
ಬಾನಾಪೂರ ಬಳಿ ಅಪಘಾತ:
ಮಾನವಿತೆ ಮೆರೆದ 108 ಸಿಬ್ಬಂದಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಜಿಲ್ಲೆಯ ಕುಕನೂರ ತಾಲೂಕಿನ ಬಾನಾಪುರ್ ಗೊಂಬೆ ಫ್ಯಾಕ್ಟರಿ ಹತ್ತಿರ ಎರಡು ಬೈಕು ಮುಖಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದ್ದು ಅಪಘಾತ ಸ್ಥಳದಲ್ಲಿ ಇದ್ದ ಸ್ಥಳೀಯರು ತಕ್ಷಣ 108 ಅಂಬುಲೆನ್ಸ್ ಗೆ ಕರೆ ಮಾಡಿದರೂ ನಾವು ಅಂದರೆ ಬನ್ನಿಕೊಪ್ಪ ಅಂಬ್ಯುಲೆನ್ಸ್ 12 ನಿಮಿಷದಲ್ಲಿ ಸ್ಥಳಕ್ಕೆ ಹೋಗಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಅಪಘಾತದಲ್ಲಿ ಬಿದಿದ್ದ ಮಲ್ಲಪ್ಪ ಕಿನ್ನಾಳ ಅವರನ್ನು ಕೊಪ್ಪಳ ಜಿಲ್ಲೆ ಆಸ್ಪತ್ರೆಗೆ ದಾಖಲೆ ಮಾಡಿ ಚಿಕಿತ್ಸೆಯನ್ನು ನೀಡಲಾಗಿದೆ.
ಮಾನವಿಯತೆ ಮೆರೆದ 108 ಸಿಬ್ಬಂದಿ; ಅಪಘಾತದಲ್ಲಿ ಪ್ರಜ್ಞೆ ಇಲ್ಲದೆ ಬಿದಿದ್ದ ವ್ಯಕ್ತಿಯ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿ. ಆತನ ಹತ್ತಿರ ರೂ.9,000 ಸಾವಿರ ರೂಪಾಯಿ ಹಾಗೂ ಮೊಬೈಲ್ ಅವರ ಸಂಬಂಧಿಕರ ಕಡೆ ಅಂಬುಲೆನ್ಸ್ ಚಾಲಕ . ಫಕ್ರುದ್ದೀನ್ ನೂರಭಾಷ ತಳಕಲ್ಲ ಹಾಗೂ ಸ್ಟಾಪ್ ನರ್ಸ್ ಶಿವುಪುತರಪ್ಪ ತಾಳವರ ಮಾನವಿಯತೆ ಮೆರೆದಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅಪಘಾತ ಗೊಂಡ ವ್ಯಕ್ತಯ ಕುಟುಂಬಕ್ಕೆ ಹಣ ಮತ್ತು ಮೊಬೈಲ್ ಮಾರಳಿಸುತ್ತಿರುವ 108 ಸಿಬ್ಬಂದಿ