IMG_20250302_101430

ಬಿಎಸ್ಪಿಎಲ್ ಕಾರ್ಖಾನೆ ರಾಜ್ಯ ಸರ್ಕಾರ ಕೈ ಬಿಡಲಿ

ರಾಜ್ಯ ಸರ್ಕಾರದ ಖಜಾಂನೆ ಖಾಲಿ ; ಕುಮಾರ‌ ಸ್ವಾಮಿ

ಕರುನಾಡ ಬೆಳಗು

ಕೊಪ್ಪಳ , 02-  ಕಾರ್ಖಾನೆಗೆ ಜನರು ಹಾಗೂ  ಸ್ವಾಮಿಜಿ ಹೇಳಿದಂತೆ ನಗರದ ಜನ ವಸತಿ ಬಳಿ‌ ಬೃಹತ್ ಕಾರ್ಖಾನೆ ಬೇಡ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಸಚಿವ ಹಚ್ಚ್ ,ಡಿ ಕುಮಾರ ಸ್ವಾಮಿ ಹೇಳಿದರು.
ಅವರು ಕೊಪ್ಪಳದಲ್ಲಿ ಸುರೇಶ ಭೂಮರೆಡ್ಡಿ ಅವರು ಕುಟುಂಬದ ವಿವಾಹದ ಕಾರ್ಯಕ್ರಮ ದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು .
ಬಿಎಸ್ಪಿಎಲ್ ಕಾರ್ಖಾನೆ ಆರಂಭಕ್ಕೆ ಜನರು ಪರಿಸರ ಹಾನಿಯಾಗುತ್ತಿದೆ ಎನ್ನುತ್ತಾರೆ , ರಾಜ್ಯ ಹಾಗು ಕಾರ್ಖಾನೆ ನಡುವೆ ಒಪ್ಪಂದ ಈ ಕುರಿತು ನನ್ನ ಬಳಿ ಪ್ರಸ್ತಾಪ ಬಂದಿಲ್ಲ
ರಾಜ್ಯ ಸರಕಾರ ಜನರ ಪರವಾಗಿ ಇರಬೇಕು ಎಂದು ಸಲಹೆ ನೀಡಿದರು‌.

ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ, ರಾಜ್ಯದ ಖಜಾನೆ ಕಾಲಿ ಆಗಿದೆ , ಅಭಿವೃದ್ಧಿ ಕುಂಟಿತವಾಗಿದೆ,   ರಾಜ್ಯದಲ್ಲಿ ಅನೇಕ ಬೆಳವಣಿಗೆ ನಡೆಯುತ್ತಿವೆ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲಾ, ರಾಜ್ಯದಲ್ಲಿ ಬರಿ ರಾಜಕೀಯ ಬೆಳವಣಿಗೆ ಗಳು ನಡೆಯುತ್ತಿವೆ ಗ್ಯಾರಂಟಿ ಹೆಸರಿನಲ್ಲಿ ಜನತೆಯ ಮೇಲೆ ತೆರಿಗೆ ಹೋರೆ ಹೇರಿದ ಸಂಗ್ರಹಿಸಿದ ಹಣ ಎಲ್ಲಿದೆ ಎಂದು ಒ್ರಶ್ನೀಸಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ , ರಾಜ್ಯದಲ್ಲಿ ಹಣದ ಕೊರತೆ ಇಲ್ಲ ,ಆದರೆ ದುರ್ಬಳಿಕೆಯಿಂದ ರಾಜ್ಯದಲ್ಲಿ ಅಭಿವೃದ್ದಿ ಕೆಲಸ ನಡೆಯುತ್ತಿಲ್ಲ, ಹಲವಾರು ಯೋಜನೆಗಳಲ್ಲಿ ದುರ್ಬಳಿಕೆಯಾಗುತ್ತಿದೆ ರಾಜ್ಯ ಸರ್ಕಾರದ ಖಜಾನೆ ಕಾಲಿ‌ ಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆದರಿಕೆ ವಿಚಾರ ಅದರ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲಾ
ಯಾರು ಬೆಂಬಲ ಕೊಟ್ಟಿದ್ದಾರೋ ಬಿಟ್ಟಿದ್ದಾರೋ ಅನ್ನೋದಲ್ಲಾಅವರಿಗೆ ರಾಜ್ಯದ ಜನ 138 ಸ್ಥಾನ ಕೊಟ್ಟಿದ್ದಾರೆ ನಟ್ಟು ಬೋಲ್ಟ್ ಸರಿಮಾಡಲು ಅಧಿಕಾರ ಕೊಟ್ಟಿದ್ದಾರಾ ಎಂದು ಪ್ರಶ್ನೀಸಿದರು.
ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ತಾರೆ ಅನ್ನೋ ಸಚಿವ ಜಮಿರ್ ಹೇಳಿಕೆ ವಿಚಾರ ಯಾರು ಏನೆಲ್ಲಾ ಆಗ್ತಾರೆ ಅಂತ ಕಾಲ ನಿರ್ಧಾರ ಮಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ಸಿ ವಿ ಚಂದ್ರಶೇಖರ , ಡಾ ಬಸವರಾಜ ಕ್ಯಾವಟರ್, MLC ಹೇಮಲತಾ ನಾಯಕ , ಸೋಮನಗೌಡ ಯರದಾಳ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!