55

ಕುಡಿಯುವ ನೀರು ಸರಬರಾಜು ನಿಲ್ಲಿಸಿ ಮಾರ್ಚ್ 3 ರಂದು ಅನಿರ್ದಿಷ್ಟಾವಧಿ ಧರಣಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 01-  ಮಹಾನಗರ ಪಾಲಿಕೆಯಲ್ಲಿ ನೀರು ಸರಬರಾಜು ಮಾಡುವ ನೌಕರರನ್ನು ಪೌರ ಕಾರ್ಮಿಕರ ಮಾದರಿಯಲ್ಲೇ ಸುಮಾರು ವರ್ಷಗಳಿಂದ ಖಾಲಿ ಇರುವ ಹುದ್ದೆಗಳಿಗೆ ‘ಡಿ’ ವೃಂದದ ನೀರು ಸರಬರಾಜು ನೌಕರರನ್ನಾಗಿ ವಿಶೇಷ ನೇಮಕಾತಿ ಅಡಿಯಲ್ಲಿ ಮಾಡಿಕೊಳ್ಳಬೇಕೆಂದು ನೀರು ಸರಬರಾಜು ಮತ್ತು ದುರಸ್ತಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ನಗರದ ಮುಂಡ್ಲುರು ರಾಮಪ್ಪ ಸಭಾಂಗಣ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಟಿ.ಎಸ್.ಮಾರೆಪ್ಪ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಹಾನಗರ ಪಾಲಿಕೆಯಲ್ಲಿ ಸುಮಾರು 20-25 ವರ್ಷಗಳಿಂದ 131 ಜನ ನೌಕರರು ವಾಲ್ ಮ್ಯಾನ್, ಲೀಕೇಜ್, ಪಂಪೌಸ್, ಗಾರ್ಡನರ್, ಬೋರ್ ವೇಲ್ ನೌಕರರಾಗಿ ಕೆಲಸ ನಿರ್ವಹಿಸುತ್ತಾ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ 2023ರ ಮಾರ್ಚ್ 6 ರಿಂದ 2 ದಿನಗಳ ಕಾಲ ಅನಿರ್ಧಿಷ್ಠಾವಧಿ ಮುಷ್ಕರವನ್ನುಹಮ್ಮಿಕೊಂಡಿದ್ದೆವು. ಸದರಿ ಮುಷ್ಕರದ ಸ್ಥಳಕ್ಕೆ ಬೇಟಿ ನೀಡಿದ್ದ ಅಂದಿನ ಶಾಸಕರು, ಪಾಲಿಕೆಯ ಆಯುಕ್ತರು, ಮಹಾಪೌರರು ಹಾಗೂ ಎಲ್ಲಾ ಪಾಲಿಕೆ ಸದಸ್ಯರುಗಳುಮುಷ್ಕರ ನಿರತರಿಗೆ ತಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ, ಮುಷ್ಕರವನ್ನುಕೈಬಿಡಲು ಕೋರಿದ್ದರು.

ಸಾರ್ವಜನಿಕರ ಕುಡಿಯುವ ನೀರಿನ ಹಿತದೃಷ್ಟಿಯಿಂದ ಮುಷ್ಕರವನ್ನು ಅಂದು ತಾತ್ಕಾಲಿಕವಾಗಿ ಕೈಬಿಟ್ಟು ನಮಗೆ ವಹಿಸಿರುವ ಕೆಲಸ ಕಾರ್ಯಗಳಿಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದೇವೆ. ಭರವಸೆ ನೀಡಿ 2 ವರ್ಷಗಳಾದರೂ ಇಲ್ಲಿಯವರೆಗೂ ನಮ್ಮಗಳ ಯಾವುದೇ ಬೇಡಿಕೆಗಳು ಈಡೇರಿಸಿರುವುದಿಲ್ಲ. ಆದ್ದರಿಂದ ಹಿಂದಿನ 2024-25ನೇ ಸಾಲಿನೇ ಬಜೆಟ್ ಮಂಡನೆಯಲ್ಲಿ ನಮ್ಮ ನೇರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದಿಲ್ಲ. ಆದ್ದ-
ರಿಂದ 2025 ರ ಮಾರ್ಚ್ 3 ರಿಂದ ಎಲ್ಲಾ ನೌಕರರು ನೀರು ಸರಬರಾಜು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲು ತೀರ್ಮಾನಿಸಿರುತ್ತೇವೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್. ಅಂಜನಿ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ. ಗೋಪಿ, ಸಂಘಟನಾ ಕಾರ್ಯದರ್ಶಿ ರಾಮಸ್ವಾಮಿ, ಖಜಾಂಚಿ ಕೆ. ಶ್ರೀನಿವಾಸಲು, ಸಂಘದ ಕಾರ್ಯಕಾರಿ ಸದಸ್ಯರುಗಳಾದ ಶರಣಪ್ಪ, ಲೋಕೇಶ್ , ದಶರಥ್, ಅಶೋಕ, ನಾಗರಾಜ್, ರವಿಕುಮಾರ್, ಶರಣಪ್ಪ ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!