
ಬಿಜೆಪಿ ನೂತನ ಮಂಡಲ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ವಿಜಯನಗರ,22- ಹೊಸಪೇಟೆ ತಾಲ್ಲೂಕಿನ ಬಿಜೆಪಿಯ ನೂತನ ಮಂಡಲ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಪಟೇಲ್ ನಗರದಲ್ಲಿರುವ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹೊಸಪೇಟೆ ತಾಲೂಕು ಮಂಡಲ ಅಧ್ಯಕ್ಷ ಸ್ಥಾನವನ್ನು ಶಂಕರ್ ಮೇಟಿಯವರಿಗೆ ಬಿಜೆಪಿ ಭಾವುಟ ಕೊಡುವುದರ ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿದ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಬಿಜೆಪಿಯಲ್ಲಿ ಒಂದು ನಿಯಮವಿದೆ ರಾಜ್ಯಧ್ಯಕ್ಷರ ನೇಮಕವಾದ ನಂತರ ಜಿಲ್ಲಾಧ್ಯಕ್ಷರು, ಮಂಡಲ, ಗ್ರಾಮ, ಭೂತ್ ಮಟ್ಟದ ಅಧ್ಯಕ್ಷರುಗಳನ್ನು ನೀಮಕ ಮಾಡಲಾಗುತ್ತದೆ ನಮ್ಮ ಅವಧಿ ಮೂರುವರ್ಷಗಳದ್ದಾಗಿರುತ್ತದೆ. ನಮ್ಮ ಜವಾಬ್ದಾರಿ ಯನ್ನು ಕೊಟ್ಟಿರುವ ಸಮಯದಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಬರುವಂತಹ ಚುನಾವಣೆಗಳಲ್ಲಿ ವ್ಯವಸ್ಥಿತವಾಗಿ ನಮ್ಮ ಅಭ್ಯಾರ್ಥಿಗಳ ಗೆಲುವಿಗೆ ಶ್ರಮಿಸಬೇಕು.
ಕಾಂಗ್ರೆಸ್ ನಲ್ಲಿ ಜವಹಾರಲಾಲ್ ನೆಹರು ಅವರಿಂದ ರಾಹುಲ್ ಗಾಂಧಿವರೆಗೂ ನೋಡಿದರೆ ಕುಟುಂಬ ಅಧಿಕಾ ನಡೆಯುತ್ತಿದೆ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಮತ್ತು ಜಿಲ್ಲೆಗಳಲ್ಲಿ ಯಾವುದೇ ಅಭಿವೃದ್ಧಿ ಮಾಡದೆ ಗ್ಯಾರೆಂಟಿ ಯೋಜನೆಗಳಲ್ಲೇ ಕಾಲ ಕಳೆ ಯುತ್ತಿದೆ. ಅಭಿವೃದ್ಧಿ ಮಾತ್ರ ಶೂನ್ಯ ವಾಗಿದೆ. ಕಾಮಗಾರಿಯ ಒಂದೇ ಒಂದು ಉದ್ಘಾಟನಾ ಕಾರ್ಯಕ್ರಮ ಇದುವರೆಗೂ ನಡೆದಿಲ್ಲ. ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಲು ಲೋಕಸಭಾಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲ್ಲಲು ನಾವೆಲ್ಲಾ ಮೂರು ತಿಂಗಳು ಕಠಿಣ ಶ್ರಮ ವಹಿಸಿ ಭೂತ್ ಮಟ್ಟದಿಂದ ಶ್ರಮಿಸಬೇಕಿದೆ ಎಂದರು.
ಸಭೆಯಲ್ಲಿ ಬಂಗಾರು ಹನುಮಂತ, ಅಶೋಕ್ ಜೀರೆ, ಸಿದ್ದಾರ್ಥ್ ಸಿಂಗ್ ಮಾತನಾಡಿ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ವ್ಯಕ್ತಿ ಯಾರಾದರೇನು ಪಕ್ಷ ಮುಖ್ಯ ಹಾಗಾಗಿ ಪಕ್ಷದ ಅಭ್ಯಾರ್ಥಿಯನ್ನು ಈ ಭಾರಿ ಗೆಲ್ಲಿಸಲು ಪಕ್ಷವನ್ನು ಭೂತ್ ಮಟ್ಟದಿಂದ ಸಂಘಟಿಸಲು ಕಾರ್ಯಕರ್ತರಿಗೆ ಮನವಿಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪದಾಧಿಕಾರಿಗಳಿಗೆ ಗುರುತಿನ ಚೀಟಿಯನ್ನು ಕೊಡಲಾಯಿತು.
ರಾಜ್ಯ ಒಬಿಸಿ ಉಪಾಧ್ಯಕ್ಷ ಅಯ್ಯಳ್ಳಿ ತಿಮ್ಮಪ್ಪ, ಶಂಕರ್ ಮೇಟಿ, ಸಂದೀಪ್ ಸಿಂಗ್, ಸಂಜೀವ ರೆಡ್ಡಿ, ಸುವರ್ಣ ಅಸುಂಡಿ, ಬಸವರಾಜ್, ಕಾಸಟ್ಟಿ ಉಮಾಪತಿ, ರೇವಣಸಿದ್ಧಪ್ಪ, ನಗರ ಸಭೆ ಅಧ್ಯಕ್ಷಿಣಿ ಲತಾ, ಶಶಿಧರ್,ಜಂಬಯ್ಯಾ, ಕಿಚಿಡಿ ಸಿನಪ್ಪ, ಕಿಚಿಡಿ ಕೊಟ್ರೇಶ್, ರೇಣುಖಾ, ಜಗದೀಶ ತಮಟಿಗಿ, ದಯಾನಂದ, ಜೀವನ್, ತಾರಿಹಳ್ಳಿ ಜಂಬೂನಾಥ, ರಮೇಶ್ ಗುತ್ತಲ, ಸಂಜೀವ ರೆಡ್ಡಿ, ನಾಗೇಂದ್ರ, ದ್ವರಕೀಶ್ ನಗರಸಭೆ ಸದಸ್ಯರು ಇದ್ದರು