
ಬಿಜೆಪಿ ಸೋಲಿಸಿ ಎರಡನೇ ಬಾರಿಗೆ ಸ್ವತಂತ್ರ್ಯ ಪಡೆಯಬೇಕಾಗಿದೆ : ಶಾಸಕ ಭರತ್ ರೆಡ್ಡಿ
ಕರುನಾಡ ಬೆಳಗುನ ಸುದ್ದಿ
ಬಳ್ಳಾರಿ, 7- ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧಿ ಬ್ರೀಟೀಷರ ವಿರುದ್ಧ ಶಾಂತಿಯಿಂದ ಹೋರಾಡಿ ದೇಶಕ್ಕೆ ಸ್ವತಂತ್ರ್ಯ ತಂದುಕೊಟ್ಟರು, ಶಾಂತ ಸ್ವಾಭಾವದ ತುಕಾರಂ ರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದರೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ರಾಜ್ಯಕ್ಕೆ ತಂದು ರಾಜ್ಯದ ಅಭಿವೃದ್ಧಿ ಮಾಡುವರು, ಕಾರಣ ತುಕರಾಮ್ ಗೆ ಅಲ್ಲ, ಕಾಂಗ್ರೆಸ್ ಗಾಗಿ ಅಲ್ಲ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳುವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ನಗರ ಶಾಸಕ ಭರತ್ ರೆಡ್ಡಿ ಮತದಾರರಿಗೆ ಕರೆ ನೀಡಿದರು.
ಅವರು ಇಂದು ನಗರದ ಕಮ್ಮ ಭವನದಲ್ಲಿ ನಡೆದ ರೂಪನಗುಡಿ ಮತ್ತು ಬೆಳಗಲ್ ಗ್ರಾಮದ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಭರತ್, ಅಂದು ಗಾಂಧಿಜೀ ಅಹಿಂಸೆಯಿಂದ ಹೋರಾಡಿ ಬ್ರೀಟೀಷರಿಂದ ದೇಶಕ್ಕೆ ಸ್ವತಂತ್ರ್ಯ ತಂದುಕೊಟ್ಟರು ಇಂದು ನಾವು ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ತುಕಾರಾಮ್ ರವರನ್ನು ಗೆಲ್ಲಿಸಿ 2ನೇ ಭಾರಿಗೆ ಬಿ.ಜಿ.ಪಿಯಿಂದ ಸ್ವತಾಂತ್ರ್ಯ ಪಡೆಯಬೇಕಾದ ಅನಿರ್ವಾತೆಯಿದೆ, ಕಾರಣ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ತುಕಾರಾಂ ರವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಿ ಎಂದು ನಗರ ಶಾಸಕ ಭರತ್ ರೆಡ್ಡಿ ತಿಳಿಸಿದರು.
ಅತ್ಯಂತ ಉತ್ಸಾಹ ಮತ್ತು ವಿಶ್ವಾಸದಿಂದ ಮಾತನಾಡಿದ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತುಕರಾಂ, ಇತಿಹಾಸ ತಿಳಿದವರು ಮಾತ್ರ ಇತಿಹಾಸ ನಿರ್ಮಿಸಬಲ್ಲರು, ಬಿ.ಜೆ.ಪಿ ಗೆ ದೇಶದ ಇತಿಹಾಸ ಗೊತ್ತಿಲ್ಲ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಪಿ.ವಿ ನರಸಿಂಹರಾವ್ ದೇಶದ 140 ಕೋಟಿ ಜನರಿಗಾಗಿ ದುಡಿದು ದೇಶ ಕಟ್ಟಿದರು, ಬ್ಯಾಂಕ್ ಗಳ ರಾಷ್ಟ್ರೀಕರಣ, ಡಿಜಿಟಲ್ ಕ್ಷೇತ್ರದ ಪರಿಚಯ, ಜಾಗತಿಕರಣ, ಉದಾರೀಕರಣದಿಂದ ದೇಶದ ಆರ್ಥಿಕತೆಯನ್ನು ಸುಭದ್ರ ಸ್ಥಿತಿಯಲ್ಲಿಟ್ಟಿದ್ದರು ಇವರೆಲ್ಲರೂ ದೇಶಕ್ಕಾಗಿ ಉಸಿರು ನೀಡಿ ಹೆಸರಾದರು. ಮತ್ತು ವಿಶ್ವದ ಪ್ರಖ್ಯಾತ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಹೇಳಿದರೂ ಕೇಳದೆ ಬಿ.ಜೆ.ಪಿಯ ನರೇಂದ್ರ ಮೋದಿ ಭಾರತದ ಕರೆನ್ಸಿಗಳನ್ನು ಅಮಾನ್ಯೀಕರಣ ಮಾಡಿ ಅರ್ಥಿಕತೆಯ ಬಿಕ್ಕಟ್ಟು ಸೃಷ್ಟಿಸಿ ದೇಶವನ್ನು ಇಪ್ಪತ್ತು ವರ್ಷಗಳಷ್ಟು ಹಿಂದಕ್ಕೆ ಕೊಂಡೋಯ್ದರು ಅವರಿಗೆ ದೇಶದ ಇತಿಹಾಸ ಬೇಕಿಲ್ಲ ಪ್ರಜಾಪ್ರಭತ್ವ ಮತ್ತು ಸಂವಿಧಾನ ಬೇಕಿಲ್ಲ ಇತಿಹಾಸ ತಿಳಿದವರು ಇತಿಹಾಸ ಸೃಷ್ಟಿಸಬಲ್ಲರು ಎಂದು ಬಿ.ಜೆ.ಪಿ ಯನ್ನು ಲೇವಡಿ ಮಾಡಿದರು.
ದೇಶದ ಅಭವೃದ್ಧಿಗೆ ಕಾಂಗ್ರೆಸ್ ಪಕ್ಷ ಕಮಿಟ್ ಮೆಂಟ್ ನಿಂದ ಕೆಲಸ ಮಾಡುತ್ತದೆ. ಮತ್ತು ನರೇಗಾ, ಆಹಾರ ಭದ್ರತೆ ಸೇರಿದಂತೆ ಹಲವಾರು ಯೋಜನೆಗಳಿಂದ ದೇಶದ 140 ಕೋಟಿ ಜನಕ್ಕೆ ಅನುಕೂಲ ಮಾಡಿಕೊಟ್ಟಿದೆ, ಜೀವನಕ್ಕೆ ಭದ್ರತೆ ನೀಡಿದೆ, ಕಾಂಗ್ರೆಸ್ ಪಕ್ಷದ ಯೋಜನೆಗಳಿಂದ ಲಾಭ ಪಡೆದ ನಾವು ಈ ಚುನಾವಣೆಯಲ್ಲಿ ಅದರ ಋಣ ತೀರಿಸಿಬೇಕಿದೆ, ತಂದೆ ತಾಯಿ ಮತ್ತು ದೇಶದ ಋಣ ತೀರಿಸಲೇಬೇಕು ನೀವು ಈಗ ನಿಮ್ಮ ಮೇಲಿರುವ ಋಣವನ್ನು ತೀರಿಸಿಕೊಳ್ಳಿ ನೀವೆಲ್ಲಾ ಕೈ ಜೋಡಿಸಿದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 24 ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ನಾಗೇಂದ್ರ ಮಾತನಾಡಿ, ತುಕಾರಾಮ್ ಒಬ್ಬ ಸಂಭಾವಿತ ವ್ಯಕ್ತಿ ಮತ್ತು ರಾಜಕಾರಿಣಿಯಾಗಿದ್ದು ಅವರ ರಾಜಕೀಯ ಕ್ಷೇತ್ರದಲ್ಲಿ ಯಾವೊಂದು ಕಪ್ಪು ಚುಕ್ಕೆಯಿಲ್ಲದೆ ಕೆಲಸ ಮಾಡಿದ್ದಾರೆ, ಅವರು ಶಾಸಕರಾದಾಗ ಮತ್ತು ಸಚಿವರಾದಾಗ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವ್ನು ತಂದು ಅಭಿವೃದ್ದಿ ಮಾಡಿದ್ದಾರೆ. ಇಂತ ಸಂಭಾವಿತನನ್ನು ಲೋಕಸಭೆಗೆ ಆರಿಸಿಕಳಿಸುವುದು ನಮ್ಮ ನಿಮ್ಮಲ್ಲರ ಜವಬ್ಧಾರಿ, ಇದರಿಂದ ಈ ಭಾಗದ ಕೇಂದ್ರದ ಯೋಜನೆಗಳನ್ನು ಜಾರಿಗೆ ತಂದು ಬಳ್ಳಾರಿಯನ್ನು ಅಭಿವೃದ್ಧಿ ಮಾಡಬಲ್ಲರೆಂದರು.
ಎದುರಾಳಿ ಯಾರಾದರೂ ಆಗಲಿ ನಮಗೇನು ಭಯವಿಲ್ಲ, ನಮಗೆ ಕೇವಲ ನಮ್ಮ ಅಭ್ಯರ್ಥಿಯನ್ನಷ್ಟೆ ಗೆಲ್ಲಿಸುವುದು ಮುಖ್ಯ, ಕಾರ್ಯಕರ್ತರು ಯಾರಿಗೂ ಭಯಬೀಳಬೇಕಿಲ್ಲ ನಿಮ್ಮ ಹಿಂದೆ ನಾನು ಮತ್ತು ಪಕ್ಷದ ಮುಖಂಡರಿದ್ದಾರೆ ಧೈರ್ಯದಿಂದ ಚುನಾವಣೆ ಎದರುಸಿ ತುಕಾರಾಮ್ ಅಣ್ಣನನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ರಾಜ್ಯ ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿಯವರ ಮೊಮ್ಮಗನ ಪತ್ನಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಕವಿತಾ ಕೆ.ಸಿ ರೆಡ್ಡಿ, ಮಾಜಿ ಕೆ.ಪಿ.ಸಿ.ಸಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಡಿ.ಸಿ.ಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಶಾಕರಾದ ಭರತ್ ರೆಡ್ಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ಎಲ್ ಸ್ವಾಮಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹೂಮಾಯೂನ್ ಖಾನ್, ಬಾಬು ಜಗಜೀವನ್ ರಾಮ್ ಚರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಮುಖಂಡ ಎ ಮಾನಯ್ಯ, ವೆಂಕಟೇಶ್ ಪ್ರಸಾದ್, ಕಲ್ಲುಕಂಬ ಪಂಪಾಪತಿ, ಹುಸೇನ್ ಪೀರಾ, ಮೇಯರ್ ಬಿ ಶ್ವೇತಾ, ಉಪ ಮೇಯರ್ ಜಾನಕಮ್ಮ, ಮತ್ತು ಪಾಲಿಕೆಯ ಸದಸ್ಯರಾದ ವಿವೇಕ್, ಪಿ ಗಾದೆಪ್ಪ, ರಾಮಾಂಜಿನಿ, ಮೀಂಚು ಶ್ರೀನಿವಾಸ್, ಕುಬೇರಾ,ಆಸೀಫ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲ್ಲಾ ಬಕಾಶ್, ಮುಖಂಡರಾದ ಅಸುಂಡಿ ವಂಡ್ರಿ, ಬಿ ರಾಂಪ್ರಸಾದ್, ಎಲ್. ಮಾರೆಣ್ಣ, ಮಂಡ್ಲೂರ್ ಶ್ರೀಧರ್, ಎಲ್ ಗಾದಿಲಿಂಗನಗೌಡ, ನಾಮ ನಿರ್ದೇಶಿತ ಸದಸ್ಯರಾದ ಭರತ್, ರಂಜಿತ್, ಶಾಂತಿ, ಮತ್ತು ಪಕ್ಷದ ಮುಖಂಡರಾದ ಗೋನಾಳ್ ವಿರುಪಾಕ್ಷಿ ಗೌಡ, ನಾಗಭೂಷಣಗೌಡ, ಯಾಳ್ಪಿ ಪಂಪನಗೌಡ, ದಿವಾಕರ್ ಗೌಡ, ಆಯಾಜ್ ಪಾಷಾ, ಗುಮ್ಮನೂರು ಜಗನ್,ಶಿವಕುಮಾರ್,ಕನೇಕಲ್ ಮಾಭುಸಾಬ್,ಮೀನಳ್ಳಿ ಪಲಾಕ್ಷಿ,ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಇದ್ದರು.
ಕಾರ್ಯಕ್ರಮವನ್ನು ಬೋಯಪಾಟಿ ವಿಷ್ಣುವರ್ಧನ್ ನಿರೂಪಿಸಿದರು, ಅಲ್ಲಂ ಪ್ರಶಾಂತ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ (ನಗರ) ಅಧ್ಯಕ್ಷರಾಗಿ ಅಲ್ಲಂ ಪ್ರಶಾಂತ್ ಪದಗ್ರಹಣ ಮಾಡಿದರು.
ಏಪ್ರಿಲ್ 12ಕ್ಕೆ ತುಕಾರಾಮ್ ನಾಮಪತ್ರ ಸಲ್ಲಿಸಲಿದ್ದಾರೆ, ಪಕ್ಷದ ಎಲ್ಲಾ ಮುಖಂಡರು ಹಾಜರಾಗಬೇಕೆಂದು ಸೂಚಿಸಿದರು.