4224aba6-f9d2-4f9f-a351-26ffbd35521d

ಬಿಸಲಹಳ್ಳಿ :ವಿದ್ಯಾರ್ಥಿಗಳಿಗೆ  ಸಮಯಕ್ಕೆ

ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೬- ಎಐಡಿಎಸ್ಓ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬಳ್ಳಾರಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಕೆ.ಕೆ.ಎಸ್.ಆರ್.ಟಿ.ಸಿ ವಿಭಾಗದ ಮುಂದೆ ಪ್ರತಿಭಟನೆ ಮಾಡಿ ವಿಭಾಗದ ಮುಖ್ಯಸ್ಥರಿಗೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯರು ನಿಹಾರಿಕ.ಆರ್ ಅವರು ಮಾತನಾಡುತ್ತಾ, ಬಿಸಲಹಳ್ಳಿ ಗ್ರಾಮದಿಂದ ನಗರಕ್ಕೆ ಪ್ರತಿನಿತ್ಯ ಶಿಕ್ಷಣಕ್ಕಾಗಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದು, ಆದರೆ ಒಂದೇ ಒಂದು ಬಸ್ ಕೂಡ ಸರಿಯಾದ ಸಮಯಕ್ಕೆ ಇಲ್ಲದೆ ಕಾರಣ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಇದುವರೆಗೆ ಬಿಸಲಹಳ್ಳಿ ಗ್ರಾಮಕ್ಕೆ ಒಂದು ಬಸ್ ವ್ಯವಸ್ಥೆ ಕೂಡ ಇಲ್ಲ, ಹೀಗಾದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣ ಕನಸು, ಕುಂಠಿತವಾಗುತ್ತದೆ. ಆದ್ದರಿಂದ ಬಿಸಲಹಳ್ಳಿ ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಬೆಳಿಗ್ಗೆ 8.30ಕ್ಕೆ, 9ಕ್ಕೆ ಮತ್ತು ಬಳ್ಳಾರಿಯಿಂದ ಮದ್ಯಾಹ್ನ 3.30ಕ್ಕೆ, 4ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.

“ಮನವಿ ಸ್ವೀಕರಿಸಿದ ವಿಭಾಗದ ವ್ಯವಸ್ಥಾಪಕರು ಈರಮ್ಮ ಅವರು ಮಾತನಾಡಿನಾಲ್ಕು ದಿನಗಳ ಕಾಲಾವಕಾಶ ತೆಗೆದುಕೊಂಡು ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ”

ಈ ಸಂದರ್ಭದಲ್ಲಿ ಎಐಡಿಎಸ್ಓ ಸೆಕ್ರೆಟರಿಯೇಟ್ ಸದಸ್ಯರು ಪ್ರಮೋದ್ ಮತ್ತು ಈರಣ್ಣ, ಅಂಜಲಿ, ಮೌನೇಶ್ ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!