
ಬಿಜೆಪಿ ಜೊತೆ ಶಾಮೀಲು ಆರೋಪ – ಸಿಪಿಐಎಂ ಖಂಡನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 22- ಕೇರಳದ ಅಲ್ಪ ಸಂಖ್ಯಾತ ಮತದಾರರನ್ನು ಸೆಳೆಯುವ ಉದ್ದೇಶದಿಂದ ಸಿಪಿಐಎಂ ಪಕ್ಷ, ಸರ್ವಾಧಿಕಾರಿ ಹಾಗೂ ಕೋಮುವಾದಿ ಬಿಜೆಪಿ ಜೊತೆ ಶಾಮೀಲಾಗಿದೆಯೆಂಬ ಸುಳ್ಳು ಆರೋಪವನ್ನು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಹಾಗೂ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ತೆಲಂಗಾಣಾದ ಮುಖ್ಯಮಂತ್ರಿಗಳಾದ ರೇವಂತರೆಡ್ಡಿ ಮಾಡುತ್ತಿರುವುದನ್ನು ಸಿಪಿಐಎಂ , ಬಳ್ಳಾರಿ ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತಿರುವುದಾಗಿ, ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್ ವಾದಿ ) ಜಿಲ್ಲಾ ಸಮಿತಿ ಕಾರ್ಯದರ್ಶಿ ಜೆ ಸತ್ಯ ಬಾಬು ಒಂದು ಪತ್ರಿಕಾ ಪ್ರಕಟನ ಮುಖಾಂತರ ತಿಳಿಸಿದ್ದಾರೆ.
ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳನ್ನು ಜಾರಿಗೊಳಿಸಿ ದೇಶವನ್ನು ಆರ್ಥಿಕ ದಿವಾಳಿತನಕ್ಕೆ ತಳ್ಳಿದ ಕೀರ್ತಿ ಕಾಂಗ್ರೆಸ್ ದ್ದಾಗಿರುವುದರಿಂದ ಮತ್ತು ತನ್ನ ಆಡಳಿತದ ಅವಧಿಯಲ್ಲಿ ಮಟ್ಟ ಹಾಕದೆ ಕೋಮುವಾದಿ ಶಕ್ತಿಗಳ ಬೆಳವಣಿಗೆಗೆ ಮೆದು ಧೋರಣೆ ಮೂಲಕ ಸಹಕರಿಸಿದ ಇದಕ್ಕೆ ಜನರ ವಿಶ್ವಾಸ ಗಳಿಸುವ ಕಾರ್ಯಕ್ರಮಗಳಿಲ್ಲದಿರುವುದರಿಂದ ಮತ್ತು ಕೇರಳದ ಎಡ ಮತ್ತು ಪ್ರಜಾಸತ್ತಾತ್ಮಕ ರಂಗದ ಸರಕಾರ ಅದರ ಜನಪರ ಕಾರ್ಯಕ್ರಮಗಳಿಂದಾಗಿ ಮತ್ತು ಕೋವಿಡ್ ಸಂದರ್ಭದಲ್ಲಿ ಅದರ ನಿರ್ವಹಣೆ ಜನಮನ್ನಣೆ ಗಳಿಸಿ ಸತತ ಎರಡನೆ ಬಾರಿಗೆ ಅಧಿಕಾರ ಪಡೆದಿರುವುದು ಕಾಂಗ್ರೆಸ್ ಪಕ್ಷಕ್ಕೆ ಬೆದರಿಕೆಯಾಗಿದೆ. ಸೋಲುವ ಭೀತಿಯಿಂದ ಹೆದರಿದ ಅದು ಆದಾರ ರಹಿತ ಆರೋಪ ಮಾಡಿ ಮತದಾರರಲ್ಲಿ ಸಂಶಯ ಹುಟ್ಡು ಹಾಕುವ ಕೆಲಸದಲ್ಲಿ ತೊಡಗಿದೆ.
ಅವರು ಒಂದು
ಕಡೆ ಪ್ರಜಾಪ್ರಭುತ್ವದ ಪರವಾಗಿದ್ದೇನೆಂದು ಹೇಳುವಾಗಲೆ, ಮತ್ತೊಂದು ಕಡೆ ಕೇರಳದ ಮುಖ್ಯಮಂತ್ರಿಯನ್ನು ಕರಾಳ ಕಾಯ್ದೆಗಳಡಿ ಮತ್ತು ಸ್ವಯತ್ತ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಬಂದಿಸುವಂತೆ ಅಪ್ರತ್ಯಕ್ಷವಾಗಿ ಬಿಜೆಪಿಗೆ ಪ್ರಚೋದನೆ ನೀಡುತ್ತಿರುವುದು ಅಕ್ಷಮ್ಯವಾಗಿದೆ.
ಸರ್ವಾಧಿಕಾರದ ವಿರುದ್ದ ಮತ್ತು ಸ್ವಯತ್ತ ಸಂಸ್ಥೆಗಳಾದ ಈ.ಡಿ, ಐ.ಟಿ ಹಾಗೂ ಸಿಬಿಐ ದುರ್ಬಳಕೆ ತಡೆಯ ಬೇಕು. ಜನಗಳ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಹತ್ತಿಕ್ಕುವ ಯುಎಪಿಎ, ಪಿ ಎಮ್ ಎಲ್ ಎ ಕರಾಳ ಕಾಯ್ದೆಗಳನ್ನು ರದ್ದು ಪಡಿಸಬೇಕೆಂದು ದೇಶದ ಜನ ಹೋರಾಟ ನಡೆಸುತ್ತಿರುವಾಗ ಕಾಂಗ್ರೆಸ್ ನಡೆ ಅದಕ್ಕೆ ತದ್ವಿರುದ್ದವಾಗಿರುವುದು ಅದು ಅನುಭವದಿಂದ ಪಾಠ ಕಲಿಯಲು ತಯಾರಿಲ್ಲವೆಂಬುದನ್ನು ಹೇಳುತ್ತದೆಂದು ಕಟುವಾಗಿ ವಿಮರ್ಶಿಸಿದೆ. ಶ್ರೀ ನರೇಂದ್ರ ಮೋದಿಯವರ ಇಂತಹ ನಡೆಯನ್ನು ಕಾಂಗ್ರೆಸ್ ಅಪೇಕ್ಷಿಸುತ್ತದಾ ? ಕಾಂಗ್ರೆಸ್ ಸ್ಪಷ್ಢ ಪಡಿಸಲಿ ಎಂದು ಸಿಪಿಐಎಂ ಆಗ್ರಹಿಸಿದೆ.
ಇಂತಹ ಹೇಳಿಕೆ ನೀಡದಂತೆ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಮದ್ಯ ಪ್ರವೇಶಿಸಬೇಕು ಮತ್ತು ಕಾಂಗ್ರೆಸ್ ಪಕ್ಷ ಇಂತಹ ಪ್ರಜಾಪ್ರಭುತ್ವ ವಿರೋದಿ ನೀತಿಯನ್ನು ಕೈ ಬಿಡುವಂತೆ ಬಲವಾಗಿ ಸಿಪಿಐಎಂ ಬಳ್ಳಾರಿ ಜಿಲ್ಲಾ ಸಮಿತಿ ಆಗ್ರಹಿಸಿದೆ ಎಂದು
ಕಾರ್ಯದರ್ಶಿ ಮಂಡಳಿ ಸದಸ್ಯರು ಜೆ ಎಂ ಚನ್ನ ಬಸಯ್ಯ್, ಜೆ ಚಂದ್ರ ಕುಮಾರಿ, ವಿ ಎಸ್ ಶಿವಶಂಕರ, ಎಚ್ ತಿಪ್ಪಯ್ಯ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.