48beb57c-6341-479b-a19e-bf0d4193ee1b

ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು

ಉತ್ಪಾದಕರ ಸಂಘಗಳ ಒಕ್ಕೂಟ ನಿ., ಬಳ್ಳಾರಿ  

ರಾಷ್ಟ್ರೀಯ ಹಾಲು ದಿನಾಚರಣೆ

ಬಳ್ಳಾರಿ ,೨೭- ನಗರದ ಶ್ರೀನಂದ ವಸತಿ ಶಾಲೆಯಲ್ಲಿ ರಾಷ್ಟ್ರೀಯ ಹಾಲು ದಿನಾಚರಣೆ ಅಂಗವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ, ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವ ಕುರಿತು ಅರಿವು ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀನಂದ ವಸತಿ ಶಾಲೆಯಲ್ಲಿ ಪದ್ಮಭೂಷಣ ಪದ್ಮಶ್ರೀ, ಪದ್ಮವಿಭೂಷಣ ಬಿರುದಾಂಕಿತರಾದ ಡಾ|| ವರ್ಗೀಸ್ ಕುರಿಯನ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಬಳ್ಳಾರಿ ಕ್ಷೀರ ಕ್ರಾಂತಿಯ ಪಿತಾಮಹರಾದ ಪದ್ಮಭೂಷಣ ಡಾ|| ವರ್ಗೀಸ್ ಕುರಿಯನ್ ಇವರ 102 ವರ್ಷಗಳ ಜನ್ಮ ಮಾನೋತ್ಸವ ದಿನವನ್ನು ರಾಷ್ಟ್ರೀಯ ಹಾಲು ದಿನಾಚರಣೆಯನ್ನಾಗಿ ಆಚರಿಸಲು  ಸದರಿ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ.ಮಂಜುನಾಥ, ಮಾರುಕಟ್ಟೆ ಗುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ.ಎಸ್.ವೆಂಕಟೇಶ ಗೌಡ, ಪ್ರಭಾರ ವ್ಯವಸ್ಥಾಪಕರು(ಮಾರುಕಟ್ಟೆ)ರವರಿಗೆ, ಶ್ರೀನಂದ ವಸತಿ ಶಾಲೆಯ ಸಂಸ್ಥಾಪಕರಾದ ವಿ.ಗಾಂದಿ, ಶ್ರೀಮತಿ ಪಾರ್ವತಿ, .ಲಕ್ಷ್ಮೀಕಾಂತ್ ಹಾಗೂ ಶಾಲಾ ಸಿಬ್ಬಂದಿಗಳಿಗೆ ಸ್ವಾಗತ ಕೋರಿದರು.

ಸಮಾಲೋಚಕರು ಸದರಿ ಸದರಿ ಕಾರ್ಯಕ್ರಮವನ್ನು ಉದ್ದೇಶಿಸಿ ಒಕ್ಕೂಟದ.ಎಸ್.ವೆಂಕಟೇಶ ಗೌಡ, ಪ್ರಭಾರ ವ್ಯವಸ್ಥಾಪಕರು(ಮಾರುಕಟ್ಟೆ) ರವರು ಮಾತನಾಡುತ್ತಾ ಅಮೂಲ್ ಡೇರಿಯ ಸ್ಥಾಪಕರು ಮತ್ತು ಭಾರತದಲ್ಲಿ ಅಪರೇಷನ್ ಫಡ್ (ಕ್ಷೀರ ಕ್ರಾಂತಿ) ಎಂಬ ಜಗತ್ತಿನ ಅತಿ ದೊಡ್ಡ ಡೇರಿ ಯೋಜನೆಯನ್ನು ಪ್ರಾರಂಭಿಸಿ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕರ ದೇಶವನ್ನಾಗಿ ಮಾಡಲು ಕಾರಣೀಕೃತರಾದ ಡಾ|| ವರ್ಗೀಸ್ ಕುರಿಯನ್ ರವರ ಜನ್ಮ ದಿನವಾದ 26ನೇ ನವೆಂಬರ್ ರಂದು “ರಾಷ್ಟ್ರೀಯ ಹಾಲು ದಿನಾಚರಣೆ” ಯನ್ನು ಆಚರಿಸಲಾಗುತ್ತಿರುತ್ತದೆ.

ಪ್ರಪಂಚದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಭಾರತದೇಶ 2ನೇ ಸ್ಥಾನದಲ್ಲಿ ಇರುವುದಕ್ಕೆ ಡಾ|| ವರ್ಗೀಸ್ ಕುರಿಯನ್ ರವರೇ ಮೂಲ ಕಾರಣ, ಇವರನ್ನು ಕ್ಷೀರ ಕ್ರಾಂತಿಯ ಪಿತಾಮಹರೆಂದು ಕರೆಯುತ್ತಾರೆ. 1921 ನವೆಂಬರ್ 26 ರಂದು ಜನಿಸಿರುವ ಡಾ|| ವರ್ಗೀಸ್ ಕುರಿಯನ್ ರವರು ಸಲ್ಲಿಸಿರುವ ಸೇವೆ ಅಪಾರವೆಂದು ಸ್ಮರಿಸುತ್ತಾ ಸದರಿಯವರು ಗೌರವಾರ್ಥವಾಗಿ ಕೇಂದ್ರ ಸರಕಾರವು ಪ್ರತಿ ವರ್ಷ ನವೆಂಬರ್ 26ರಂದು “ರಾಷ್ಟ್ರೀಯ ಹಾಲು ದಿನಾಚರಣೆ” ಯಾಗಿ ಆಚರಿಸಲು ತೀರ್ಮಾನಿಸಿ ಪ್ರತಿವರ್ಷ ಆಚರಣೆಮಾಡಲಾಗುತ್ತಿದೆ.

ದೈನಂದಿನ ಜೀವನದಲ್ಲಿ ಬಹಳಷ್ಟು ಕಲಭರಕೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರವಿರಬೇಕೆಂದರೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉಪಯೋಗಿಸಿ ಆರೋಗ್ಯವಾಗಿರಲು ಸಲಹೆಗಳನ್ನು ಸಂಸ್ಥಾಪಕರಾದ ವಿ.ಗಾಂದಿ ರವರು ತಿಳಿಸಿದರು.

ಕೊನೆಯದಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣರಾದ ಒಕ್ಕೂಟದ ಸಿಬ್ಬಂದಿಗಳಾದ ಶ್ರೀಮತಿ ಕೆ.ಆರ್.ಇಂದುಕಲಾ, ಸ.ವ್ಯ(ಮಾ), ಶ್ರೀಮತಿ ಜ್ಯೋತಿ, ಸ.ವ್ಯ, ಶ್ರೀಮತಿ ಸರೋಜ, ಕೆಮಿಸ್ಟ್, .ಲೋಹಿತ್ ಕುಮಾರ್,.ಸಿ.ಎನ್.ಮಂಜುನಾಥ ಹಾಗೂ .ಬಾಬು ಬಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ನಂದಿನಿ ಬದಾಮಿ ಹಾಲನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!