
ಬಳ್ಳಾರಿ ಲೋಕಸಭೆ ಅಂತಿಮ ವರದಿಯಂತೆ ಶೇ.73.59 ರಷ್ಟು ಮತದಾನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 9- ಲೋಕಸಭೆ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಬಳ್ಳಾರಿ ಲೋಕಸಭೆ ವ್ಯಾಪ್ತಿಯ 08 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 07 ರಂದು ಶಾಂತಿಯುತವಾಗಿ ಮತದಾನ ನಡೆದಿದ್ದು, ಅಂತಿಮ ವರದಿಯಂತೆ ಒಟ್ಟು ಶೇ.73.59 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 1952 ರಿಂದ ಇದುವರೆಗೂ ನಡೆದ ಲೋಕಸಭೆ ಚುನಾವಣೆಗಳಲ್ಲಿ ಇದು ದಾಖಲೆಯ ಮತದಾನ ಪ್ರಮಾಣವಾಗಿದೆ.
ಕ್ಷೇತ್ರವಾರು ಮತದಾನ ವಿವರ:
ಹಡಗಲಿ ಕ್ಷೇತ್ರ : 88-ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ.75.02 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 99,144-ಪುರುಷ, 97,701-ಮಹಿಳಾ ಮತದಾರರು ಹಾಗೂ 13 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 1,96,858 ಮತದಾರರಿದ್ದಾರೆ. ಒಟ್ಟು 218 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 1,96,858 ಮತದಾರರ ಪೈಕಿ 1,47,689 ಜನ ಮತ ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ 75,892-ಪುರುಷರು, 71,796-ಮಹಿಳೆಯರು ಹಾಗೂ 1-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾಯಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರ : 89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ.77.96 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,17,929-ಪುರುಷ, 1,19,860-ಮಹಿಳಾ ಮತದಾರರು ಹಾಗೂ 22 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,37,811 ಮತದಾರರಿದ್ದಾರೆ. ಒಟ್ಟು 254 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 2,37,811 ಮತದಾರರ ಪೈಕಿ 1,85,395 ಜನ ಮತ ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ 94,275-ಪುರುಷರು, 91,107-ಮಹಿಳೆಯರು ಹಾಗೂ 13-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾಯಿಸಿದ್ದಾರೆ.
ವಿಜಯನಗರ ಕ್ಷೇತ್ರ : 90-ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ.70.38 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,26,090-ಪುರುಷ, 1,34,030-ಮಹಿಳಾ ಮತದಾರರು ಹಾಗೂ 77 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,60,197 ಮತದಾರರಿದ್ದಾರೆ. ಒಟ್ಟು 259 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 2,60,197 ಮತದಾರರ ಪೈಕಿ 1,83,130 ಜನ ಮತ ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ 90,640-ಪುರುಷರು, 92,477-ಮಹಿಳೆಯರು ಹಾಗೂ 13-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾಯಿಸಿದ್ದಾರೆ.
ಕಂಪ್ಲಿ ಕ್ಷೇತ್ರ : 91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ.78.94 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,10,477-ಪುರುಷ, 1,13,,480-ಮಹಿಳಾ ಮತದಾರರು ಹಾಗೂ 36 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,23,993 ಮತದಾರರಿದ್ದಾರೆ. ಒಟ್ಟು 242 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 2,23,993 ಮತದಾರರ ಪೈಕಿ 1,76,812 ಜನ ಮತ ಚಲಾಯಿಸಿದ್ದು, ಈ ಕ್ಷೇತ್ರದಲ್ಲಿ 88,574-ಪುರುಷರು, 88,220-ಮಹಿಳೆಯರು ಹಾಗೂ 18-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾಯಿಸಿದ್ದಾರೆ.
ಬಳ್ಳಾರಿ ಗಾಮೀಣ ಕ್ಷೇತ್ರ : 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನದಲ್ಲಿ ಶೇ.72.09 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,21,286-ಪುರುಷ, 1,28,775-ಮಹಿಳಾ ಮತದಾರರು ಹಾಗೂ 51-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,50,112 ಮತದಾರರಿದ್ದಾರೆ. ಈ ಕ್ಷೇತ್ರದ 235 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 2,50,112 ಮತದಾರರ ಪೈಕಿ 1,80,302 ಜನ ಮತ ಚಲಾಯಿಸಿದ್ದು, 89,375-ಪುರುಷರು, 90,908–ಮಹಿಳೆಯರು ಹಾಗೂ 19-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರ : 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನದಲ್ಲಿ ಶೇ.65.14 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,31,888-ಪುರುಷ, 1,40,751- ಮಹಿಳಾ ಮತದಾರರು, 34-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,72,673 ಮತದಾರರಿದ್ದಾರೆ. ಈ ಕ್ಷೇತ್ರದ 261 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 2,72,673 ಮತದಾರರ ಪೈಕಿ 1,77,621 ಜನ ಮತ ಚಲಾಯಿಸಿದ್ದು, ಅದರಲ್ಲಿ 87,486-ಪುರುಷರು, 90,122– ಮಹಿಳೆಯರು ಹಾಗೂ 13-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
ಸಂಡೂರು ಕ್ಷೇತ್ರ : 95-ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನದಲ್ಲಿ ಶೇ.75.16 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,16,009-ಪುರುಷ, 1,16,366-ಮಹಿಳಾ ಮತದಾರರು ಹಾಗೂ 26-ಲಿಂಗತ್ವ ಅಲ್ಪ ಸಂಖ್ಯಾತ ಮತದಾರು ಸೇರಿದಂತೆ ಒಟ್ಟು 2,32,400 ಮತದಾರರಿದ್ದಾರೆ. ಈ ಕ್ಷೇತ್ರದ 253 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 2,32,400 ಮತದಾರರ ಪೈಕಿ 1,74,681 ಜನ ಮತ ಚಲಾಯಿಸಿದ್ದು, ಅದರಲ್ಲಿ 89,225-ಪುರುಷರು, 85,449–ಮಹಿಳೆಯರು ಹಾಗೂ 7-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
ಕೂಡ್ಲಿಗಿ ಕ್ಷೇತ್ರ : 96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟಾರೆ ಶೇ.76.63 ರಷ್ಟು ಮತದಾನವಾಗಿದೆ. ಈ ಕ್ಷೇತ್ರದಲ್ಲಿ 1,06,034-ಪುರುಷ, 1,03,951-ಮಹಿಳಾ ಮತದಾರರು ಹಾಗೂ 11 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದಂತೆ ಒಟ್ಟು 2,09,996 ಮತದಾರರಿದ್ದಾರೆ. ಒಟ್ಟು 250 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 2,09,996 ಮತದಾರರ ಪೈಕಿ 1,60,923 ಜನ ಮತ ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ 82251-ಪುರುಷರು, 78666-ಮಹಿಳೆಯರು ಹಾಗೂ 6-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಮತ ಚಲಾಯಿಸಿದ್ದಾರೆ.
ಒಟ್ಟಾರೆ ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಮತದಾನದಲ್ಲಿ 18,84,040 ಮತದಾರರ ಪೈಕಿ 13,86,553 ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 6,97,718-ಪುರುಷರು, 6,88,745-ಮಹಿಳೆಯರು ಹಾಗೂ 90-ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.73.59 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
10 ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರ : ಬಳ್ಳಾರಿ ಲೋಕಸಭೆ ಕ್ಷೇತ್ರದ 08 ವಿಧಾನಸಭಾ ಕ್ಷೇತ್ರಗಳ 1,972 ಮತ ಕೇಂದ್ರಗಳಲ್ಲಿ ಮೇ 07 ರಂದು ನಡೆದ ಮತದಾನ ದಿನದಂದು ಈ ಕ್ಷೇತ್ರದ 10 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಯಿತು. ಜೂನ್ 04 ರಂದು ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಇಂಜಿನಿಯರ್ ಮಹಾವಿದ್ಯಾಲಯದಲ್ಲಿ ನಡೆಯುವ ಮತ ಎಣಿಕೆ ದಿನದಂದು 10 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.