WhatsApp Image 2024-01-26 at 2.43.42 PM

ಬಸವಣ್ಣನವರು ಕರ್ನಾಟಕಕ್ಕೆ ಅಷ್ಟೇ ಅಲ್ಲಾ ಇಡೀ ವಿಶ್ವದ ದೇವ ಮಾನವ ಮತ್ತು ವಿಶ್ವಗುರು 

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,26- ವಿಶ್ವಗುರು ಬಸವಣ್ಣನವರು ಕೂಡಲ ಸಂಗಮ ಮತ್ತು ಬಸವ ಕಲ್ಯಾಣ ದಲ್ಲಿ ಅನುಭವ ಮಂಟಪದ ಮೂಲಕ ಸ್ತ್ರೀ ಸಮಾನತೆ ಪ್ರತಿನಿತ್ಯ ಕಾಯಕದ ಪರಿಕಲ್ಪನೆ ದಾಸೋಹ ಮತ್ತು ತತ್ವ ಇಷ್ಟಲಿಂಗ ಪರಿಕಲ್ಪನೆ ಮತ್ತು ಇನ್ನೂ ಹಲವಾರು ಸಮಾಜಿಕ. ಧಾರ್ಮಿಕ ಪರಿವರ್ತನೆಯನ್ನು ತಮ್ಮ ವಚನಗಳ ಮೂಲಕ ಸಂದೇಶವನ್ನು ಸಾರಿದವರು. ಎಂದು ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷರಾದ ಶರಣ ದೇವಪ್ಪ ಕೋಳೊರು ವನಜಭಾವಿ.ಹೇಳಿದರು .

ತಾಲೂಕಿನ ವನಜಭಾವಿ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು . ಈ ಸಂದಭ೯ದಲ್ಲಿ ಗುರುಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾಸ್ತಾವಿಕ ಮಾತನಾಡಿದ ಅವರು ಬಸವಣ್ಣನವರು ಜಗತ್ತಿನಲ್ಲಿ ಮೊಟ್ಟ ಮೊದಲು ಸಂಸತ್ ರೂವಾರಿಗಳು & ಸಮಾಜವಾದದ ಮೂಲ ಬೇರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಗುರು ಬಸವಣ್ಣನವರನ್ನು ನಮ್ಮ ಕನಾ೯ಟಕದ ಸಾಂಸ್ಕೃುತಿಕ ನಾಯಕನನ್ನಾಗಿ ಘೋಷಿಸಿದ ಸನ್ಮಾನ್ಯ ಸಿದ್ದರಾಮಯ್ಯನವರ ಬಸವಪ್ರೇಮ ಶ್ಲಾಘನೀಯವಾದದ್ದು ಎಂದು ನುಡಿದರು. ನಂತರ ಶರಣ ಶರಣಪ್ಪ ಎಚ್ ಹೊಸಳ್ಳಿ ಯಲಬುರ್ಗಾ ತಾಲೂಕ ಲಿಂಗಾಯತ ಧರ್ಮದ ಯುವ ಸಂಘಟನೆಗಳ ಮಹಾಸಭಾದ ಅಧ್ಯಕ್ಷರು ಇವರು ಮಾತನಾಡಿ, ಮನುಕುಲದ ತಾಯಿ ವೃದಯದ ಮಹಾನ್ ದಾಶ೯ನಿಕನನ್ನು ಸರಕಾರ ಸಾಂಸ್ಕೃುತಿಕ ನಾಯಕನನ್ನಾಗಿ ಘೋಷಣೆ ಮಾಡಿದ್ದು ನಮಗೆಲ್ಲಾ ಹಷ೯ದಾಯಕ ವಿಚಾರ. 12 ನೇ ಶತಮಾನದಲ್ಲಿ ವರ್ಗಭೇದ ವರ್ಣಭೇದ, ಲಿಂಗಬೇದಗಳು ತಾಂಡವವಾಡುತಿದ್ದ ಸಂದರ್ಭದಲ್ಲಿ, ಗುರು ಬಸವಣ್ಣನವರು ತನ್ನ ಅಕ್ಕನನ್ನೆ ಮುಟ್ಟು ಮೈಲಿಗೆಯಿಂದ ಹೊರಗಿಟ್ಟ ದೃಷ್ಯ ಕಂಡು ಮನ ಕುಗ್ಗಿಸಿ, ಹುಟ್ಟುರು ತೊರೆದು, ಕೂಡಲ ಸಂಗಮಕ್ಕೆ ಬಂದು, ಜ್ಞಾನಾರ್ಜನೆ ಮಾಡಿ, ಮಂಗಳವೇಡೆಗೆ ತೆರಳಿ, ಅಲ್ಲಿಂದ ಬಿಜ್ಜಳನ ಆಸ್ಥಾನ ಬಸವ ಕಲ್ಯಾಣಕ್ಕೆ ಬಂದು, ಅನುಭವ ಮಂಟಪದ ಮೂಲಕ, ಸ್ತ್ರೀ ಸಮಾನತೆ, ಕಾಯಕದ ಪರಿಕಲ್ಪನೆ, ದಾಸೋಹ ತತ್ವ, ಇಷ್ಟಲಿಂಗ ಪರಿಕಲ್ಪನೆ ಇನ್ನು ಅನೇಕ ಸಾಮಾಜೋಧಾರ್ಮಿಕ ಪರಿವರ್ತನೆಯ ಅಂಶಗಳನ್ನು ತಮ್ಮ ವಚನದ ಮೂಲಕ ಜಾರಿಗೊಳಿಸಿದರು. ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ರೇಣುಕಪ್ಪ ಮಂತ್ರಿ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ ಇವರು ಮಾತನಾಡಿ ಜಾತಿ ಧಮ೯ಗಳನ್ನು ಮೀರಿದ ವ್ಯಕ್ತಿತ್ವ ಹೊಂದಿದ ಬಸವಣ್ಣನವರಿಗೆ ಕನಾ೯ಟಕ ಅಷ್ಟೇ ಅಲ್ಲಾ ಇಡೀ ವಿಶ್ವಕ್ಕೆ ಮಾದರಿಯಾದ ಎಲ್ಲಾ ಸಂವಿಧಾನದ ಮೂಲ ಆಶಯಗಳನ್ನು ಅನುಭವದ ವಚನಗಳನ್ನು ನೀಡಿದರು & ವಚನಗಳನ್ನು ಕನ್ನಡದಲ್ಲಿಯೇ ಬರೆಯಲು ಹಲವಾರು ಭಾಷೇಯ ಶರಣರಿಗೆ ಕನ್ನಡ ಕಲಿಸಿದ ಕನ್ನಡದ ಕಣ್ಮಣಿ ಎಂದು ತಮ್ಮ ಅನುಭವ ಹಂಚಿಕೊಳ್ಳುವುದರ ಮೂಲಕ ವಿವರವಾಗಿ ತಿಳಿಸಿದರು.

ಈ ಕಾರ್ಯಕ್ರಮದದಲ್ಲಿ ವನಜಭಾವಿ ಗ್ರಾಮದ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಗಿರಿಮಲ್ಲಪ್ಪ ಪರಂಗಿ, ವಿರಪಣ್ಣ ಮೇಟಿ, ನಿಂಗಪ್ಪ ಪರಂಗಿ, ಚಿದಾನಂದಪ್ಪ ಗೊಂದಿ, ಶರಣಪ್ಪ ಗೊಂದಿ, ಚನ್ನಪ್ಪ ಈರಪ್ಪ ನಿಡಶೇಸಿ, ಲಿಂಗನಗೌಡ ದಳಪತಿ ಗುಳೆ, ರಾಷ್ಟ್ರಪತಿ ಹೊಸಳ್ಳಿ ಶೇಖಪ್ಪ ನಿಡಶೇಸಿ, ವೀರನಗೌಡ ಪೋಲಿಸ್ ಪಾಟೀಲ್ ಜಗದೀಶ್ ಗೌಡ ಗೌಡ್ರ, ಪರಮೇಶ್ ಉಚ್ಚಲಕುಂಟಿ, ಯಲ್ಲಪ್ಪ ಅತ್ತಿಗುಡ್ಡದ, ಹುಚ್ಚಪ್ಪ ಪರಂಗಿ, ದೇವೇಂದ್ರಪ್ಪ ಗೊಂದಿ, ಬಸವರಾಜ ಹೂಗಾರ ಸಾ. ಗುಳೆ ಹಾಗೂ ಅಕ್ಕನಾಗಲಾಂಬಿಕೆ ಮಹಿಳಾ ಗಣದ ಶರಣೆ ಯಮನಮ್ಮ ಗೌಡ್ರ , ಹುಲಿಗೆಮ್ಮ ಅತ್ತಿಗುಡ್ಡದ, ಅಕ್ಕಮಹಾದೇವಿ ಮೇಟಿ ಸೇರಿದಂತೆ ಇತರರು ಭಾಗವಹಿಸಿ, ವಿಶ್ವ ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಘನ ಸರ್ಕಾರದ ಮುಖ್ಯ ಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಹಾದಿಯಾಗ ಎಲ್ಲಾ ಸಚಿವ ಸಂಪುಟದ ಅಧ್ಯಕ್ಷರು ಸದಸ್ಯರುಗಳಿಗೆ ಜಯ ಘೋಷಣೆ ಸಲ್ಲಿಸಿ ಮನಪೂರ್ವಕ ಅಭಿನಂದನೆ ತಿಳಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!