
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರು ಕಾಂಗ್ರೆಸ್‌ಗೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೮- ಬರುವ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ಕೆಲವರು ನನ್ನೊಂದಿಗೂ ಸಂಪರ್ಕದಲ್ಲಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಅವರು ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಪಕ್ಷಕ್ಕೆ ಬರುವ ಶಾಸಕರ ಹೆಸರು ಹೇಳಲು ಈಗಿನ್ನು ಕಾಲ ಪಕ್ವವಾಗಿಲ್ಲ. ಇದು ರಾಜಕಾರಣದ ಶಕ್ತಿಯ ಆಟ. ಯಾವಾಗ ಹೇಳಬೇಕೊ ಆವಾಗ ಹೇಳುತ್ತೇನೆ’ ಎಂದರು.ನನ್ನ ಜೋತೆ ಸಂಪರ್ಕದಲ್ಲಿರುವ ಬೇರೆ ಶಾಸಕರ ಹೆಸರು ಹೇಳಿದರೆ ಅವರಿಗೆ ಕಷ್ಟವಾಗುತ್ತದೆ. ಚುನಾವಣೆ ಹತ್ತಿದ ಬಂದಾಗ ನಿಮಗೇ ಎಲ್ಲ ಗೊತ್ತಾಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಲೂಟಿಕೋರ ಎಂದು ಕೆ.ಎಸ್. ಈಶ್ವರಪ್ಪ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ಈಶ್ವರಪ್ಪ ಅವರ ವಯಸ್ಸಿಗೆ ಸರಿಯಾದ ನಡವಳಿಕೆಯಿಲ್ಲ ಇದನ್ನು ಜನ ಕೂಡ ಒಪ್ಪುವುದಿಲ್ಲ ಎಂದು ತಿಳಿಸಿದರು.