
ನಾಲ್ವರ ಬರ್ಬರ ಹತ್ಯೆ ಆರೋಪಿಗಳ ಬಂಧನ;
ಬಾಕಳೆ ಕುಟುಂಬಕ್ಕೆ ಮನೆಮಗನೇ ಪ್ರಳಯಾಂತಕ
ಕರುನಾಡ ಬೆಳಗು ಸುದ್ದಿ
ಗದಗ, ೨೨ – ಅವಳಿ ನಗರವನ್ನು ಬೆಚ್ಚಿಬೀಳಿಸಿದ್ದ ಬಾಕಳೆ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣ ಅತ್ಯಂತ ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಭೇದಿಸುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದು, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಸೇರಿದಂತೆ ೮ ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ಉತ್ತರವಲಯ ಐಜಿಪಿ. ವಿಕಾಸಕುಮಾರ ವಿಕಾಸ ಹೇಳಿದರು.
ಈ ಕುರಿತು ಸೋಮವಾರ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎ. ೧೯ ರ ಶುಕ್ರವಾರ ಬೆಳಗಿನಜಾವ ನಗರದ ದಾಸರಗಲ್ಲಿಯ ಪ್ರಕಾಶ ಬಾಕಳೆ ಎನ್ನುವವರ ಮನೆಯಲ್ಲಿ ಮಲಗಿದಲ್ಲಿಯೇ ಭೀಕರವಾಗಿ ಕೊಲೆಗೈಯಲಾಗಿದ್ದ ಪ್ರಕರಣದ ಮಾಹಿತಿ ನೀಡಿದರು. ಈ ಪ್ರಕರಣದಲ್ಲಿ ಬಾಕಳೆ ಕುಟುಂಬಕ್ಕೆ ಮನೆಮಗನೇ ಪ್ರಳಯಾಂತಕನಾಗಿ ಹೊರಹೊಮ್ಮಿದ್ದು ಮೊದಲ ಹೆಂಡತಿಯ ಹಿರಿಯ ಮಗ ವಿನಾಯಕ ಪ್ರಕಾಶ ಬಾಕಳೆ (೩೧) ಎನ್ನುವವನು ತನ್ನ ಸ್ವಂತ ತಂದೆ ಪ್ರಕಾಶ ಬಾಕಳೆ ಹಾಗೂ ಮಲತಾಯಿ ಸುನಂದಾ ಬಾಕಳೆ ಮತ್ತು ಮಲಸಹೋದರ ಕಾರ್ತಿಕ ಇವರನ್ನು ಹತ್ಯೆಗೈಯುವಂತೆ ೬೫ ಲಕ್ಷ ರೂ.ಗಳಿಗೆ ನಗರದ ಮೂಲತಃ ದಾಸರಗಲ್ಲಿಯ ನಿವಾಸಿ ಸಧ್ಯ ರಾಜೀವಗಾಂಧಿ ನಗರದಲ್ಲಿ ವಾಸವಿರುವ ಕಾರ್ ಮಾರಾಟದ ಏಜೆಂಟ್ ಫೈರೋಜ, ನಿಸಾರಆಹ್ಮದ ಖಾಜಿ (೨೯) ಹಾಗೂ ನಗರದ ಹುಡ್ಕೋ ಕಾಲೋನಿಯ ನಿವಾಸಿ ಜಿಶಾನ್ ಮೆಹಬೂಬಅಲಿ ಖಾಜಿ (೨೪) ಎನ್ನುವವರಿಗೆ ಸುಫಾರಿ ನೀಡಿದ್ದು, ಸುಫಾರಿ ಪಡೆದ ದುಷ್ಕರ್ಮಿಗಳು ಮಹಾರಾಷ್ಟçದ ಮಿರಜ ಪಟ್ಟಣದ ಸಾಹಿಲ್ ಅಸ್ಪಾಕ್ ಖಾಜಿ (೧೯), ಸೋಹೆಲ್ ಅಸ್ಪಾಕ್ ಖಾಜಿ (೧೯), ಸುಲ್ತಾನ್ ಜಿಲಾನಿ ಶೇಕ್ (೨೩), ಮಹೇಶ ಜಗನ್ನಾಥ ಸಾಳೋಂಕೆ (೨೧), ವಾಹಿದ ಲಿಯಾಕತ್ ಬೇಪಾರಿ (೨೧) ಇವರನ್ನು ಸಂಪರ್ಕಿಸಿ ಎಲ್ಲ ೮ ಜನ ಆರೋಪಿತರು ಸೇರಿ ಸಂಚು ರೂಪಿಸಿ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದರು.
ಆರೋಪಿ ವಿನಾಯಕ ಮತ್ತು ತಂದೆ ಪ್ರಕಾಶ ಬಾಕಳೆ ಮಧ್ಯದ ಕೌಟುಂಬಿಕ ಹಾಗೂ ಆಸ್ತಿ ವಿವಾದದ ಹಿನ್ನಲೆಯಲ್ಲಿ ತಂದೆ, ತಾಯಿ ಹಾಗೂ ಸಹೋದರರನ್ನು ಕೊಲ್ಲಲು ಹಂತಕರಿಗೆ ಸುಫಾರಿ ನೀಡಲಾಗಿತ್ತು. ಆದರೆ ಅಂದಿನ ಘಟನೆ ಸಂದರ್ಭದಲ್ಲಿ ದುರ್ದೈವಶಾತ್ ಮನೆಯಲ್ಲಿದ್ದ ಕೊಪ್ಪಳ ಮೂಲಕ ಸಂಬAಧಿಗಳಾದ ಪರಶುರಾಮ ಹಾದಿಮನಿ, ಲಕ್ಷಿö್ಮÃಬಾಯಿ ಹಾದಿಮನಿ ಹಾಗೂ ಆಕಾಂಕ್ಷಾ ಹಾದಿಮನಿ ಎನ್ನುವ ಅಮಾಯಕರು ಅಮಾನುಷವಾಗಿ ಕೊಲೆಗೀಡಾಗಿದ್ದು ದುರ್ದೈವದ ಸಂಗತಿಯಾಗಿದೆ.
ತನಿಖೆಗಾಗಿ ಐಜಿಪಿ. ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಭರಮನಿ, ಬಾಗಲಕೋಟ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾಂತೇಶ್ವರ ಜಿದ್ದಿ ಹಾಗೂ ಗದಗ ಉಪವಿಭಾಗ ಮತ್ತು ನರಗುಂದ ಉಪವಿಭಾಗ ಡಿವೈಎಸ್ಪಿ. ಅವರ ಮುಂದಾಳತ್ವದಲ್ಲಿ ತಂಡ ರಚಿಸಲಾಗಿತ್ತು. ಯಾವುದೇ ಸುಳಿವನ್ನು ಬಿಡದೆ ಅತೀ ಚಾಣಾಕ್ಷತನದಿಂದ ನಾಲ್ವರನ್ನು ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದ ಆರೋಪಿತರನ್ನು ದೊರೆತ ಕೆಲ ಸಾಕ್ಷಾಧಾರಗಳು ಮತ್ತು ತಾಂತ್ರಿಕತೆಯ ಬಳಕೆಯ ಮೂಲಕ ವಶಕ್ಕೆ ಪಡೆಯಲಾಗಿದ್ದು, ಸದರ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಲಾದ ಆರೋಪಿ ಫೈರೋಜ್ಗೆ ಸೇರಿದ ಅಲ್ಟೊçÃಕಾರ್ ವಶಕ್ಕೆ ಪಡೆಯಲಾಗಿದ್ದು, ಅತ್ಯಂತ ಸೂಕ್ಷö್ಮ ಹಾಗೂ ಕ್ಲಿಷ್ಟಕರವಾದ ಕೊಲೆ ಪ್ರಕರಣವನ್ನು ಪತ್ತೆ ಮಾಡಿದ ಸಿಬ್ಬಂದಿಗಳ ಕಾರ್ಯವನ್ನು ಶ್ಲಾö್ಯಘಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಐ.ಜಿ.ಪಿ.ರವರಾದ ಅಲೋಕಕುಮಾರ ಅವರು ೫ ಲಕ್ಷ ರೂ.ಗಳ ಬಹುಮಾನ ಘೋಷಣೆ ಮಾಡಿದ್ದಾರೆ.
ಸದರ ಪ್ರಕರಣದ ತನಿಖೆ ಮುಂದುವರೆದಿದ್ದು, ಸೂಕ್ತ ಹಾಗೂ ಸದೃಢ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಶೀಘ್ರ ಆರೋಪಪಟ್ಟಿ ಸಲ್ಲಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ, ಹೆಚ್ಚುವರಿ ಅಧೀಕ್ಷಕ ಎಂ.ಬಿ. ಸಂಕದ, ಸೇರಿದಂತೆ ತನಿಖಾ ತಂಡದಲ್ಲಿದ್ದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವಿಘ್ನವಿನಾಶಕನಾಗಬೇಕಿದ್ದ ಪುತ್ರ ವಿನಾಯಕ ಬಾಕಳೆ ಕುಟುಂಬದ ನಾಶಕ್ಕೆ ಸಂಚು ರೂಪಿಸುವ ಮೂಲಕ ಅವಳಿನಗರದ ಇತಿಹಾಸದಲ್ಲಿಯೇ ಅತ್ಯಂತ ಕ್ರೂರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾನೆ.
ಕೊಲೆ ನಡೆದ ಸಂದರ್ಭದಲ್ಲಿ ಕುಟುಂಬಸ್ಥರೊAದಿಗೆ ಇದ್ದು ಏನೂ ಅರಿಯದವನಂತೆ ನಟಿಸಿದ್ದ ದುಷ್ಕರ್ಮಿ ವಿನಾಯಕನ ಬಣ್ಣ ಬಯಲು ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಂದೆ, ತಾಯಿ ಹಾಗೂ ಸಹೋದರನ ಕೊಲೆ ಸಂಚು ರೂಪಿಸಿ ಮಿರಜ್ ಹಾಗೂ ನಗರದ ಇನ್ನಿಬ್ಬರು ಸುಫಾರಿ ಪಡೆದವರೊಂದಿಗೆ ಕಳೆದೊಂದು ವಾರದಿಂದ ಸಂಪರ್ಕದಲ್ಲಿದ್ದು, ಹೊಂಚು ಹಾಕಿ ಕೊಲೆಗೆ ಸಮಯ ನಿಗದಿ ಮಾಡಿದ್ದನೆನ್ನಲಾಗಿದೆ. ಸುಫಾರಿ ಹಣ ೬೫ ಲಕ್ಷ ರೂ. ಪೈಕಿ ೧೦ ಲಕ್ಷ ರೂ. ಮುಂಗಡ ನೀಡುವ ಒಪ್ಪಂದ ಮಾಡಿದ್ದು, ಕೊನೆ ಕ್ಷಣದಲ್ಲಿ ಕೊಲೆಗಡುಕರಿಗೆ ೨ ಲಕ್ಷ ರೂ.ಗಳನ್ನು ಮಾತ್ರ ನೀಡಿದ್ದನೆನ್ನಲಾಗಿದ್ದು, ೨ ಲಕ್ಷ ರೂ.ಗಳಲ್ಲಿ ೪ ಹೆಣ ಉರುಳಿದ್ದು ದುರ್ದೈವದ ಸಂಗತಿ. ಮತ್ತು ಕೊಲೆ ನಂತರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋಗುವಂತೆ ಮತ್ತು ಅದನ್ನು ನೀವೇ ಬಳಕೆ ಮಾಡಿಕೊಳ್ಳುವಂತೆ ಸುಫಾರಿ ಹಂತಕರೊAದಿಗೆ ಪ್ರಕಾಶ ಬಾಕಳೆ ಪುತ್ರ ಕಿರಾತಕ ವಿನಾಯಕ ಒಪ್ಪಂದ ಮಾಡಿಕೊಂಡಿದ್ದನೆAದು ಒಟ್ಟಾರೆ ತಂದೆ ಮಕ್ಕಳ ಹಾಗೂ ಬಾಕಳೆ ಕುಟುಂಬದ ಆಸ್ತಿ ಹಾಗೂ ಕೌಟುಂಬಿಕ ವಿವಾದದ ಮಧ್ಯೆ ಕೊಪ್ಪಳ ಮೂಲಕ ಮೂವರು ಅಮಾಯಕರು ಅಮಾನುಷವಾಗಿ ಹತ್ಯೆಗೀಡಾಗಿದ್ದು ದುರಾದೃಷ್ಟಕರ