
ನವೆಂಬರ್ ನಂತರವೂ ಕಾಲುವೆಗಳಿಗೆ ನೀರು ಹರಿಸಿ ತುಂಗಭದ್ರಾ ರೈತ ಸಂಘ ಆಗ್ರಹ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 28- ತುಂಗಭದ್ರ ನೀರಾವರಿ ಸಮಿತಿಯ ಈ ಹಿಂದಿನ ಸಭೆಯ ತೀರ್ಮಾನದಂತೆ ನವಂಬರ್ ಹತ್ತರವರೆಗೆ ಕಾಲುವೆಗಳಿಗೆ ನೀರು ಬಿಡಲು ಸೂಚನೆ ನೀಡಲಾಗಿದ್ದು, ಕುಲದ ನೀರನ್ನು ನಂತರವೂ ಕಾಲುವೆಗಳಿಗೆ ಹರಿಸಬೇಕು ಎಂದು ತುಂಗಭದ್ರ ರೈತ ಸಂಘದ ಜಿಲ್ಲಾಧ್ಯಕ್ಷ, ಹಾಗೂ ಪ್ರಗತಿಪರ ರೈತರು, ಆದ ದರೂರು ಪುರುಷೋತ್ತಮ ಗೌಡ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಎಂದು ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ ತುಂಗಾ ಜಲಾಶಯದ ಮೇಲ್ಭಾಗದಲ್ಲಿರುವ ಸಿಂಗಟನೂರು ಹಾಗೂ ತುಂಗಾ ಮತ್ತು ಭದ್ರ ಜಲಾಶಯಗಳಲ್ಲಿ ನೀರಿನ ಕೊರತೆ ಇದ್ದು, ಅಲ್ಲಿನ ರೈತರ ಬೆಳೆಗಳಿಗೆ ನೀರಿನ ಕೊರತೆ ಆಗಲಿದೆ. ಈ ನಿಟ್ಟಿನಲ್ಲಿ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ನವೆಂಬರ್ ತಿಂಗಳ ಎರಡರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಸಲಿದ್ದಾರೆ ಎಂದರು. ಈಗಾಗಲೇ ತಮ್ಮ ಸಂಘ ನೇತೃತ್ವದಲ್ಲಿ ಉಪಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಲಾಶಯದ ಅಧಿಕಾರಿಗಳು ಸದಸ್ಯದ ಬಗ್ಗೆ ವಿವರಿಸಿರುವದಾಗಿ, ರೈತರ ಬೆಳೆಗಳು ಉಳಿಸಲು ನವಂಬರ್ 10 ನಂತರವೂ ನೀರು ಹರಿಸಲು ಮನವು ಮಾಡಿದರು. ರೈತರು ತಮ್ಮ ಜಮೀನುಗಳಲ್ಲಿ ಸಾಗುವಳಿ ಮಾಡಿದ ಬೆಳೆಗಳು ನೀರು ಇಲ್ಲದೆ ನಾಶವಾಗಲು ಬಿಡಬಾರದು ಎಂದರು. ಪತ್ರಿಕಾಗೋಷ್ಠಿಯಲ್ಲಿ ತುಂಗಭದ್ರ ರೈತ ಸಂಘದ ಪದಾಧಿಕಾರಿಗಳಾದ ಕೃಷ್ಣ ನಗರ ಕ್ಯಾಂಪಿನ ಶಿವಯ್ಯ, ಕೋಲ್ಡ್ ಸ್ಟೋರೇಜ್ ನ ರಾಮಕೃಷ್ಣ, ಅವೊಂಬಾವಿ ಶ್ರೀ ವೀರಭದ್ರ ರಾವ್ ಶ್ರೀಧರ್ ಗಡ್ಡಿ ವೀರನಗೌಡ ದರೂರು ರಂಜಾನ್ ಸಾಬ್ ದರೂ ವೀರಭದ್ರ ನಾಯ್ಕ ಸಂಗನಕಲ್ಲು ದೊಡ್ಡದಾಸಪ್ಪ ಶ್ರೀಧರ್ ಗಡ್ಡೆ ನಿರಂಜನ್ ಜಾಲಿಹಾಳ್ ಶ್ರೀಧರ್ ಗೌಡ ಮೊಕದ ಹೊನ್ನೂರು ಸಣ್ಣ ಅಂಜನಪ್ಪ ಹಾಗೂ ಹೆಚ್ ಎಲ್ ಸಿ ಕಾಲ್ ವ್ಯಾಪ್ತಿಯಲ್ಲಿ ಬರುವ ಕೊಳಗಲ್ಲು ಬಾದನಹಟ್ಟಿ ಶ್ರೀಧರ್ಗಟ್ಟೆ ಜಾಲಿಬೆಂಚಿ ಕೊರಲಗುಂದಿ ಗ್ರಾಮಗಳಿಂದ ಆಗಮಿಸಿದ ರೈತ ಮುಖಂಡರು ಉಪಸ್ಥಿತರಿದ್ದರು.