
ಕೆಆರ್ ಪಿಪಿಯ ವಿವಿಧ ಘಟಕಗಳ ವಿಸರ್ಜನೆ
ಬಿಜೆಪಿ ಸೇರತ್ತಾರ ಯಡಿಯುರಪ್ಪ ಆಪ್ತ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 20- ಗಾಲಿ ಜನಾರ್ದನ ರೆಡ್ಡಿ ಕೆಆರ್ ಪಿಪಿ ಎಲ್ಲಾ ಘಟಕಗಳನ್ನು ವಿಸರ್ಜಿಸುವ ಮೂಲಕ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತೇ ಲೋಕಸಾಭಾ ಚುನಾವಣೆ ಹೊತ್ತಿಗೆ ಬಿಜೆಪಿ ಸೇರುತ್ತಾರೆ ಎಂಬ ಚರ್ಚೆಗೆ ನಾಂದಿಹಾಡಿದ್ದಾರೆ.
ತಮ್ಮ ಆಪ್ತ ಬಳಗದಲ್ಲಿ ಯಾವುದೇ ವಿಷಯಗಳನ್ನು ಹಂಚಿಕೊಳ್ಳುದ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಸುಧೀರ್ಘ 12 ವರ್ಷದ ನಂತರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಕ್ರೀಯ ರಾಜಕಾರಣಕ್ಕೆ ಮರಳಿದ್ದರು. ಚುನಾವಣೆ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದ ರೆಡ್ಡಿ, ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಒಂದೂ ಅಪಸ್ವರ ಎತ್ತಿರಲಿಲ್ಲ ಇಗ ಅವರ ಮಗ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು ಜನಾರ್ದನರೆಡ್ಡಿ ಅವರಿಗೆ ಆನೆ ಬಂದಿದೆ.
ಒಂದು ಕಾಲದಲ್ಲಿ ಯಡಿಯುರಪ್ಪ ಮುಖ್ಯಮಂತ್ರ ಆಗಲು ಪ್ರಮುಖ ಪಾತ್ರ ವಹಿಸಿದ್ದ ಗಣಿ ನಾಡಿನ ನಾಯಕ. ಅಷ್ಟೇ ಅಲ್ಲದೇ ಚುನಾವಣೆ ನಂತರವೂ ಬಿಎಸ್ ವೈ ಬಗ್ಗೆ ಸಕಾರಾತ್ಮಕವಾಗಿಯೇ ಮಾತನಾಡಿದ್ದಾರೆ. ಬದಲಾಗಿ ಬಿಎಸ್ ವೈ ನನ್ನ ರಾಜಕೀಯ ಬೆಳವಣಿಗೆಗೆ ಕಾರಣರಾದವರು ಎಂದು ಹೇಳಿದ್ದರು. ಇದೀಗ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು, ಪಕ್ಷದಲ್ಲಿ ಯಡಿಯೂರಪ್ಪ ಹಿಡಿತ ಇದೆ ಎಂಬ ಸಂದೇಶ ರವಾನೆ ಆಗಿದೆ. ಈ ಎಲ್ಲ ಬೆಳವಣಿಗೆ ನಡುವೆ ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿದೆ. ಬಿಜೆಪಿ ಕೇಂದ್ರ ನಾಯಕರಿಗೂ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಅನಿವಾರ್ಯತೆ ಇದೆ ಕಾಂಗ್ರೆಸ್ ಪಕ್ಷಕ್ಕೆ ಕೌಂಟರ್ ಕೊಡಲು ಬಿಜೆಪಿ ಪಕ್ಷ ಗಾಲಿ ಜನಾರ್ದನ ರೆಡ್ಡಿಅವರಿಗೆ ಗಾಳ ಹಾಕಿದರು ಆಶ್ಚರ್ಯವಿಲ್ಲಾ.
ಕಳೆದ ವಿಧಾನಸಭೆ ಚುನಾವಣೆ ವೇಳೆಗೆ ಕೆಆರ್ ಪಿಪಿ ಸ್ಥಾಪಿಸಿದ್ದ ಜನಾರ್ದನ ರೆಡ್ಡಿ ರಾಜ್ಯಾದ್ಯಂತ ಸಾಕಷ್ಟು ಕಡೆ ಅಭ್ಯರ್ಥಿ ಕಣಕ್ಕಿಳಿಸಿದ್ದರು. ಆದರೆ, ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಜೊತೆಗೆ ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಸರಕಾರ ರಚನೆ ಮಾಡಿದ್ದರಿಂದ, ಸರಕಾರದಲ್ಲಿ ಅಂದುಕೊಂಡಷ್ಟು ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ.ಈ ನಡುವೆ ಕೆಆರ್ ಪಿಪಿಯ ಎಲ್ಲ ಘಟಕಗಳನ್ನು ವಿಸರ್ಜನೆ ಮಾಡಿದ್ದಾರೆ. ಸದ್ಯಕ್ಕೆ ಕೆಆರ್ ಪಿಪಿ ಪಕ್ಷದಲ್ಲಿ ಯಾವುದೇ ಪದಾಧಿಕಾರಿಗಳೇ ಇಲ್ಲ ಪಕ್ಷವನ್ನು ರಾಜ್ಯಮಟ್ಟದಲ್ಲಿ ಕಟ್ಟುವುದು ಕಷ್ಟಕರ ಎಂದು ಅರಿತಿರುವ ಅವರ ನಡೆ ಯಾವ ಕಡೆ ಕಾದು ನೋಡಬೇಕು.
ಬರುವ ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಗಂಗಾವತಿಯಲ್ಲಿ ಕೇಳಿ ಬಂದಿವೆ. ಜೊತೆಗೆ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ವಿಜಯೇಂದ್ರ ಕೂಡ ಒಲವು ತೋರಿದ್ದಾರೆ ಎಂದು ರೆಡ್ಡಿ ಆಪ್ತರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿ ಕೇಂದ್ರ ನಾಯಕರು ಯಾವ ನಿರ್ಧಾರ ತೆಗದುಕೊಳ್ಳುತ್ತಾರೆ ಎಂಬುದರ ಮೇಲೆ ಅವರ ನಿರ್ದಾರ ನಿಂತಿದೆ ಎನ್ನಲಾಗಿದೆ.