
ಬಸವರಾಜಯ್ಯ ಶಿಕ್ಷಣ ಇಲಾಖೆಯಲ್ಲಿ ಸಲ್ಲಿಸಿದ ಸಾರ್ಥಕ ಸೇವೆ ಶ್ಲಾಘನೀಯ : ಬಿಇಒ ಗುರಪ್ಪ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 2- ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ನಗರದ 5ನೇ ವಿಭಾಗ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯ ಗುರುಗಳು ಶಿಕ್ಷಣ ಸಂಯೋಜಕರಾದ ಬಸವರಾಜಯ್ಯ ಅವರ ವಯೋ ನಿವೃತ್ತಿ ಹೊಂದಿದರು.
ಕಳೆದ 35 ವರ್ಷಗಳಿಂದ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯ ಕಲಾಪಗಳ ಸಭೆಗಳಲ್ಲಿ ಸಲ್ಲಿಸಿದ ಸುದೀರ್ಘ ಸೇವೆಗೆ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ ಹಾಗೂ ಸಮನ್ವಯಾಧಿಕಾರಿ ತಮ್ಮನ ಗೌಡ ಪಾಟೀಲ್ ಅವರು ಹೃತ್ಪೂರ್ವಕವಾಗಿ ಬಿಳ್ಕೊಟ್ಟು ಅಭಿನಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬಸವರಾಜಯ್ಯ ಅವರು ಶಿಕ್ಷಣ ಇಲಾಖೆಯಲ್ಲಿ ಹಲವು ವಿವಿಧತೆಯ ಸೇವೆ ಸಲ್ಲಿಸಿ ಶಿಕ್ಷಣ ಇಲಾಖೆಗೆ ಹೆಸರು ತಂದು ಕೊಟ್ಟಿದ್ದಾರೆ ಅವರ ಸೇವಾ ಕಾರ್ಯ ಮಹತ್ವದ್ದು ಎಂದು ಶ್ಲಾಘಿಸಿದರು.
ಬಸವರಾಜಯ್ಯ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ತಮ್ಮ 35 ವರ್ಷಗಳ ಸೇವಾ ಅನುಭವವನ್ನು ಹಂಚಿಕೊಂಡರು ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿದ ಬಗ್ಗೆ ಮತ್ತು 3ವರೆ ದಶಕಗಳ ಸೇವಾ ಅವಧಿಯಲ್ಲಿ ಸಾಕಷ್ಟು ಉತ್ತಮ ವಿದ್ಯಾರ್ಥಿಗಳು ರೂಪಿಸಿದ ಇಂದು ಅವರೆಲ್ಲರೂ ಉತ್ತಮ ಸ್ಥಾನದಲ್ಲಿದ್ದಾರೆ ಇದು ಅವರ ಶ್ರೇಯಸ್ಸು ಎಂದು ಭಾಗವಹಿಸಿದ ವಿವಿಧ ಶಾಲೆಗಳ ಮುಖ್ಯ ಗುರುಗಳು ಇಲಾಖೆಯ ಸಿಬ್ಬಂದಿ ವರ್ಗದವರು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಬಸವರಾಜಯ್ಯ ಅವರ ಶ್ರೇಯಸ್ಸು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಧರ, ರಾಷ್ಟ್ರೀಯ ಸಾಕ್ಷರತಾ ಹಾಗೂ ಸಮಾಜ ಸುಧಾರಕ ಅಬ್ದುಲ್ ನಬಿ ಬಿ ತಿಮ್ಮನಗೌಡ ರಾಮಚಂದ್ರಪ್ಪ ಫಕ್ರುದ್ದೀನ್ ಸಿಬ್ಬಂದಿ ವರ್ಗದವರು ಇದ್ದರು.