ನಗರ ಸಂಚಾರ ಬಸ್ಸುಗಳ ಅವಶ್ಯಕತೆ ಇರುತ್ತದೆ.
ಈ ಮೊದಲು ಬಸ್ಸುಗಳ ಸಂಚಾರದ ವ್ಯವಸ್ಥೆ ಇತ್ತು, ಸತ್ಯನಾರಾಯಣ ಪೇಟೆಯ ಬ್ರಿಡ್ಜ್ ಸಮಸ್ಯೆಯಿಂದ ಸ್ಥಗಿತಗೊಂಡಿತ್ತು ಈಗ ಎಲ್ಲಾ ಅನುಕೂಲವಾದ ರಸ್ತೆಗಳು ಇರುತ್ತವೆ ಆದ್ದರಿಂದ ಬಸವೇಶ್ವರನಗರ ಸತ್ಯನಾರಾಯಣಪೇಟೆ ನಿವಾಸಿಗಳ ಅನುಕೂಲಕ್ಕಾಗಿ ಈ ಬಸ್ಸನ್ನು ಮತ್ತೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಿವಾಸಿಗಳು ಜೆ ವಿ,ಮಂಜುನಾಥ,ಪ್ರಕಾಶ್, ಭೋಜರಾಜ್, ಅಶೋಕ್ ಮುಂತಾದವರು ಉಪಸ್ಥಿತರಿದ್ದರು.